Share this news

ಬೆಂಗಳೂರು,ನ.13: ರಾಜ್ಯದಲ್ಲಿ ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಣೆ, ನಿರ್ವಹಣೆ ಹಾಗೂ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಆ್ಯಪ್ ಅಳವಡಿಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಮುಂದಿನ ಮೂರು ತಿಂಗಳೊಳಗೆ ನೂತನ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್‌ಎಸ್‌ಎಸ್‌ಎಐ ಪ್ರಕಾರ ಅಡುಗೆ ಎಣ್ಣೆ ಮರುಬಳಕೆ ಮಾಡುವಂತಿಲ್ಲ. ಆದರೆ ಶೇ.50 ರಷ್ಟು ಬಳಕೆಯಾದ ಎಣ್ಣೆಯನ್ನು ಸಣ್ಣ-ಪುಟ್ಟ ಹೋಟೆಲ್‌ಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಟ್ರೇಸಬಿಲಿಟಿ ಆ್ಯಪ್ ನೆರವಿನಿಂದ ರಾಜ್ಯಾದ್ಯಂತ ಬಳಕೆಯಾದ ಅಡುಗೆ ಎಣ್ಣೆಯ ಸಂಗ್ರಹಣೆ, ಸಾಗಣೆ ಹಾಗೂ ವಿಲೇವಾರಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಹೋಟೆಲ್ ಉದ್ಯಮಿಗಳು ಹಾಗೂ ಬೇಕರಿ ಮಾಲೀಕರು ಈ ಆ್ಯಪ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ತಾವು ಖರೀದಿಸಿದ ಅಡುಗೆ ಎಣ್ಣೆಯ ಪ್ರಮಾಣ, ಬಳಕೆಯಾದ ಪ್ರಮಾಣ ಹಾಗೂ ಬಳಸಿದ ನಂತರ ಬಯೋಗ್ಯಾಸ್ ಏಜೆನ್ಸಿಗಳಿಗೆ ವಿತರಿಸಿದ ಎಣ್ಣೆಯ ನಿಖರ ಲೆಕ್ಕವನ್ನು ಈ ಆ್ಯಪ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮರು ಬಳಕೆ ಎಣ್ಣೆ ಬಯೋಡಿಸೆಲ್, ಸೋಪು, ದೀಪದ ಎಣ್ಣೆ ಸೇರಿ ಇನ್ನಿತರ ಉತ್ಪನ್ನಗಳಿಗೆ ಬಳಕೆಯಾಗುತ್ತದೆ. ಬಳಸಿದ ಅಡುಗೆ ಎಣ್ಣೆಗೆ ಸಂಬAಧಿಸಿದAತೆ ಎಫ್‌ಎಸ್‌ಎಸ್‌ಎಐ ನಿಯಮ ಸರಳೀಕರಣ ಮಾಡಿದರೆ, ವೈಮಾನಿಕ ಬಳಕೆಗೆ ರಫ್ತು ಮಾಡಲು ಸಹಕಾರಿ ಎಂದು ಯು.ಟಿ.ಖಾದರ್ ತಿಳಿಸಿದರು.

ಸಗಟಿನಲ್ಲಿ ಅಡುಗೆ ಉತ್ಪಾದನೆ ಘಟಕಗಳಿಂದ ಎಣ್ಣೆ ಖರೀದಿಸುವವರು ಈ ಆ್ಯಪ್‌ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಹೋಟೆಲ್ ಹಾಗೂ ಆಹಾರ ಉತ್ಪನ್ನಗಳ ತಯಾರಿಕಾ ಘಟಕಗಳು ವಾರಕ್ಕೆ ಅಂದಾಜು 200 ಲೀ. ಎಣ್ಣೆ ಬಳಸಿದರೆ, ಅದರಲ್ಲಿ ಸುಮಾರು 45 ಲೀ. ಕರಿದ ಎಣ್ಣೆಗಳು ಸಂಗ್ರಹವಾಗುತ್ತದೆ. ಇನ್ನು ಮುಂದೆ, ಕರಿದ ಎಣ್ಣೆಯನ್ನು ಮಾರಾಟ ಮಾಡಿರುವುದು ಹಾಗೂ ಖರೀದಿಸಿರುವವರ ವಿವರಗಳನ್ನೂ ಟ್ರೇಸಬಿಲಿಟಿ ಆ್ಯಪ್‌ನಲ್ಲಿ ಉಲ್ಲೇಖಿಸಬೇಕಾಗುತ್ತದೆ. ಈ ಹೊಸ ಆ್ಯಪ್‌ನಲ್ಲಿ ಕರಿದ ಎಣ್ಣೆಯ ವಿವರ ಉಲ್ಲೇಖಿಸುವುದರಿಂದ ಮರುಬಳಕೆ ಎಣ್ಣೆ ಮತ್ತೆ ಬಳಕೆಯಾಗುವುದನ್ನು ತಪ್ಪಿಸಬಹುದು ಎಂದು ಯು.ಟಿ. ಖಾದರ್ ವಿವರಿಸಿದರು.

 

 

 

 

 

 

 

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *