Share this news

 

 

 

ಕಾರ್ಕಳ;ಡಾ.ಬಿ.ಆರ್ ಅಂಬೇಡ್ಕರ್ ಈ ನಾಡಿನ ಭಾಗ್ಯವಿದಾತ,ಶ್ರೇಷ್ಠ ಯುಗಪುರುಷ. ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಅಂಬೇಡ್ಕರ್ ಅವರು ಬಡತನ, ಶೋಷಣೆ, ಅಸಮಾನತೆಯನ್ನು ಮೆಟ್ಟಿ ನಿಂತು ಅದನ್ನೇ ಸವಾಲಾಗಿಸಿ ವಿದೇಶದಲ್ಲಿ ವಿದ್ಯೆ ಕಲಿತು ಭಾರತಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ. ಅಂದು ಅವಕಾಶ ವಂಚಿತರಾಗಿ ಅಂಬೇಡ್ಕರ್ ಸುಮ್ಮನಿದ್ದರೆ ನಮಗೆ ಇಂತಹ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.

ಅವರು ಕಾರ್ಕಳ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ನಡೆದ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಜಗತ್ತಿನ ಸಾರ್ವಕಾಲಿಕ ನಾಯಕರಾಗಿದ್ದಾರೆ.ಆದರೆ ಅವರು ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದರು ಅಂಬೇಡ್ಕರ್ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿ ಅವಮಾನ ಮಾಡಲಾಯಿತು, ಅವರ ನಿಧನದ ಬಳಿಕ ಶವ ಸಂಸ್ಕಾರಕ್ಕೂ ದೆಹಲಿಯಲ್ಲಿ ಶವ ಸಂಸ್ಕಾರಕ್ಕೂ ಜಾಗ ಕೊಡದೇ ನಿಧನ ಬಳಿಕವೂ ಅಪಮಾನ ಎದುರಿಸಿದರು. ಇಂತಹ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸಾದನೆಗಾಗಿ ತಮ್ಮ ಜೀವಿತಾವಧಿಯಲ್ಲಿ ಭಾರತ ರತ್ನ ಸಿಗಲಿಲ್ಲ ಇದು ನೋವಿನ ಸಂಗತಿ. ತಾನು ಅಪಮಾನ ಎದುರಿಸಿ ದೇಶಕ್ಕಾಗಿ ಅಂಬೇಡ್ಕರ್ ರಚಿಸಿದ ಅತ್ಯುತ್ತಮ ಸಂವಿಧಾನದ ಪಾವಿತ್ರö್ಯತೆ ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಲೇಖಕರಾದ ಮಂಜುನಾಥ ಹಿಲಿಯಾಣ ಮುಖ್ಯ ಭಾಷಣಕಾರರಾಗಿ ಅಂಬೇಡ್ಕರ್ ಅವರ ಜೀವನದ ಮೌಲ್ಯಗಳು, ಅವರು ಎದುರಿಸಿದ ಸವಾಲುಗಳು ಹಾಗೂ ಅವರ ಆದರ್ಶಗಳ ಕುರಿತು ಸ್ಥೂಲವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ತಹಶೀಲ್ದಾರ್ ಪ್ರದೀಪ್ ಆರ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ,ಆರ್ ಉಪಸ್ಥಿತರಿದ್ದರು.
ಈ ಸಾಲಿನಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಾಸ್ಟೆಲ್ ವಾರ್ಡನ್ ಚೇತನಾ ಜೆ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬಿ ನಾಯ್ಕ್ ವಂದಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *