Share this news

ಬೆಂಗಳೂರು, ಅ.25: ಇತ್ತೀಚೆಗೆ ಬೆಂಗಳೂರಿನ ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಬ್ಲಾಸ್ಟ್ ಆಗಿದ್ದು, ಸ್ಫೋಟದಿಂದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದರು. ಸ್ಫೋಟದ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾದ ಹಿನ್ನೆಲೆ ಎನ್‌ಐಎ ಕೂಡ ಎಂಟ್ರಿ ಕೊಟ್ಟಿತ್ತು. ಇದೀಗ ಈ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಾಂಬ್ ಬ್ಲಾಸ್ಟ್ ಹಿಂದಿನ ರಹಸ್ಯ ಬಯಲಾಗಿದೆ. ಪುಲಕೇಶಿನಗರ ಪೊಲೀಸರು ಪ್ರಕರಣವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಲಾಲುದ್ದೀನ್, ಸೈದುಲಾ ಇಸ್ಲಾಂ, ಬುರ್ಹಾನ್ ಬಂಧಿತ ಆರೋಪಿಗಳು. ಇನ್ನು ವೈಯಕ್ತಿಕ ದ್ವೇಷದಿಂದ ಈ ಕೃತ್ಯವೆಸಗಿರುವುದು ತನಿಖೆಯಿಂದ ಬಯಲಾಗಿದೆ.

ಜಲಾಲುದ್ದೀನ್, ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಇಬ್ಬರು ಅಸ್ಸಾಂ ಮೂಲದವರಾಗಿದ್ದು, ಮೊದಲಿನಿಂದಲೂ ವೈಷಮ್ಯ ಹೊಂದಿದ್ದರು. ಹುಡುಗಿ ಮನೆಯವರಿಗೆ ಜಲಾಲುದ್ದೀನ್ ಸರಿಯಿಲ್ಲ ಅಂತ ಅಲ್ಲಾವುದ್ದೀನ್ ಹೇಳಿದ್ದ. ಅದೇ ದ್ವೇಷದಿಂದ ಜಲಾಲುದ್ದೀನ್ ಕೃತ್ಯವೆಸಗಿದ್ದಾನೆ. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರತಿಕ್ರಿಯಿಸಿದ್ದು, ‘ದಸರಾ ಹಿಂದಿನ ದಿನ ರಾತ್ರಿ ಈ ಘಟನೆ ನಡೆದಿತ್ತು. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗಿತ್ತು. ಪ್ರಕರಣದ ತನಿಖೆಗೆ 10ಕ್ಕೂ ಹೆಚ್ಚು ಪೊಲೀಸ್ ತಂಡ ರಚಿಸಲಾಗಿತ್ತು. ರಾಯಚೂರು, ಅಸ್ಸಾಂ ಪೊಲೀಸರು ತನಿಖಾ ಕೆಲಸ ಮಾಡಿದ್ದಾರೆ. ಪ್ರಕರಣ ಸಂಬAಧ 1500 ಸಿಸಿಟಿವಿಗಳ ಪರಿಶೀಲನೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಜನರ ವಿಚಾರಣೆ ಸಹ ಮಾಡಲಾಗಿದೆ. ಇದು ವೈಯಕ್ತಿಕ ಕಾರಣಕ್ಕೆ ಬ್ಲಾಸ್ಟ್ ಮಾಡಿರುವುದು ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿದರು.
ಹಣಕಾಸು ವ್ಯವಹಾರ ಹಾಗೂ ವೈಯಕ್ತಿಕ ವಿಚಾರಕ್ಕೆ ಗಲಾಟೆ ಇತ್ತು. ಆ ಕಾರಣಕ್ಕೆ ಪ್ಲ್ಯಾನ್ ಮಾಡಿ ಈ ಕೆಲಸ ಮಾಡಿದ್ದಾರೆ. ಇಂಟರ್‌ನೆಟ್ ಮೂಲಕ ಆರೋಪಿ ಬಾಂಬ್ ತಯಾರಿಸಿದ್ದಾನೆ. ಆರೋಪಿ 8ನೇ ತರಗತಿಯ ತನಕ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾನೆ. ಆದರೆ ಇಂಟರ್‌ನೆಟ್, ಎಐ, ಮೊಬೈಲ್ ಬಳಕೆ ತಿಳಿದುಕೊಂಡಿದ್ದಾರೆ’ ಎಂದು ಅವರು ಸ್ಫೋಟಕ ಮಾಹಿತಿ ನೀಡಿದರು.

ಬುರ್ಹಾನ್ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬಾಂಬ್ ತಯಾರು ಮಾಡಿದ್ದ. ಬಳಿಕ ಸೈದುಲಾ ಇಸ್ಲಾಂ, ಜಲಾಲುದ್ದೀನ್ ಮೂಲಕ ಬಾಂಬ್ ಕೊಡಿಸಿದ್ದ. ಫ್ಯೂಸ್ ಅಳವಡಿಸದೆ ಮಸ್ಕಿಯಿಂದ ಬೆಂಗಳೂರಿಗೆ ಬಸ್ ಮೂಲಕ ಬಾಂಬ್ ತಂದಿದ್ದ. ಬಳಿಕ ಫ್ಯೂಸ್ ಅಳವಡಿಸಿ ಬಾಂಬ್ ನ್ನು ಅಲ್ಲಾವುದ್ದೀನ್ ಗೆ ನೀಡಿದ್ದ. ಆದರೆ ಅಲ್ಲಾವುದ್ದೀನ್‌ಗೆ ನೀಡಿದ್ದ ಬಾಕ್ಸ್ ಅನ್ನು ಸೂರಜ್ ಓಪನ್ ಮಾಡಿದ್ದ. ಸೂರಜ್ ಬಾಕ್ಸ್ ತೆರೆದು ಸ್ವಿಚ್ ಆನ್ ಮಾಡಿದಾಗ ತಕ್ಷಣ ಬ್ಲಾಸ್ಟ್ ಆಗಿದೆ. ಇನ್ನು ಕೃತ್ಯವೆಸಗಿರುವ ಜಲಾಲುದ್ದೀನ್ ಅಲಿಯಾಸ್ ಜಾಹಿದ್‌ವುಲ್ ಹುಸೇನ್ ಎಲೆಕ್ಟ್ರಿಕಲ್ ಮತ್ತು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಆತನಿಗೆ ಸರ್ಕ್ಯೂಟ್ ಮತ್ತು ಬಾಂಬ್ ತಯಾರಿಸುವ ಮಾಹಿತಿ ಇತ್ತು. ಎಐ ಮೂಲಕ ಬಾಂಬ್ ತಯಾರಿಸುವುದನ್ನು ಕಲಿತುಕೊಂಡಿದ್ದ

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *