

ಬೆಂಗಳೂರು, ಅ.24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಾದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬAಧಿಸಿದAತೆ ಸಿಸಿಬಿ (ನಗರ ಅಪರಾಧ ವಿಭಾಗ) ಅಧಿಕಾರಿಗಳು ದೆಹಲಿ ಮೂಲದ ರಿತೇಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಸ್ಟಿಂಗ್ ಕಾರ್ಯಾಚರಣೆ ನಡೆಸುವ ಉದ್ದೇಶದಿಂದಲೇ ಸೆಕೆಂಡ್ ಹ್ಯಾಂಡ್ ಮೊಬೈಲ್ ಫೋನ್ ಒಂದನ್ನು ಖರೀದಿಸಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬಹಿರಂಗಗೊAಡಿದೆ.
ರಿತೇಶ್ಗೂ ಮತ್ತು ಕರ್ನಾಟಕದಲ್ಲಿ ನಡೆದ ಸ್ಟಿಂಗ್ ಆಪರೇಷನ್ಗೂ ಏನು ಸಂಬAಧ, ಈ ಕೃತ್ಯವನ್ನು ಮಾಡಲು ಆತನಿಗೆ ಯಾರು ಪ್ರೇರಣೆ ನೀಡಿದರು, ಯಾರು ಹಣಕಾಸು ಒದಗಿಸಿದರು, ಹಾಗೂ ಈ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸಲು ಆತ ಬಳಸಿದ ಹಣ ಎಲ್ಲಿಂದ ಬಂತು ಎಂಬ ಕುರಿತು ಸಿಸಿಬಿ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಈತನ ಗ್ಯಾಂಗ್ನಲ್ಲಿ ಇನ್ನು ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿತೇಶ್ ವಿಚಾರಣೆಯಿಂದ ಈ ಸ್ಟಿಂಗ್ ಆಪರೇಷನ್ ಹಿಂದಿರುವ ದೊಡ್ಡ ಜಾಲ ಮತ್ತು ಅದರ ರೂವಾರಿಗಳ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಬಳಸಿಕೊಂಡು ನಡೆದ ಈ ಪ್ರಕರಣದ ಸತ್ಯಾಂಶವು ಹಂತಹAತವಾಗಿ ಬಹಿರಂಗವಾಗಲಿದೆ.





.
.
.
.
.
.
.
.
.
.
.
.
.
.
.
.
.
.
.
.
