Share this news

ಅಜೆಕಾರು, ನ.02: ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಕಾಡುಹೊಳೆ ಎಂಬಲ್ಲಿ ಕಳೆದ ವರ್ಷ ಶುಭಾರಂಭಗೊAಡ ಸುಧಣ್ಣ ರಿವರ್ ವ್ಯೂ ಗಾರ್ಡನ್ ನಲ್ಲಿ ಇದೀಗ ನೂತನ ಈಜುಕೊಳ ಉದ್ಘಾಟನೆಯಾಗಿದ್ದು, ಈಜುಗಾರರಿಗೆ ಸಾಕಷ್ಟು ಅನುಕೂಲವಾಗಿದೆ.
ನೂತನ ಈಜುಕೊಳವನ್ನು ಯಾವುದೇ ಗಣ್ಯ ವ್ಯಕ್ತಿಗಳಿಂದ ಉದ್ಘಾಟಿಸದೇ ಪುಟಾಣಿ ಈಜುಗಾರರ ಕೈಯಲ್ಲೇ ಉದ್ಘಾಟಿಸುವ ಸಲುವಾಗಿ ಬಾಲ ಈಜುಗಾರರ ಹೆಸರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಚೀಟಿಯಲ್ಲಿ ಅನ್ವಿತಾ.ಡಿ ಪ್ರಭು ಎಂಬ ಬಾಲಕಿ ಅದೃಷ್ಟಶಾಲಿಯಾಗಿದ್ದು ಅವರು ನೂತನ ಈಜುಕೊಳವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಬಜಗೋಳಿಯ ವೀರ ಜೈನ್ ಅವರು ನಡೆಸಿಕೊಂಡು ಬರುತ್ತಿರುವ ಅಹಿಂಸಾ ಅನಿಮಲ್ ಟ್ರಸ್ಟ್ ಗೆ ಮಾನವೀಯ ನೆಲೆಯಲ್ಲಿ ಧನಸಹಾಯದ ನೆರವು ನೀಡಿ ಪಾಲುದಾರರರಾದ ಸುಜಯ ಶೆಟ್ಟಿ ಹಾಗೂ ಗುರುಪ್ರಸಾದ್ ಶೆಟ್ಟಿ ಮಾದರಿ ಎನ್ನಿಸಿಕೊಂಡಿದ್ದಾರೆ.

ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಮುನಿಯಾಲಿನ ಸುಜಯ ಶೆಟ್ಟಿಯವರ ವಿಶಿಷ್ಟ ಪರಿಕಲ್ಪನೆಯಲ್ಲಿ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಕಾಡುಹೊಳೆಯ ಹೊಳೆಯ ತಟದಲ್ಲಿ ಸುಂದರ ಪ್ರಕೃತಿಯಲ್ಲಿ ಸುಧಣ್ಣ ರಿವರ್ ವ್ಯೂ ಗಾರ್ಡನ್ ಆರಂಭಗೊAಡು ಒಂದು ವರ್ಷ ಕಳೆದಿದೆ. ಓಪನ್ ಗಾರ್ಡನ್ ಸಭಾಂಗಣದ ಜೊತೆಗೆ ಎಸಿ ಸೌಲಭ್ಯ ಹೊಂದಿರುವ ಡ್ರೆಸ್ಸಿಂಗ್ ರೂಮ್ ವ್ಯವಸ್ಥೆಯಿರುವ ಸುಧಣ್ಣ ರಿವರ್ ವ್ಯೂ ಗಾರ್ಡನ್ ನಲ್ಲಿ ಮೆಹೆಂದಿ, ರಿಸೆಪ್ಶನ್, ಬರ್ತ್ಡೇ ಪಾರ್ಟಿ, ಸೀಮಂತ ಸೇರಿದಂತೆ ಶುಭ ಸಮಾರಂಭಗಳಿಗೆ ಅತ್ಯತ್ತಮ ಓಪನ್ ಗಾರ್ಡನ್ ಸಭಾಂಗಣವಾಗಿದೆ.ಸಾಕಷ್ಟು ವಿಶಾಲ ಸಭಾಂಗಣವಾಗಿರುವ ರಿವರ್ ವ್ಯೂ ಗಾರ್ಡನ್ ಸಭಾಂಗಣದಲ್ಲಿ ಕನಿಷ್ಠ 2 ರಿಂದ 3 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಒಳಗೊಂಡಿದೆ. ಇದರ ಜೊತೆಗೆ ಇದಲ್ಲದೇ ವಿಶೇಷವಾಗಿ ಸೆಲ್ಫಿ ಪಾಯಿಂಟ್, ಜೊತೆಗೆ ರೈನ್ ಡ್ಯಾನ್ಸ್ ಪಾಯಿಂಟ್ ಸೌಲಭ್ಯವನ್ನು ಅಳವಡಿಸಲಾಗಿದೆ.
ಕೇವಲ ಶಭ ಸಮಾರಂಭಗಳು ಅಲ್ಲದೇ ಸಣ್ಣಪುಟ್ಟ ಪಾರ್ಟಿಗಳು, ಪಿಕ್ನಿಕ್ ಆಯೋಜಕರಿಗೆ, ಸಮ್ಮರ್ ಕ್ಯಾಂಪ್ ಅಥವಾ ಈಜು ತರಬೇತಿ ಪಡೆಯುವವರಿಗೆ ಸುಧಣ್ಣ ರಿವರ್ ವ್ಯೂ ಗಾರ್ಡನ್ ಅತ್ಯುತ್ತಮ ತಾಣವಾಗಿದೆ. ಮುಂಜಾನೆಯ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಬುಕ್ಕಿಂಗ್ ಗೆ 9986495988 ಅಥವಾ 9900815347 ಸಂಪರ್ಕಿಸಬಹುದು.

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *