ಅಜೆಕಾರು: ಹಿಂದಿನಿಂದ ಬಂದ ಟೆಂಪೊ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಹಾಗೂ ಟೆಂಪೊ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಯಪ್ರಕಾಶ್ ಎಂಬವರು ಸೋಮವಾರ (ಎ.7) ಶಿರ್ಲಾಲು ಹೆಗ್ಡೆ ಬೆಟ್ಟು ಕ್ರಾಸ್ ಬಳಿ ತಮ್ಮ ಬೈಕಿನಲ್ಲಿ ಹೋಗುತ್ತಿದ್ದಾಗ ಶಿರ್ಲಾಲು ಪೇಟೆಯಿಂದ ಹೆಗ್ಡೆಬೆಟ್ಟು ಕ್ರಾಸ್ ಬಳಿ ಬಲಕ್ಕೆ ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ ಟೆಂಪೋ ಢಿಕ್ಕಿಯಾಗಿದೆ.ಅಪಘಾತದ ಪರಿಣಾಮ ಟೆಂಪೊ ಚಾಲಕ ಗಿರೀಶ್ ಹಾಗೂ ಬೈಕ್ ಸವಾರ ಇಬ್ಬರೂ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಟೆಂಪೊ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಕಾರಣ ಎನ್ನಲಾಗಿದ್ದು,ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.