Share this news

ಬೆಂಗಳೂರು, ನ.09: ಪೆರ್ಡೂರಿನ ಪ್ರದೀಪ್ ಪೂಜಾರಿ ಸಾವಿನ ಪ್ರಕರಣದ ಸಮಗ್ರ ತನಿಖೆ ಹೊಣೆಯನ್ನು ಸಿಐಡಿಗೆ ನೀಡಿ ಸರ್ಕಾರ ಆದೇಶಿಸಿದೆ. ಈ ಕುರಿತು ರಾಜ್ಯ ಪೊಲೀಸ್ ಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಅ.28ರಂದು ಪ್ರದೀಪ್ ಪೂಜಾರಿ ಯುವತಿ ಮನೆಗೆ ಅಕ್ರಮ ಪ್ರವೇಶಿಸಿ ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ ಎಂದು ಯುವತಿ ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಪ್ರದೀಪ್ ಪೂಜಾರಿ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ವಿರುದ್ಧ ಆರೋಪಿಗಳ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಗಾಯಗೊಂಡು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರದೀಪ್ ಪೂಜಾರಿ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಉಡುಪಿ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣಗಳು ದಾಖಲಾಗಿತ್ತು.

ಪ್ರದೀಪ್ ಪೂಜಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸದ ಬಗ್ಗೆ ಮತ್ತು ಆತ ಪೊಲೀಸರ ಭದ್ರತೆಯ ನಡುವೆಯೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಲೋಪ ಎಸಗಿರುವ ಹಿರಿಯಡ್ಕ ಎಸ್ ಪುನೀತ್ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಮೃತರ ಮನೆಯವರು ಹಾಗೂ ಸಂಘಟನೆಗಳು ಆರೋಪಿಸಿ, ಈ ಪ್ರಕರಣದ ಸತ್ಯಾಂಶ ಹೊರಬರಲು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದವು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಹರಿರಾಮ್ ಶಂಕರ್, ಪ್ರಕರಣದ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಹಿರಿಯಡ್ಕ ಎಸ್‌ಐ ಪುನೀತ್ ವಿರುದ್ಧ ಶಿಸ್ತು ಮತ್ತು ಆಸ್ಪತ್ರೆಯಲ್ಲಿ ಕಾವಲು ಕರ್ತವ್ಯದಲ್ಲಿದ್ದ ಮಹಿಳಾ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ, ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್‌ಗೆ ವಹಿಸಿದ್ದರು. ಈ ಪ್ರಕರಣದ ತನಿಖೆಯ ಜಾಡು ಹಿಡಿದ ಮಹೇಶ್ ಪ್ರಸಾದ್, ಓರ್ವ ಅಪ್ರಾಪ್ತ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಆರೋಪಿ ಪಡುಕುಡೂರಿನ ಪ್ರಸನ್ನ ಶೆಟ್ಟಿ ಎಂಬಾತ ಸೇರಿದಂತೆ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಸರ್ಕಾರ ಪ್ರದೀಪ್ ಪೂಜಾರಿ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವ ವಿಚಾರವನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಸ್ವಾಗತಿಸಿದ್ದಾರೆ.ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಬಗ್ಗೆ ದಿನ ಕಳೆದಂತೆ ಅನೇಕ ಸಂಶಯಗಳು ಹುಟ್ಟಿಕೊಂಡಿದ್ದು ಅಡಗಿರುವ ಸತ್ಯಾಸತ್ಯತೆಯನ್ನು ತಿಳಿಯಬೇಕಾದರೆ ಉನ್ನತ ಮಟ್ಟದ ತನಿಖೆಯಾಗಬೇಕು, ಹಾಗಾಗಿ ತನಿಖೆಯನ್ನು ಸಿಐಡಿಗೆ ನೀಡಿದ ಕ್ರಮವನ್ನು ಸ್ವಾಗತಾರ್ಹ ಮತ್ತು ಘಟನೆಯ ಬಗ್ಗೆ ಪೋಲಿಸರಿಗೆ ಮಹಿತಿ ನೀಡಿದವರಿಗೆ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಿರುವುದರಿಂದ ನಿರಪರಾದಿಗಳಿಗೆ ನ್ಯಾಯ ಸಿಗಬೇಕು. ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಹಿಂದೆ ಅನೇಕ ಮುಚ್ಚಿಟ್ಟಿರುವ ಸತ್ಯಗಳು ಬಹಿರಂಗವಾಗಬೇಕಿದೆ ಪ್ರತಿಭಟನೆ ಮತ್ತು ಭಾಷಣದ ಮೂಲಕ ಒತ್ತಡ ಹಾಕಿ ಅದನ್ನು ಮುಚ್ಚಿಡುವ ಪ್ರಯತ್ನಗಳು ನಡೆಯುತ್ತಿವೆ ಅದನ್ನು ಸಹಿಸಲು ಸಾಧ್ಯವಿಲ್ಲ ಪ್ರದೀಪ್ ಸಂತ್ರಸ್ಥೆಯ ಮನೆಗೆ ಬೇಟಿ ನೀಡಿ ಕೇಸು ಹಿಂದಕ್ಕೆ ಪಡೆಯಲು ಮನವೊಲಿಸುವಂತೆ ಆತನನ್ನು ಪ್ರೇರೇಪಿದವರು ಯಾರು? ಮತ್ತು ಒಂದು ವೇಳೆ ಅವನ ಜಾಮೀನು ರದ್ದಾದರೆ 14 ವರ್ಷ ಜೈಲು ಸೇರಬೇಕಾಗುತ್ತದೆ ಎಂದು ಅವನ್ನು ಮಾನಸಿಕವಾಗಿ ಕುಗ್ಗಿಸಿ ಆತ್ಮಹತ್ಯೆಗೆ ಪ್ರಮುಖ ಕಾರಣರಾದವರು ಯಾರು? ಎನ್ನುವುದು ಬಹಿರಂಗವಾಗಬೇಕಾದರೆ ಉನ್ನತ ಮಟ್ಟದ ತನಿಖೆ ಅಗತ್ಯ ಇದೆ ಎಂದರು.

ಪ್ರಕರಣ ನಡೆದ ನಂತರ ಸ್ಥಳಕ್ಕೆ ಬೇಟಿ ನೀಡಿ ಪೋಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಗಳನ್ನೇ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಲಾಗಿದೆ ಇದು ನ್ಯಾಯವಲ್ಲ, ಸಂತ್ರಸ್ಥೆಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾನೆ ಎಂದು ಪ್ರದೀಪನ ಮೇಲೆ ಹಲ್ಲೆ ನಡೆದಿದ್ದು ಅದಾದ ಮೂರು ದಿನಗಳ ನಂತರ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಸಂತ್ರಸ್ಥೆಯ ಮನೆಗೆ ನುಗ್ಗುವ ಧೈರ್ಯ ಮಾಡಿದವನು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾದ್ಯ? ಆತ್ಮಹತ್ಯೆಯ ಮೊದಲು ವ್ಯಕ್ತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾನೆ ಎನ್ನುವ ಅಭಿಪ್ರಾಯವಿದೆ ಅದ್ದರಿಂದ ಸಾವಿಗೆ ಜವಾಬ್ದಾರಿ ಯಾರು? ಇಂತಹ ಅನೇಕ ಪ್ರಶ್ನೆಗಳು ಸಹಜವಾಗಿಯೆ ಸಂಶಯಕ್ಕೆ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಸಿಐಡಿ ತನಿಖೆ ಉತ್ತಮ ಕ್ರಮ ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿ ಯಾವುದೋ ಒತ್ತಡಕ್ಕೆ ಮಣಿದು ಪ್ರಕರಣಕ್ಕೆ ಸಿಲುಕಿರುವ ನಿರಪರಾಧಿಗಳಿಗೂ ನ್ಯಾಯ ಸಿಗಲಿ ಎಂದಿದ್ದಾರೆ.

 

 

 

 

 

 

 

 

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *