

ಕಾರ್ಕಳ,ನ.9: ತೀವೃ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಕುಸಿದುಬಿದ್ದು ಮೃತಪಟ್ಟ ಘಟನೆ ನಿಟ್ಟೆ ಕಾಲೇಜು ಬಳಿ ಸಂಭವಿಸಿದೆ. ಕಲ್ಯಾ ಗ್ರಾಮದ ಮಾಧವ ಆಚಾರ್ಯ (59) ಎಂಬವರು ಮೃತಪಟ್ಟವರು. ಅವರು ನ.7ರಂದು ಶನಿವಾರ ಇವರು ನಿಟ್ಟೆ ಕಾಲೇಜಿನಲ್ಲಿ ಮರದ ಫರ್ನಿಚರ್ ಕೆಲಸಕ್ಕೆ ಹೋಗಿ ಸಂಜೆ ಕೆಲಸ ಮುಗಿಸಿ ವಾಪಾಸು ಮನೆಗೆ ಬರುತ್ತಿರುವಾಗ ಸಂಜೆ 6.30ಕ್ಕೆ ನಿಟ್ಟೆ ದುರ್ಗಾಪರಮೇಶ್ವರಿ ದ್ವಾರದ ಎದುರು ಎದೆ ನೋವು ಉಂಟಾಗಿ ಅಲ್ಲಿಯೇ ಕುಳಿತು ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಕ್ಷಣವೇ ಮಗ ನಿತೇಶ್ ಆಚಾರ್ಯ ಸ್ಥಳಕ್ಕೆ ಬಂದು ಮಾಧವ ಆಚಾರ್ಯರವರನ್ನು ಚಿಕಿತ್ಸೆಗಾಗಿ ನಿಟ್ಟೆ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಟಿ ಎಂ ಎ ಪೈ ಆಸ್ಪತ್ರೆಗೆ ಕರೆ ತಂದಾಗ ಮಾಧವ ಆಚಾರ್ಯ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ಖಚಿತಪಡಿಸಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


































.
.
.
.
.
.
.
.
.
.
.
.
.
.
.
.
.
.
.
.
