

ಬೆಂಗಳೂರು,ಅ.31: ನಂದಿನಿ ಹಾಲಿನ ಬೆಲೆ ಏರಿಕೆಯ ಬಿಸಿಯ ನಡುವೆ ಇದೀಗ ಏಕಾಎಕಿ ನಂದಿನಿ ಮೊಸರಿನ ಬೆಲೆಯನ್ನು ಲೀಟರ್ ಗೆ ಬರೋಬ್ಬರಿ 14 ರೂಗೆ ಹೆಚ್ಚಳ ಮಾಡಲಾಗಿದ್ದು ಪರಿಷ್ಕೃತ ದರಗಳು ನ.1 ರಿಂದ ಜಾರಿಗೆ ಬರಲಿವೆ. ದೈನಂದಿನ ಜೀವನದಲ್ಲಿ ಬಳಕೆಯಾಗುವ ಹಾಲು ಮತ್ತು ಮೊಸರಿನ ದರ ಏರಿಕೆಯಿಂದಾಗಿ ಸಾರ್ವಜನಿಕರು ಹಾಗೂ ಗೃಹಿಣಿಯರ ಜೇಬಿಗೆ ಕತ್ತರಿ ಬೀಳಲಿದ್ದು, ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
1 ಲೀಟರ್ ಮೊಸರಿನ ಬೆಲೆ ಪ್ರಸ್ತುತ 54 ರೂ ಇದ್ದು, ಬೆಲೆ ಹೆಚ್ಚಳದಿಂದ 68 ಕ್ಕೆ ಏರಿಕೆಯಾಗಿದೆ. ಅಂದರೆ ಒಂದು ಲೀಟರ್ ಮೊಸರಿನ ಮೇಲೆ ಬರೋಬ್ಬರಿ 14 ರೂಪಾಯಿ ಹೆಚ್ಚಳ ಮಾಡಿದಂತಾಗಿದೆ. ಅದೇ ರೀತಿ ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಬೆಲೆ ರೂ. 28 ರಿಂದ ರೂ. 34 ಕ್ಕೆ ಹೆಚ್ಚಳವಾಗಿದ್ದು, 7 ಹೆಚ್ಚುವರಿ ಹೊರೆ ಬಿದ್ದಿದೆ.
ಹಾಲಿನ ಬೆಲೆ ಏರಿಕೆ ರೈತರಿಗೆ ಲಾಭ ಎಂದಿದ್ದ ಸರ್ಕಾರ ಇದೀಗ ಮೊಸರಿನ ಬೆಲೆ 14 ರೂ ಹೆಚ್ಚಳ ಮಾಡಿ ಯಾರಿಗೆ ಲಾಭ ಆಗುತ್ತಿದೆ ಎಂದು ಜನರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
