Share this news

 

 

 

ಕಾರ್ಕಳ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಆಸ್ತಿ ಎಸ್ 596 ಅಂಕಗಳೊAದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾ ಆರ್ ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ 595 ಅಂಕಗಳೊAದಿಗೆ ರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಪಡೆದಿರುತ್ತಾರೆ.

ಕಾರ್ಕಳ ಜ್ಞಾನಸುಧಾದ ಮಯೂರ್ ಗೌಡ, ಭಾರ್ಗವ್ ಎಚ್ ನಾಯಕ್, ವಿಷ್ಣು ಜಿ ನಾಯಕ್ ಹಾಗೂ ಶ್ರಾವ್ಯ ವಾಗ್ಲೆ 594 ಅಂಕಗಳನ್ನು, ಹರ್ಷಿತ್ ಆರ್ ಎಚ್, ಅನ್ವಿತಾ ನಾಯಕ್, ವಿಶ್ವ ಆರ್ ನಾಯಕ್ ಹಾಗೂ ಉಡುಪಿ ಜ್ಞಾನಸುಧಾದ ಸ್ನೇಹ ಎ ಕಾಮತ್ 593 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಉತ್ಸವ್ ಸಿ ಪಾಟೀಲ್, ಸಂಜನಾ ಶೆಣೈ ಮತ್ತು ಉಡುಪಿ ಜ್ಞಾನಸುಧಾದ ರಚಿತ್ ಜೆ.ಬಿ ಹಾಗೂ ಸೃಷ್ಟಿ 592 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಸರ್ವಜಿತ್ ಕೆ.ಆರ್, ಧನ್ಯಶ್ರೀ ಆರ್ 591 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಅನುಷ್ಕಾ ಜಿ, ಪ್ರಣವ್ ಎನ್.ಎಂ, ಶ್ರೇಯಸ್ ಕೆ, ಅನ್ವಿತಾ ಆರ್ ಕಾಮತ್, ಸುಕೃತಿ ಜಿ. ಝೋಷಿ, ತನೀಷಾ ಶೆಟ್ಟಿ ಹಾಗೂ ಉಡುಪಿ ಜ್ಞಾನಸುಧಾದ ಶ್ರೀಹರಿ ಎಸ್.ಜಿ 590 ಅಂಕವನ್ನು ಗಳಿಸಿದ್ದಾರೆ.

ವಾಣಿಜ್ಯ ವಿಭಾಗ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಹನಾ ನಾಯಕ್ ಹಾಗೂ ತನ್ವಿ ರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನಿಯಾಗಿ, ರಕ್ಷಾ ರಾಮಚಂದ್ರ 592 ಅಂಕ ಗಳಿಸಿ ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 5 ನೇ ಸ್ಥಾನಿಯಾಗಿ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕ್ (591 ಅಂಕ) ಸಚಿನ್ ಸುರೇಶ್ ಶೆಣೈ(589 ಅಂಕ) ಹಾಗೂ ಖತಿಜಾತುಲ್ ರಫಿಯಾ(588 ಅಂಕ) ಗಳಿಸಿದ್ದು ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 88ಕ್ಕಿಂತ ಆಧಿಕ ಪರ್ಸಂಟೇಜ್ ಗಳಿಸಿದ್ದಾರೆ.
ವಿಷಯವಾರ ಪೂರ್ಣಾಂಕದಲ್ಲಿ ಗಣಿತಶಾಸ್ತç-144, ಜೀವಶಾಸ್ತçದಲ್ಲಿ 113, ರಸಾಯನಶಾಸ್ತç-48, ಭೌತಶಾಸ್ತç-27, ಸಂಖ್ಯಾಶಾಸ್ತç-20, ಗಣಕಶಾಸ್ತç-37, ಮೂಲಗಣಿತ-2, ಲೆಕ್ಕಶಾಸ್ತç-7, ವ್ಯವಹಾರ ಅಧ್ಯಯನದಲ್ಲಿ 21, ಸಂಸ್ಕೃತ-113 ಮತ್ತು ಕನ್ನಡ-4 ಸೇರಿದಂತೆ 536 ವಿಷಯವಾರು ಪೂರ್ಣಂಕ ಬಂದಿರುತ್ತದೆ.

ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

 

 

Leave a Reply

Your email address will not be published. Required fields are marked *