Share this news

ನವದೆಹಲಿ, ನ.14: ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊAದಿಗೆ ನಂಟು ಹೊಂದಿದ್ದ ಎನ್ನಲಾದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದು, ಭಾರತೀಯ ವಾಯುಪಡೆಯ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಐಎಎಫ್‌ನ ವಿಂಗ್ ಕಮಾಂಡರ್ ಒಬ್ಬರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರು ಪಾಕಿಸ್ತಾನಿ ಗುಪ್ತಚರ ಏಜೆಂಟ್‌ಗೆ ದೇಶದ ರಹಸ್ಯ ಯುದ್ಧ ಯೋಜನೆಗಳು ಮತ್ತು ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ದೆಹಲಿ ಪೊಲೀಸರ ವಿಶೇಷ ಘಟಕವು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್‌ನಲ್ಲಿ ಗಂಭೀರ ಆರೋಪ ಮಾಡಿದೆ. ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ದೋಷಾರೋಪ ಪಟ್ಟಿಯ ಪ್ರಕಾರ, ಮಹಿಳೆಯೊಬ್ಬಳ ನಗ್ನ ಫೋಟೋಗಳ ಆಸೆಗೆ (ಹನಿ-ಟ್ರ‍್ಯಾಪ್) ಬಿದ್ದು ಅಧಿಕಾರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಆರೋಪಿ ಅಧಿಕಾರಿಯು 2026ರ ಜನವರಿ 12ರಿಂದ ಏಪ್ರಿಲ್ 1ರವರೆಗೆ ವಾಟ್ಸಾಪ್ ಮೂಲಕ ಶಂಕಿತ ಪಾಕಿಸ್ತಾನಿ ಏಜೆಂಟ್‌ನೊAದಿಗೆ ಸಂಪರ್ಕದಲ್ಲಿದ್ದರು. ಇವರಿಬ್ಬರ ನಡುವೆ ಸುಮಾರು 3,008 ಪಠ್ಯ ಸಂದೇಶಗಳು, 65 ಫೋಟೋಗಳು, 42 ವಾಯ್ಸ್ ಕಾಲ್‌ಗಳು ಮತ್ತು 4 ವಿಡಿಯೋ ಕಾಲ್‌ಗಳು ವಿನಿಮಯವಾಗಿವೆ. ಮಹಿಳೆಯಿಂದ ಖಾಸಗಿ ಫೋಟೋಗಳನ್ನು ಪಡೆದ ಪ್ರತಿಯಾಗಿ ಅಧಿಕಾರಿಯು ರಹಸ್ಯ ಯುದ್ಧ ಯೋಜನೆಯ ದಾಖಲೆಯ ಪುಟವನ್ನು ಹಂಚಿಕೊAಡಿದ್ದಾರೆ. ಇದರೊಂದಿಗೆ ಲೇಹ್ ವಾಯುನೆಲೆಯ ಕಾರ್ಯಾಚರಣೆಯ ಸಾಮರ್ಥ್ಯ, ಯುದ್ಧ ವಿಮಾನಗಳ ಚಲನವಲನ ಮತ್ತು ಸೂಕ್ಷ್ಮ ಸೇನಾ ನೆಲೆಗಳ ನಿರ್ದೇಶಾಂಕಗಳ ಮಾಹಿತಿಯನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಭಾರತದ ರಹಸ್ಯ ಡ್ರೋನ್ ಘಟಕದ ಸಂರಚನೆ, ಪ್ರಯೋಗಗಳು, ಸಾಮರ್ಥ್ಯ ಮತ್ತು ಗುರಿ ನಿಗದಿಪಡಿಸುವ ತಂತ್ರಜ್ಞಾನದAತಹ ಅತ್ಯಂತ ಗೌಪ್ಯ ಮಾಹಿತಿಯನ್ನೂ ಸಹ ಏಜೆಂಟ್‌ಗೆ ರವಾನಿಸಲಾಗಿದೆ ಎಂದು ಚಾರ್ಜ್ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನಿ ಏಜೆಂಟ್ ಸೂಚನೆಯ ಮೇರೆಗೆ, ಆರೋಪಿ ಅಧಿಕಾರಿಯು ತನ್ನ ಅಧೀನದಲ್ಲಿ ಕೆಲಸ ಮಾಡುವ ಐವರು ಸಿಬ್ಬಂದಿಯ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಮಾಲ್‌ವೇರ್ ಅಪ್ಲಿಕೇಶನ್‌ಗಳನ್ನು ಅಳವಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಸೂಕ್ಷ್ಮ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಅಧಿಕಾರಿಯು ಕಚೇರಿಯೊಳಗೆ ಅನುಮತಿಯಿಲ್ಲದ ಐಫೋನ್ ಬಳಸುತ್ತಿದ್ದುದು ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ಆ ಫೋನ್ ಪರಿಶೀಲಿಸಿದಾಗ ಪಾಕಿಸ್ತಾನಿ ಏಜೆಂಟ್ ಜೊತೆಗಿನ ಚಾಟ್ ಮತ್ತು ದಾಖಲೆಗಳ ಸೋರಿಕೆ ಬಯಲಾಗಿದೆ.
ಗುಜರಾತ್‌ನಲ್ಲಿ ನೋಂದಣಿಯಾಗಿದ್ದ ಭಾರತೀಯ ಸಿಮ್ ಕಾರ್ಡ್ ಬಳಸಿ ಪಾಕಿಸ್ತಾನದಿಂದ ಈ ಜಾಲವನ್ನು ನಿರ್ವಹಿಸಲಾಗುತ್ತಿತ್ತು. ವಾಯುಪಡೆಯ ದೂರಿನ ಮೇರೆಗೆ ಅಧಿಕೃತ ರಹಸ್ಯಗಳ ಕಾಯ್ದೆಯಡಿ 2026ರ ಮೇ 30ರಂದು ಅಧಿಕಾರಿಯನ್ನು ಬಂಧಿಸಲಾಗಿದ್ದು, ಪ್ರಸ್ತುತ ಅವರು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣವು ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ.

 

 

 

 

 

 

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *