ಮಂಗಳೂರು: ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯಾಗಿಸಬೇಕು ಎಂಬ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳದಲ್ಲಿ ಪಾಲೊಂಡಿದ್ದ ಸಿಎಂ ಮಾತನಾಡಿ, ಕಂಬಳ ಬಹಳ ಪುರಾತನವಾದ ಗ್ರಾಮೀಣ ಕ್ರೀಡೆಯಾಗಿದೆ. ಇದು ಬಹಳ ಜನಪ್ರಿಯವಾಗಿದೆ ಎಂಬುದು ಇಲ್ಲಿ ಸೇರಿದ ಜನರನ್ನು ನೋಡಿದಾಗಲೇ ಗೊತ್ತಾಗುತ್ತದೆ. ಸುಪ್ರೀಂ ಕೋರ್ಟ್ ಕಂಬಳವನ್ನು ನಿಷೇಧ ಮಾಡಿತ್ತು. ಆದರೆ, ನಮ್ಮ ಸರ್ಕಾರ ಆ ನಿಷೇಧವನ್ನು ತೆರವುಗೊಳಿಸಿ ಮತ್ತೊಮ್ಮೆ ಕಂಬಳ ಕ್ರೀಡೆ ನಡೆಸಲು ನೆರವಾಗಿದೆ ಎಂದಿದ್ದಾರೆ.
ಕೋಣ ಸಾಕಿದ ಹಾಗೆ ಮಗನನ್ನು ಸಾಕಲು ಸಾಧ್ಯವಿಲ್ಲ. ಕಂಬಳವನ್ನು ಬೆಳಸಬೇಕು, ಸಂಪ್ರದಾಯವಾದ ಈ ಕ್ರೀಡೆಯನ್ನು ಉಳಿಸಬೇಕು. ತುಳುನಾಡಿನ ಜನ ಕಂಬಳ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ವಿದ್ಯಾವಂತರೂ ಭಾಗವಹಿಸುತ್ತಿದ್ದಾರೆ. ಇದೇ ಕಾರಣದಿಂದ ಕಂಬಳವನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಕAಬಳ ಕ್ರೀಡೆ ಮಾಡುವ ಮೂಲಕ ಜಾತಿ ಧರ್ಮ ಒಗ್ಗೂಡಿಸುವುದು ಸಂತೋಷದ ವಿಚಾರ. ಕಂಬಳ ಕೂಟಕ್ಕೆ ಅತ್ಯಂತ ಸಂತೋಷದಿAದ ಬಂದಿದ್ದೇನೆ. ನನ್ನನ್ನು ನೋಡಲು ಇಲ್ಲಿ ಯಾರೂ ಬಂದಿಲ್ಲ. ಇಷ್ಟೊಂದು ಜನ ಕಂಬಳ ನೋಡಲು ಬಂದಿರೋದರಿAದ ಇದು ಎಂತ ಜನಪ್ರಿಯ ಕ್ರೀಡೆ ಅಂತ ಅರ್ಥ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು ಹೊರ ವಲಯದಲ್ಲಿ ನಡೆಯುತ್ತಿರುವ ನರಿಂಗಾನ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ನೊಗ, ಬೆಳ್ಳಿ ಹಿಡಿಕೆಯ ಕಂಬಳದ ಬೆತ್ತ ನೀಡಿ ಗೌರವ ನೀಡಲಾಯಿತು. ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ನರಿಂಗಾನ ಕಂಬಳ ನಡೆಯುತ್ತಿದೆ. ಈ ಕಂಬಳದಲ್ಲಿ 230ಕ್ಕೂ ಹೆಚ್ಚು ಕೋಣಗಳ ಜೋಡಿ ಭಾಗಿಯಾಗಿವೆ.