ಅಜೆಕಾರು: ವಿಪರೀತ ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ನದಿಯಲ್ಲಿ ಏಡಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಡ್ತಲ ನಿವಾಸಿ ಕೃಷ್ಣ(55) ಮೃತಪಟ್ಟವರು.
ಕೃಷ್ಣ ಅವರ ಕುಡಿತದ ಚಟದಿಂದ ಬೇಸತ್ತಿದ್ದ ಅವರ ಪತ್ನಿ, ಮಕ್ಕಳೊಂದಿಗೆ ಆತ್ರಾಡಿಯ ತನ್ನ ತವರು ಮನೆಯಲ್ಲಿ ಇದ್ದರು. ಈ ಹಿನ್ನಲೆಯಲ್ಲಿ ಕೃಷ್ಣ ಮನೆಯಲ್ಲಿ ಒಂಟಿಯಾಗಿದ್ದರು. ಜ.5 ರಂದು ಅತಿಯಾಗಿ ಮದ್ಯ ಸೇವಿಸಿ ಕಡ್ತಲ ಗ್ರಾಮದ ಧರ್ಬುಜೆಯಲ್ಲಿರುವ ತಿರ್ಥೊಟ್ಟು ನದಿಯಲ್ಲಿ ಏಡಿ ಹಿಡಿಯಲು ಹೋಗಿದ್ದ ಕೃಷ್ಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.