

ಕಾರ್ಕಳ,ನ.02: ಕಾರ್ಕಳ ತೋಟಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ಅನುತ್ಪಾದಕ ಹಾಗೂ ಕಡಿಮೆ ಇಳುವರಿ ನೀಡುತ್ತಿರುವ ತೆಂಗಿನ ತೋಟಗಳ ಪುನಶ್ಚೇತನ (R & R) ಕಾರ್ಯಕ್ರಮದಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸತ್ತು ಹೋದ ಹಾಗೂ ಅನುತ್ಪಾದಕ ತೆಂಗಿನ ಮರಗಳನ್ನು ಕತ್ತರಿಸಿ ತೆಗೆದು ಹಾಕುವುದಕ್ಕೆ ಪ್ರತಿ ಮರಕ್ಕೆ ರೂ. 1000/- ಸಹಾಯಧನವಿದ್ದು ಪ್ರತಿ ಎಕರೆಗೆ ಗರಿಷ್ಠ 12 ಗಿಡಗಳನ್ನು ತೆಗೆಯಲು ಅವಕಾಶವಿರುತ್ತದೆ ಮತ್ತು ಗಿಡಗಳನ್ನು ಹೊಸದಾಗಿ ನಾಟಿ ಮಾಡಲು ರೂ. 45/- ಸಹಾಯಧನವಿರುತ್ತದೆ. ಉಳಿದ ಮರಗಳಿಗೆ ಗೊಬ್ಬರ ಹಾಗೂ ಪೋಷಕಾಂಶಗಳನ್ನು ನೀಡಿ ನಿರ್ವಹಣೆ ಮಾಡಲು ಪ್ರತಿ ಎಕರೆಗೆ ರೂ. 3500/-ಸಹಾಯಧನವಿರುತ್ತದೆ. ಕನಿಷ್ಠ 10 ವರ್ಷ ಮೇಲ್ಪಟ್ಟ ಅರ್ಧ ಎಕರೆಗಿಂತ ಹೆಚ್ಚು ತೆಂಗಿನ ಮರಗಳನ್ನು ಹೊಂದಿರುವ ತೋಟಗಳಿಗೆ ಮಾತ್ರ ಯೋಜನೆ ಲಭ್ಯವಿದ್ದು, ಆಸಕ್ತ ರೈತರು 16/11/2026 ರೊಳಗೆ ತೋಟಗಾರಿಕೆ ಇಲಾಖೆ, ಕಾರ್ಕಳ ಕಛೇರಿಗೆ ಅರ್ಜಿ ಸಲ್ಲಿಸಬಹುದು ಎಂದು
ಕಾರ್ಕಳ ಹಿರಿಯ ಸಹಾಯಕ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ್ ಬಿ.ವಿ ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
