

ನವದೆಹಲಿ,ಅ.20: ಸರ್ಕಾರಿ ಸಿಬ್ಬಂದಿಯೊಬ್ಬನ ವಿರುದ್ಧದ ಲಂಚ ಪ್ರಕರಣದ ತನಿಖೆ ಆರಂಭಿಸುವ ತನಿಖಾಧಿಕಾರಿಗೆ ಪೂರ್ನಾನುಮತಿಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17 ಎ ಪ್ರಕಾರ, ಸರ್ಕಾರಿ ನೌಕರರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವಾಗ ಪೂರ್ವಾನುಮತಿ ಪಡೆಯುವ ಅವಕಾಶವಿದೆ. ಆದರೆ, 2018ರಲ್ಲಿ ತಿದ್ದುಪಡಿಯಾದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಲಂಚ ಪ್ರಕರಣಗಳ ತನಿಖೆ ವೇಳೆ ಪೂರ್ವಾನುಮತಿ ಬೇಕಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಈ ಮೂಲಕ, ಲಂಚದ ಪ್ರಕರಣವೊಂದರಲ್ಲಿ ಪೂರ್ವಾನುಮತಿಯಿಲ್ಲದೆ ತಮ್ಮ ವಿರುದ್ಧ ಲಂಚದ ಆರೋಪ ಪಟ್ಟಿ ಸಲ್ಲಿಸಿರುವುದನ್ನು ಪ್ರಶ್ನಿಸಿ ರಾಜಸ್ಥಾನದ ಪೊಲೀಸ್ ಪೇದೆ ತೇಜಾರಾಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
2018ರಲ್ಲಿ ತಿದ್ದುಪಡಿಯಾದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಲಂಚದ ಪ್ರಕರಣಗಳ ತನಿಖೆ ನಡೆಸುವಾಗ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬಲವಾಗಿ ಪ್ರತಿಪಾದಿಸಿದೆ. ಲಂಚ ಸ್ವೀಕರಿಸುವುದು ಅಧಿಕೃತ ಕರ್ತವ್ಯದ ಭಾಗವಾಗಲು ಸಾಧ್ಯವಿಲ್ಲದ ಕಾರಣ, ಇಂತಹ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಈ ಮಹತ್ವದ ತೀರ್ಪಿನೊಂದಿಗೆ, ಪೂರ್ವಾನುಮತಿಯಿಲ್ಲದೆ ತಮ್ಮ ವಿರುದ್ಧ ಲಂಚದ ಆರೋಪಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿರುವುದನ್ನು ಪ್ರಶ್ನಿಸಿ ರಾಜಸ್ಥಾನದ ಪೊಲೀಸ್ ಪೇದೆ ತೇಜಾರಾಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಆದೇಶವು ಭ್ರಷ್ಟಾಚಾರ ನಿಗ್ರಹ ತನಿಖೆಗಳಿಗೆ ಹೆಚ್ಚಿನ ಬಲ ತುಂಬಿದ್ದು, ಸರ್ಕಾರಿ ನೌಕರರ ವಿರುದ್ಧದ ಲಂಚ ಪ್ರಕರಣಗಳ ತನಿಖೆಯನ್ನು ಇನ್ನಷ್ಟು ಶೀಘ್ರಗೊಳಿಸಲು ನೆರವಾಗಲಿದೆ.






.
.
.
.
.
.
.
.
.
.
.
.
.
.
.
.
.
.
.
.
