

ಕಾರ್ಕಳ,ನ.25: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ತಾನದಗುಡ್ಡೆ ನಿವಾಸಿಗಳಾದ ಶಂಕರ ಮತ್ತು ಶ್ರೀಮತಿ ಸವಿತಾ ದಂಪತಿಗಳು ಅತ್ಯಂತ ಕಡು ಬಡತನದಲ್ಲಿದ್ದು ವಾಸಕ್ಕೆ ಯೋಗ್ಯವಾದ ಮನೆಯಿಲ್ಲದೆ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದರು. ಈ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ತಾನದಗುಡ್ಡೆ ಫ್ರೆಂಡ್ಸ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚ್ಯಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸೂರು ನಿರ್ಮಿಸಿ ಹಸ್ತಾಂತರಿಸಿದ್ದಾರೆ. ಉದಯ ಶೆಟ್ಟಿ ಮುನಿಯಾಲು ಮನೆಯ ಬೀಗದ ಕೀಯನ್ನು ದಂಪತಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಭರತ್ ಶೆಟ್ಟಿ, ಡಾ. ಸುರೇಶ್ ಶೆಟ್ಟಿ, ಆನಂದ ಜೋಸೆಫ್, ತಾನದಗುಡ್ಡೆ ಫ್ರೆಂಡ್ಸ್ ಪ್ರಮುಖರಾದ ಮನೋಜ್ ಶೆಟ್ಟಿ, ಅರ್ಚಕರಾದ ಕೆಮ್ಮಣ್ಣು ರಾಧಾ ಭಟ್ ಸೇರಿದಂತೆ ಸ್ಥಳೀಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.






.
.
.
.
.
.
.
.
.
.
.
.
.
.
.
.
.
.
.
.
