

ಕಾರ್ಕಳ,ನ.1 : ಒಂದು ದೇವಾಲಯ ಜೀರ್ಣೋದ್ದಾರ ಆಗಬೇಕಾದರೇ, ಕ್ಷೇತ್ರದ ಮೊಕ್ತೇಸರ ಓರ್ವ ಇದ್ದರೇ ಕ್ಷೇತ್ರ ಅಭಿವೃದ್ದಿ ಸಾಧ್ಯವಿಲ್ಲ. ಎಲ್ಲರೂ ಜೊತೆಯಾಗಿ ಕ್ಷೇತ್ರದ ಅಭಿವೃದ್ದಿಗಾಗಿ ದುಡಿದಾಗ ಕ್ಷೇತ್ರದ ಅಭಿವೃದ್ದಿ ಸಾಧ್ಯ. ನಂದಳಿಕೆಯ ಮಣ್ಣಿನಲ್ಲಿ ಇದು ನಮ್ಮ ಮನೆಯ ದೇಗುಲ ಎಂದು ಎಲ್ಲರೂ ಜೊತೆಯಾಗಿ ದುಡಿಯುತ್ತಿರುವುದು ಶ್ಲಾಘನೀಯ. ಎಂದು ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಅಂಗವಾಗಿ ಕ್ಷೇತ್ರದಲ್ಲಿ ಭಾನುವಾರ ನಡೆದ ಶಿಲಾಮಯ ಮುಹೂರ್ತ, ಮತ್ತು ದಾರು ಮುಹೂರ್ತ, ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವ ಕೆಲಸಗಳನ್ನು ಮಠ ಮಂದಿರಗಳು ಮಾಡುತ್ತಿದೆ. ಒಂದು ಸರ್ಕಾರಕ್ಕೆ ಆಗದ ಅದೆಷ್ಟೋ ಕೆಲಸಗಳನ್ನು ದೇವಾಲಯಗಳು ಮಾಡುತ್ತಿವೆ. ದೇವಾಲಯ ಜೀರ್ಣೋದ್ದಾರ ಆಗಬೇಕಾದರೇ ಇಚ್ಛಾಶಕ್ತಿ, ಪ್ರಯತ್ನ, ಪ್ರಮಾಣಿಕತೆ, ಶ್ರದ್ದೆ ಬೇಕು ಆಗ ಮಾತ್ರ ದೇಗುಲದ ಅಭಿವೃದ್ದಿ ಸಾಧ್ಯ ಎಂದರು.
ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ನಂದಳಿಕೆ ಸಿರಿ ಜಾತ್ರೆಯಿಂದ ಈ ದೇಗುಲ ದೊಡ್ಡ ಪ್ರಮಾಣದ ಭಕ್ತರನ್ನು ಆಕರ್ಷಿಸುತ್ತಿದೆ. ಆಡಂಬರ ಇಲ್ಲದೇ ಪಾರಂಪರಿಕತೆಯನ್ನು ಉಳಿಸಿಕೊಂಡು ಅಭಿವೃದ್ದಿಯನ್ನು ಪಡೆಯುತ್ತಿರುವ ಕ್ಷೇತ್ರದ ಕಾರ್ಯಕ್ಕೆ ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿಯೂ ಸಹಕಾರ ನೀಡಲು ಸಿದ್ದ ಎಂದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣಧಾಮ ಕೃಷ್ಣ ಪ್ಯಾಲೇಸ್ ಮುಂಬೈನ ಉದ್ಯಮಿ ಕೃಷ್ಣ ವೈ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಂದಳಿಕೆ ಚಾವಡಿ ಅರಮನೆ ಪ್ರದೀಪ್ ಹೆಗ್ಡೆ , ಕಾರ್ಯಾಧ್ಯಕ್ಷ ಶ್ರೀಕಾಂತ್ ರಾವ್ ನಂದಳಿಕೆ, ದೇವಳದ ತಂತ್ರಿವರ್ಯರಾದ ಮಧ್ವೇಶ್ ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಬೆಳ್ಮಣ್ ದೇವಾಲಯ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್ ಬೆಳ್ಮಣ್, ನಂದಳಿಕೆ ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ಮುಂಬಯಿ ಜೀರ್ಣೋದ್ದಾರ ಸಮಿತಿಯ ಸಂಚಾಲಕ ರತ್ನಕರ್ ವೈ.ಶೆಟ್ಟಿ ಶ್ರೀಕೃಷ್ಣಧಾಮ ನಂದಳಿಕೆ, ಮಂಗಳೂರು ಜಾಗತಿಕ ಬಂಟರ ಪ್ರತಿಷ್ಠಾನದ ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ದಿ. ನಂದಳಿಕೆ ಶ್ರೀಮಾತ ಸುಬ್ಬಯ್ಯ ಶೆಟ್ಟಿಯವರ ಮಕ್ಕಳು, ಚಂದ್ರಶೇಖರ್, ರಿತೇಶ್ ಶೆಟ್ಟಿ, ನಿಟ್ಟೆ ಯತಿರಾಜ್ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ಬಾಲಚಂದ್ರ ಶೆಟ್ಟಿ ಕುಡುಂದೂರು, ಕಾನಬೆಟ್ಟು ದಿವಾಕರ್ ಶೆಟ್ಟಿ, ಸೂರ್ಯಕಾಂತ್ ಶೆಟ್ಟಿ ಕೆದಿಂಜೆ, ಕೋಶಾಧಿಕಾರಿ ಶೋಭಾ ಎಸ್.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಶರಣ್ಯ ತಂತ್ರಿ ಪ್ರಾರ್ಥಿಸಿ, ಉಪಾಧ್ಯಕ್ಷ ಶೋಧನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಪ್ರಾಸ್ತವಿಕ ಮಾತನಾಡಿದರು, ಸುಭಾಷ್ ಕುಮಾರ್ ವಂದಿಸಿ, ವಿ.ಕೆ ರಾವ್ ನಂದಳಿಕೆ ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
