

ಕಾರ್ಕಳ, ಅ.10: ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಮೂರು ಸ್ತರಗಳ ಆಡಳಿತ ವ್ಯವಸ್ಥೆಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಕ್ಷೇತ್ರವಾರು ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ರಾಜಕೀಯ ಪಕ್ಷಗಳ ಕಾರ್ಯಕತರ್ಯರಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ಒಟ್ಟು 6 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಹಾಗೂ ಹೆಬ್ರಿ ತಾಲೂಕು ಪಂಚಾಯಿತಿಯ 7 ಕ್ಷೇತ್ರಗಳು ಹಾಗೂ ಕಾರ್ಕಳ ತಾಲೂಕು ಪಂಚಾಯಿತಿಯ 16 ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಜಿ.ಪಂ ಕ್ಷೇತ್ರವಾರು ಮೀಸಲಾತಿ ಪಟ್ಟಿ:
ಹೆಬ್ರಿ: ಸಾಮಾನ್ಯ(ಮಹಿಳೆ), ಚಾರ:ಹಿಂದುಳಿದ `ಬ’ ವರ್ಗ, ಮರ್ಣೆ:ಸಾಮಾನ್ಯ, ಬೈಲೂರು: ಹಿಂದುಳಿದ `ಅ’ ವರ್ಗ, ಮಿಯ್ಯಾರು : ಅನುಸೂಚಿತ ಜಾತಿ(ಮಹಿಳೆ) ಹಾಗೂ ಬೆಳ್ಮಣ್ : ಸಾಮಾನ್ಯ
ಹೆಬ್ರಿ ತಾಲೂಕು ಪಂಚಾಯತ್ ಕ್ಷೇತ್ರವಾರು ಮೀಸಲಾತಿ ಪಟ್ಟಿ:
ಹೆಬ್ರಿ : ಸಾಮಾನ್ಯ, ಮುದ್ರಾಡಿ : ಹಿಂದುಳಿದ `ಅ’ ವರ್ಗ(ಮಹಿಳೆ), ವರಂಗ : ಅನುಸೂಚಿತ ಜಾತಿ(ಮಹಿಳೆ), ಶಿವಪುರ : ಸಾಮಾನ್ಯ, ಚಾರ: ಅನುಸೂಚಿತ ಪಂಗಡ(ಮಹಿಳೆ), ಬೆಳ್ವೆ : ಸಾಮಾನ್ಯ(ಮಹಿಳೆ), ಶೇಡಿಮನೆ : ಸಾಮಾನ್ಯ
ಕಾರ್ಕಳ ತಾಲೂಕು ಪಂಚಾಯತ್ ಕ್ಷೇತ್ರವಾರು ಮೀಸಲಾತಿ ಪಟ್ಟಿ:
ಕಡ್ತಲ : ಹಿಂದುಳಿದ `ಅ’ ವರ್ಗ, ಮರ್ಣೆ : ಅನುಸೂಚಿತ ಪಂಗಡ(ಮಹಿಳೆ), ಹಿರ್ಗಾನ ; ಸಾಮಾನ್ಯ(ಮಹಿಳೆ), ಕೌಡೂರು: : ಸಾಮಾನ್ಯ, ಕಲ್ಯಾ : ಹಿಂದುಳಿದ `ಅ’ ವರ್ಗ, ಕುಕ್ಕುಂದೂರು ; ಸಾಮಾನ್ಯ(ಮಹಿಳೆ), ಕೆರ್ವಾಶೆ : ಸಾಮಾನ್ಯ, ಮಾಳ : ಅನುಸೂಚಿತ ಜಾತಿ(ಮಹಿಳೆ), ಮುಡಾರು : ಸಾಮಾನ್ಯ, ನಿಟ್ಟೆ : ಸಾಮಾನ್ಯ, ಬೆಳ್ಮಣ್ಣು : ಹಿಂದುಳಿದ `ಅ’ ವರ್ಗ(ಮಹಿಳೆ), ಬೋಳ : ಸಾಮಾನ್ಯ(ಮಹಿಳೆ), ಸಾಣೂರು : ಹಿಂದುಳಿದ `ಬ’ ವರ್ಗ(ಮಹಿಳೆ), ಮಿಯ್ಯಾರು : ಅನುಸೂಚಿತ ಜಾತಿ, ನಲ್ಲೂರು : ಹಿಂದುಳಿದ `ಅ’ ವರ್ಗ(ಮಹಿಳೆ), ಮುಂಡ್ಕೂರು : ಸಾಮಾನ್ಯ
ಮೀಸಲಾತಿ ಪಟ್ಟಿ ಪ್ರಕಟವಾದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿನ ಕಾರ್ಯಕರ್ತರಲ್ಲಿ ಉತ್ಸಾಹ ಚಿಗುರಿದ್ದು, ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಓಡಾಟ ಆರಂಭಿಸಿದ್ದು, ಚುನಾವಣೆಗೆ ಸ್ಪರ್ಧಿಸಲು ನಾಯಕರ ದುಂಬಾಲು ಬೀಳುತ್ತಿದ್ದಾರೆ. ಒಟ್ಟಿನಲ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು, ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟವಾದ ಬಳಿಕ ಚುನಾವಣಾ ಕಣ ಮತ್ತಷ್ಟು ರಂಗು ಪಡೆಯಲಿದೆ.





.
.
.
.
.
.
.
.
.
.
.
.
.
.
.
.
.
.
.
.
