

ಕಾರ್ಕಳ,ಅ.27: ಕಾರ್ಕಳ ತಾಲೂಕು ನಿಂಜೂರು ಗ್ರಾಮದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಕೆಲಸಕ್ಕೆಂದು ಹೋದವನು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿಂಜೂರಿನ ಅಕ್ಷಯ ಆಚಾರ್ಯ(30) ಅವರು ಬೆಂಗಳೂರಿನ ಹೋಟೆಲೊಂದರಲ್ಲಿ ಅಕೌಟೆಂಟ್ ಆಗಿ ಕೆಲಸ ಮಾಡುತ್ತಿದ್ದು ಅ.17ರಂದು ಮನೆಗೆ ಬಂದಿದ್ದರು. ಮನೆಯಲ್ಲಿದ್ದ ವೇಳೆ ಕೆಲಸಕ್ಕೆ ಬರುವಂತೆ ಹೋಟೆಲ್ ಮಾಲೀಕರು ಕರೆ ಮಾಡಿದ್ದ ಕಾರಣ ಮನೆಯಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಬೆಂಗಳೂರಿಗೆ ಕೆಲಸಕ್ಕೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
