ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಶನಿವಾರ ಸಂಜೆ ನಡೆದ ಪ್ರಚಾರ ರ್ಯಾಲಿ ವೇಳೆ ಸರಣಿ ಗುಂಡಿನ ದಾಳಿ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕಿವಿ ಮತ್ತು ಮುಖದ ಮೇಲೆ ಗಾಯವಾಗಿದ್ದು, ಕೂಡಲೇ ಅವರನ್ನ ವೇದಿಕೆಯಿಂದ ಸುರಕ್ಷಿತವಾಗಿ ಕಳುಹಿಸಲಾಗಿದೆ.
ಗುಂಡಿನ ದಾಳಿಯಿಂದ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಮುಖಕ್ಕೆ ರಕ್ತವಾಗಿದ್ದು, ಅಂಗರಕ್ಷಕರು ವೇದಿಕೆಯಿಂದ ಹೊರಗೆ ಕರೆತಂದರು. ಘಟನೆಯಲ್ಲಿ ಬಂದೂಕುಧಾರಿ ಮತ್ತು ಒಬ್ಬ ದಾರಿಹೋಕ ವ್ಯಕ್ತಿ ಮೃತಪಟ್ಟಿದ್ದು, ರ್ಯಾಲಿ ನೋಡಲು ಬಂದಿದ್ದ ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡೊನಾಲ್ಡ್ ಟ್ರಂಪ್ ಅವರು ಬುಲ್ಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಮತ್ತು ಗುಂಡಿನ ದಾಳಿಯಾಗುತ್ತಿದ್ದಂತೆ ಟ್ರಂಪ್ ಕುಳಿತರು. ಆದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಯಕ್ರಮ ನಡೆಯುತ್ತಿದ್ದ 200-300 ಯಾರ್ಡ್ ದೂರದಿಂದ ಗುಂಡಿನ ದಾಳಿ ನಡೆದಿದೆ. ಎತ್ತರದ ಕಟ್ಟಡದ ಮೇಲೆ ಕುಳಿತು ಏರ್ ಗನ್ ಮೂಲಕ ದಾಳಿ ನಡೆಸಲಾಗಿದೆ. ಒಟ್ಟು ಎಂಟು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಒಬ್ಬ ಸಾರ್ವಜನಿಕ ಹತ್ಯೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನೆ ಬಳಿಕ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ನನ್ನ ಬಲ ಕಿವಿಯ ಮೇಲಿನ ಭಾಗದ ಮೇಲೆ ಗುಂಡು ಹಾರಿ ಹೋಗಿದೆ. ಸ್ಯದ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ.