
ಕಾರ್ಕಳ, ನ.17:ಕಾರ್ಕಳದ ಜನತೆಯ ಕೆಲವು ವರ್ಷದ ಬೇಡಿಕೆಯಾಗಿದ್ದ ಯೋಜನಾ ಪ್ರಾಧಿಕಾರದ ಮಹತ್ವದ ಬೇಡಿಕೆಯನ್ನು ರಾಜ್ಯ ಸರ್ಕಾರವು ಕೊನೆಗೂ ಈಡೇರಿಸಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಕಾರ್ಕಳಕ್ಕೆ ನೂತನ ಯೋಜನಾ ಪ್ರಾಧಿಕಾರ ಮಂಜೂರುಗೊಳಿಸಿ ಆದೇಶವನ್ನು ಹೊರಡಿಸಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈವರೆಗೆ ಏಕ ವಿನ್ಯಾಸಕ್ಕಾಗಿ, ಭೂ ಪರಿವರ್ತನೆಗಾಗಿ ಕಾಪು ಯೋಜನಾ ಪ್ರಾಧಿಕಾರಕ್ಕೆ ಮತ್ತು ಉಡುಪಿಗೆ ಅಲೆದಾಡುತ್ತಿದ್ದ ಜನರಿಗೆ ರಾಜ್ಯ ಸರ್ಕಾರದ ಈ ಆದೇಶದಿಂದ ನಿಟ್ಟಿಸಿರು ಬಿಡುವಂತಾಗಿದೆ. ಅತ್ಯಂತ ಅಗತ್ಯದ ಭೂ ದಾಖಲೆಗಳನ್ನು ಹೊಂದಿಸಲು ಕಾರ್ಕಳದ ಜನತೆಯು ದೂರದ ಊರಿಗೆ ಅಲೆದಾಡುವ ಪ್ರಮೇಯವು ಇನ್ನು ಮುಂದೆ ತಪ್ಪಲಿದೆ. ಸರ್ಕಾರದ ಈ ಆದೇಶದಿಂದ ಕಾರ್ಕಳದಲ್ಲಿ ಮತ್ತೆ ಕಟ್ಟಡ ನಿರ್ಮಾಣ ಕ್ಷೇತ್ರವು ಗರಿಗೆದರಲ್ಲಿದ್ದು ಜನತೆಗೆ ಇದರಿಂದ ಮಹತ್ವದ ಅನುಕೂಲವಾಗಲಿದೆ ಜೊತೆಗೆ ವಿಫುಲ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ಉದಯ ಶೆಟ್ಟಿ ಮುನಿಯಾಲು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
