

ಕಾರ್ಕಳ,ಅ.29: ಕಾರ್ಕಳ ತಾಲೂಕಿನ ನಕ್ರೆಯ ಜೆ.ಬಿ ಕೊಕನಟ್ ಇಂಡಸ್ಟ್ರೀ ಹೊರಗಡೆ ನಿಲ್ಲಿಸಿದ್ದ ಪಿಕಪ್ ಚಲಾಯಿಸಿ ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅ.27 ರಂದು ಈ ದುರ್ಘಟನೆ ನಡೆದಿದ್ದು, ಪ್ರಸಾದ್ ಪೂಜಾರಿ ಎಂಬಾತ ಇಂಡಸ್ಟ್ರೀ ಹೊರಗಡೆ ನಿಲ್ಲಿಸಿದ್ದ ಪಿಕಪ್ ಅನ್ನು ಯಾವುದೇ ಮುಂಜಾಗ್ರತೆ ವಹಿಸದೆ ಏಕಾಏಕಿ ಚಲಾಯಿಸಿದಾಗ ಕಟ್ಟಡದ ಒಳಗೆ ನುಗ್ಗಿದೆ. ಈ ವೇಳೆ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಒಳಗಡೆ ಇದ್ದ ದಿನೇಶ್ ಕುಮಾರ್ ಎಂಬವರಿಗೆ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
