ಕಾರ್ಕಳ: ಗುಣಮಟ್ಟದ ಶಿಕ್ಷಣ ಹಾಗೂ ಶೇ .100 ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿಯೂ ಕೂಡ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ 100ರ ಸಾಧನೆ ಮಾಡುವ ಸಾರ್ವತ್ರಿಕ ದಾಖಲೆ ಬರೆದಿದೆ.
ಪರೀಕ್ಷೆಗೆ ಹಾಜರಾದ ಎಲ್ಲಾ 692 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಯು. ವೈ 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಅಮೃತ ಬಸವರಾಜ್ ಬಣಕಾರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ, ಶ್ರೀನಿಧಿ ಡಿ 591 ಅಂಕಗಳೊಂದಿಗೆರಾಜ್ಯಕ್ಕೆ 9ನೇ ಸ್ಥಾನ, ಪ್ರಜ್ವಲ್ ಎಸ್. ಎನ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ, ತೇಜಸ್ ವಿ. ನಾಯಕ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 592 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು 97% ಕ್ಕಿಂತ ಅಧಿಕ, 168 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ, 379 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, ಹಾಗೂ 557 ವಿದ್ಯಾರ್ಥಿಗಳು ವಿಶಿಷ್ಟ ಶ್ರೆ?ಣಿಯಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ
ಭೌತಶಾಸ್ತ್ರದಲ್ಲಿ 07, ರಸಾಯನಶಾಸ್ತ್ರ 15, ಗಣಿತ 101, ಜಿ?ವಶಾಸ್ತ್ರ 22, ಗಣಕ ವಿಜ್ಞಾನ 26, ಅರ್ಥಶಾಸ್ತ್ರ 02, ವ್ಯವಹಾರ ಅಧ್ಯಯನ 12, ಲೆಕ್ಕಶಾಸ್ತ್ರ 02, ಕನ್ನಡ 09, ಸಂಸ್ಕೃತ 76 ಹಾಗೂ ಹಿಂದಿಯಲ್ಲಿ 05 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿ ವಿಶೆ?ಷ ಸಾಧನೆಗೈದಿದ್ದಾರೆ.
ಸಂಸ್ಥೆ ಪ್ರಾರಂಭವಾದ ಮೊದಲ ವರ್ಷದಿಂದಲೂ ಶೇ .100 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೆ?ಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವೃಂದದವರು ಸಂತಸ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.