

ಕಾರ್ಕಳ,ಅ.25: ಕಾರಿಗೆ ಪಿಕಪ್ ಡಿಕ್ಕಿಯಾಗಿ ಕಾರು ಚಾಲಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಾಣೂರು ಗ್ರಾಮದ ಪುಲ್ಕೇರಿಯಲ್ಲಿ ಶನಿವಾರ (ಅ.24) ನಡೆದಿದೆ.
ಬೆಳ್ತಂಗಡಿಯ ಅರುಣ ಡಿಸೋಜ ಎಂಬವರು ತಮ್ಮ ಕಾರಿನಲ್ಲಿ ಪುಲ್ಕೇರಿಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದಾಗ ಪುಲ್ಕೇರಿ ಬಳಿ ಸಾಣುರು ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಪಿಕಪ್ ಡಿಕ್ಕಿಯಾಗಿದೆ. ಅಪಘಾತದಿಂದ ಅರುಣ ಡಿಸೋಜ ಅವರಿಗೆ ಎದೆಗೆ ಗುದ್ದಿದ ನೋವಾಗಿದ್ದು ಚಿಕಿತ್ಸೆಗಾಗಿ ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊAಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
