Share this news

ಬೆಂಗಳೂರು: ಕರ್ನಾಟಕದ ಚಾಲಕ ಸಮೂಹದ ಹಲವು ದಶಕಗಳ ಕನಸು ಈಡೇರಿದ್ದು, ಖಾಸಗಿ ಚಾಲಕರ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಅಡಿಯಲ್ಲಿ ಚಾಲಕರಿಗೆ ಆರೋಗ್ಯ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ.

ಈ ಹಿಂದೆ ಚಾಲಕರು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೆ ಅಂತಹವರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗಿತ್ತು, ಇದೀಗ ಸರ್ಕಾರ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ನೋಂದಾಯಿತ ಚಾಲಕ ಆಕ್ಸಿಡೆಂಟ್ ಮತ್ತು ಸಹಜವಾಗಿ ಮೃತಪಟ್ಟರೇ ಅಂತಹ ಚಾಲಕರಿಗೆ 5 ಲಕ್ಷ ರು. ಪರಿಹಾರ ನೀಡಲಾಗುತ್ತದೆ. ನೋಂದಾಯಿತ ಸದಸ್ಯರು ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 5 ಲಕ್ಷ ರುಪಾಯಿ ವರೆಗೆ ಕ್ಯಾಶ್ಲೆಸ್ ವ್ಯವಸ್ಥೆ. 50 ರಿಂದ 1 ಲಕ್ಷದವರೆಗೆ ಯಾವುದೇ ಕಾಯಿಲೆಗೆ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದುಕೊಂಡು ಬಿಲ್ ಪಾವತಿ ಮಾಡಿದರೆ, ಆ ಬಿಲ್ ನಲ್ಲಿ ಒಂದು ಲಕ್ಷ ರು. ವರೆಗೆ ಹಣವನ್ನು ಮಂಡಳಿಗೆ ಬಿಲ್ ನೀಡಿ ಮರುಪಾವತಿ ಮಾಡಿಕೊಳ್ಳಬಹುದು.

ಇನ್ನು ಮಹಿಳಾ ಚಾಲಕಿಯರಿಗೆ ಎರಡು ಮಕ್ಕಳಿಗೆ ಹೆರಿಗೆ ಭತ್ಯೆಯ ರೂಪದಲ್ಲಿ ತಲಾ 10,000 ರು. ನೀಡಲಾಗುತ್ತದೆ.ನೋಂದಾಯಿಸಲ್ಪಟ್ಟ ಚಾಲಕ ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೇ ಅಂತಹ ಚಾಲಕನ ಮಕ್ಕಳಿಗೆ 1 ರಿಂದ ಡಬಲ್ ಡಿಗ್ರಿವರೆಗೆ ಹತ್ತು ಸಾವಿರದಿಂದ 25 ಸಾವಿರದವರೆಗೆ ಸಹಾಯಧನ ನೀಡಲಾಗುತ್ತದೆ.ಆಟೋ ಚಾಲಕರು, ಕ್ಯಾಬ್ ಡ್ರೈವರ್, ಖಾಸಗಿ ಬಸ್ ಚಾಲಕರು, ಸ್ಕೂಲ್ ಬಸ್ ಚಾಲಕರು, ಲಾರಿ ಚಾಲಕರು, ಖಾಸಗಿ ಬಸ್ ಕಂಡಕ್ಟರ್, ಕ್ಲಿನರ್, ಮೆಕಾನಿಕ್, ವಾಹನಗಳ ಪೇಂಟರ್, ವೆಲ್ಡರ್ಸ್, ಬಾಡಿ ಬಿಲ್ಡರ್ಸ್, ಗಳು ಈ ಸೌಲಭ್ಯ ಪಡೆದುಕೊಳ್ಳಬಹುದು.
ಆದರೆ ಚಾಲಕ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಈ ಸೌಲಭ್ಯ ಪಡೆದೊಳ್ಳಬಹುದು ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಸ್ಪಷ್ಟಪಡಿಸಿದ್ದಾರೆ.

 

Leave a Reply

Your email address will not be published. Required fields are marked *