

ಮಣಿಪಾಲ,ನ.02: ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಲ್ಲಿಜ್ಞಾನ ಸಂಭ್ರಮ ವಾರ್ಷಿಕೋತ್ಸವ ಕಾರ್ಯಕ್ರಮ ಅ.30ರಂದು ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರವಿಪ್ರಕಾಶ್ ವೈ, ಮಣಿಪಾಲ ಅಸೊಸಿಯೆಟ್ ಡೈರೆಕ್ಟರ್( ಆಕಾಡೆಮಿಕ್ಸ್) ಎಂ.ಐ.ಟಿ, ಮಣಿಪಾಲ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ಉತ್ತಮ ಸಂವಹನ ಕೌಶಲ್ಯ, ಸೃಜನಶೀಲತೆ, ವ್ಯಕ್ತಿತ್ವವನ್ನು ಹೊಂದುವುದರಿAದ ಅತೀ ಶೀಘ್ರದಲ್ಲಿ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ಶಿಸ್ತು ಇಲ್ಲದ ವ್ಯಕ್ತಿತ್ವಕ್ಕೆ ಬದುಕಿನಲ್ಲಿಯಾವುದೇ ರೀತಿಯ ಮನ್ನಣೆ ಸಿಗುವುದಿಲ್ಲ.ನಮ್ಮಲ್ಲಿ ಉತ್ತಮ ನೈತಿಕತೆ, ಸರಿಯಾದ ಆಯ್ಕೆ, ಆತ್ಮವಿಶ್ವಾಸ, ಅದಕ್ಕೆ ತಕ್ಕ ಬದ್ಧತೆ ಅತೀ ಮುಖ್ಯ. ಬದುಕಿನಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಒಂದು ಅದೃಷ್ಟದ ಬಾಗಿಲು ಮುಚ್ಚಿದರೂ ಹತ್ತಾರು ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂದರು.
Àಅಧ್ಯಕ್ಷತೆಯನ್ನು ಡಾ. ನಾಗರಾಜ್ ಭಟ್, ಪ್ರಾಂಶುಪಾಲರು, ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿಅಂಡ್ ಮ್ಯಾನೇಜ್ಮೆಂಟ್ ಇವರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವಾಗ ಹಲವಾರು ರೀತಿಯಲ್ಲಿ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು. ಹಾಗಿದ್ದಲ್ಲಿ ಮಾತ್ರ ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿಯೂ ಸಶಕ್ತವಾಗಿ ಮುಂದುವರಿಯಲು ಸಾಧ್ಯ. ಕೃತಕ ಬುದ್ಧಿಮತ್ತೆ ಇವತ್ತಿನ ಎಲ್ಲಾ ಬಹುಪಾಲು ಉದ್ಯೋಗವನ್ನು ಆವರಿಸಿರುವುದರಿಂದ ಅಂಕಗಳ ಜೊತೆಯಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದುವುದರ ಮೂಲಕ ಕೃತಕ ಬುದ್ಧಿಮತ್ತೆಗೆ ಸಂಬAಧಿತ ಜ್ಞಾನ, ಕೌಶಲವನ್ನು ಬೆಳೆಸಿಕೊಂಡಾಗ ಮಾತ್ರ ನೀವು ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ,ರಾಜ್ಯ ಮಟ್ಟದ ಕ್ರೀಡಾ ಸಾಧಕರಿಗೆ ಮತ್ತು ದ್ವಿತೀಯ ಪಿ.ಯು.ಸಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಮಣಿಪಾಲ ಜ್ಞಾನಸುಧಾ ಕಾಲೇಜಿನ ಉಪಪ್ರಾಂಶಪಾಲರುಗಳಾದ ರವಿ ಜಿ, ಹೇಮಂತ, ವಿದ್ಯಾರ್ಥಿ ನಾಯಕರುಗಳಾದ ಪ್ರಥಮ್ ಭಂಡಾರಿ ಮತ್ತು ಸ್ಮೃತಿ ಶೆಟ್ಟಿ ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ಗಣೇಶ ಶೆಟ್ಟಿ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





.
.
.
.
.
.
.
.
.
.
.
.
.
.
.
.
.
.
.
.
