
ಕಾರ್ಕಳ, ನ.17: ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆಯಲ್ಲಿ ನಿರ್ಮಾವಾಗುತ್ತಿರುವ ಆಶ್ರಯ ಮನೆ ಫಲಾನುಭವಿಗಳನ್ನು ಶಾಸಕರ ಕಚೇರಿಗೆ ಬೇಟಿ ನೀಡುವಂತೆ ಒತ್ತಾಯಿಸುವುದು ಖಂಡನೀಯ, ಇದು ಮುಂದುವರಿದರೆ ಪ್ರತಿಭಟನೆ ಅನಿವಾರ್ಯವಾದೀತು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭದರಾವ್ ಹೇಳಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಲಿ ಮುತುವರ್ಜಿಯಲ್ಲಿ ಒಂದು ಹಂತದ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆಯಾಗಿ ಮನೆ ವಿತರಣೆಯಾಗಬೇಕಿತ್ತು. ಆದರೆ ರಾಜ್ಯ ಸರಕಾರಕ್ಕೆ ಇದರ ಶ್ರೇಯಸ್ಸು ಸಿಗುತ್ತದೆ ಎನ್ನುವ ಕಾರಣಕ್ಕೆ ಅವರು ವಿಳಂಬ ನೀತಿಯನ್ನು ಅವರು ಅನುಸರಿಸಿದ್ದಾರೆ.ಅರ್ಜಿದಾರರ ಮನವಿಯಂತೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ಇದಾದ ನಂತರ ಸೋಮವಾರ ಸಮಿತಿಯ ಸದಸ್ಯರಾದ ಚಂಪಾ ಸುನೀಲ್, ಹುಸೇನ್ ಬಂಗ್ಲೆಗುಡ್ಡೆ, ದೀಪಕ್ ಮೊಯಿಲಿ ಮತ್ತು ಮಂಜು ಇವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ 71 ಫಲಾನಭವಿಗಳ ಅಯ್ಕೆ ಮಾಡಿ ಅಂತಿಮಗೊಳಿಸಲಾಗಿದೆ. ಆದರೆ ಆದರ ಮರುದಿನವೇ ಶಾಸಕರ ಕಚೇರಿಯಿಂದ ಫಲಾನುಭವಿಗಳಿಗೆ ಕರೆ ಮಾಡಿ ಕಚೇರಿಗೆ ಬರುವಂತೆ ಒತ್ತಾಯಿಸುತ್ತಿರುವುದು ಯಾವ ಉದ್ದೇಶಕ್ಕಾಗಿ ಇದು ಶಾಸಕರ ಬ್ಲಾಕ್ ಮೇಲ್ ತಂತ್ರವೇ ಎಂದು ಪ್ರಶ್ನಿಸಿದ್ದಾರೆ.
ಆಶ್ರಯ ಮನೆ ಯೋಜನೆ ಸರಕಾರದ ಯೋಜನೆ ಯಾವುದೇ ಪಕ್ಷದ ಯೋಜನೆಯಲ್ಲ. ಫಲಾನುಭವಿಗಳು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ,ಶಾಸಕರ ಕಚೇರಿಗೆ ಬೇಟಿ ನೀಡುವ ಅಗತ್ಯವೂ ಇಲ್ಲ, ಒಂದು ವೇಳೆ ಬೇಟಿ ನೀಡಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳಿಗೆ ಸಮಸ್ಯೆ ಮಾಡಿದರೆ ನಮ್ಮ ಪ್ರತಿರೋಧವನ್ನು ಎದುರಿಸಬೇಕಾದಿತು ಎಂದು ಅವರು ಎಚ್ಚರಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
