Author: karavalinews

ಅಜೆಕಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಹಕಾರಿ ಧುರೀಣ ಭವಾನಿ ಶಂಕರ್ ನಿಧನ

ಕಾರ್ಕಳ: ಅಜೆಕಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸಹಕಾರಿ ಧುರೀಣ ಹೆರ್ಮುಂಡೆ ಕಲಾಯಿಗುತ್ತು ಭವಾನಿ ಶಂಕರ್ (60) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮುಂಜಾನೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ 30 ವರ್ಷಗಳಿಂದ ಸಹಕಾರಿ ಸಂಘದಲ್ಲಿ ಸೇವೆ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:03.09.2023, ಭಾನುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ನಿಜ ಶ್ರಾವಣ ಮಾಸ(ಸೋಣ) ಕೃಷ್ಣಪಕ್ಷ, ನಕ್ಷತ್ರ: ರೇವತಿ, ರಾಹುಕಾಲ 05:08 ರಿಂದ 06:40 ಗುಳಿಕಕಾಲ-03:35 ರಿಂದ 05:08 ಸೂರ್ಯೋದಯ (ಉಡುಪಿ) 06:22 ಸೂರ್ಯಾಸ್ತ – 06:40 ದಿನವಿಶೇಷ: ಸಂಕಷ್ಟಹರ ಚತುರ್ಥಿ…

ನಿಟ್ಟೆ: ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಕಾರ್ಕಳ : ಮೂಡಬಿದ್ರೆ ತಾಲೂಕು ಮಿಜಾರು ನಿವಾಸಿ ಹರೀಶ್ ಎಂಬವರ ಸೋದರಮಾವ ಸುಧಾಕರ ಸುವರ್ಣ ಎಂಬವರು ಆಗಸ್ಟ್ 26ರಂದು ಸಂಜೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪದವು ಎಂಬಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಏಕಾಏಕಿ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದರು. ಪರಿಣಾಮ ಸುಧಾಕರ…

ಬೈಲೂರು ಪರಶುರಾಮ ಪ್ರತಿಮೆಯ ಗುಣಮಟ್ಟ ಪರಿಶೀಲನೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ

ಕಾರ್ಕಳ:ಯರ್ಲಪಾಡಿ ಗ್ರಾಮದ ಬೈಲೂರಿನ ಉಮಿಕಳ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರವಾಗಿದ್ದು ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟ ಪರಿಶೀಲನೆಯ ಬೇಡಿಕೆ ಈಡೇರುವವರೆಗೆ ಸಮಾನ ಮನಸ್ಕ ಹೋರಾಟಗಾರರು ಶನಿವಾರದಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ…

ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ

ನವದೆಹಲಿ : ಕೋಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 1ರಿಂದಲೇ ಅವರು ಈ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬ್ಯಾಂಕ್ ಸೆಪ್ಟೆಂಬರ್ 2 ರಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.…

ಕಾರ್ಕಳ: ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ

ಕಾರ್ಕಳ: ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಮಾಸಿಕ ಸಭೆಯು ಶುಕ್ರವಾರ ನಡೆಯಿತು. ಸಂಘದ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರವು ಕಸ್ತೂರಿ ರಂಗನ್ ವರದಿಯ ಅನುಷ್ಟಾನಕ್ಕೆ ಚಿಂತನೆ ನಡೆಸುತ್ತಿದ್ದು ಭಾರತೀಯ ಕಿಸಾನ್ ಸಂಘವು ಈಗಾಗಲೇ…

ಮಂಗಳೂರು : ಶ್ರೀಕೃಷ್ಣ ಜನ್ಮಾಷ್ಟಮಿ, ಕಾರ್ಯಕ್ರಮ ಆಯೋಜನೆಗೆ ಪೊಲೀಸ್ ಅನುಮತಿ ಕಡ್ಡಾಯ

ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಯೋಜನೆ ಮಾಡಲು ಪೋಲಿಸ್ ಅನುಮತಿಯನ್ನು ಕಡ್ಡಾಯಗೊಳಿಸಲಾಗಿದೆ. ಮೊಸರು ಕುಡಿಕೆಯ ಮಡಿಕೆಗಳನ್ನು 14 ಫೀಟ್ ಎತ್ತರದವರೆಗೆ ಮಾತ್ರ ಕಟ್ಟಬೇಕು, ಮಡಿಕೆ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಟ್ಟುವಂತಿಲ್ಲ ಹಾಗೂ ಮಡಿಕೆ ಒಡೆಯುವ ಸ್ವಯಂಸೇವಕರ…

ಕಾಂತಾವರ ಮಹಾವೀರ ಪಾಂಡಿ ಅವರಿಗೆ 2023ರ ಯಕ್ಷತೀರ್ಥ ಪ್ರಶಸ್ತಿ ಪ್ರದಾನ

ಕಾರ್ಕಳ: ಯಕ್ಷತೀರ್ಥ ಕಲಾಸೇವೆ ನೂರಾಳ್ ಬೆಟ್ಟು ಸದಾನಂದ ಆಚಾರ್ಯರ ಸಂಯೋಜನೆಯ 4 ನೇ ವರ್ಷದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ಯಕ್ಷಗಾನ ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರನ್ನು ಹಾಗೂ ಬಜಗೋಳಿಯ ಸಾಯಿ ಜ್ಯುವೆಲ್ಲರ್ಸ್ ನ ಪ್ರಸಾದ್ ಸಿ ಆಚಾರ್ಯರನ್ನು ನಾರಾವಿ ಧರ್ಮಶ್ರೀ…

ಪಾಲಡ್ಕ :ನಾಳೆ (ಸೆ.3) ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 169 ನೇ ಜನ್ಮದಿನ ದಿನಾಚರಣೆ

ಮೂಡಬಿದಿರೆ: ತಾಲೂಕಿನ ಕಡಂದಲೆ ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 169 ನೇ ಜನ್ಮ ದಿನಾಚರಣೆ ನಾಳೆ (ಸೆಪ್ಟೆಂಬರ್ .3) ನಡೆಯಲಿದೆ ಬೆಳಿಗ್ಗೆ 8:30 ರಿಂದ ಭಜನಾ ಕಾರ್ಯಕ್ರಮ, 12…

ಆದಿತ್ಯ L1 ಉಡಾವಣೆ ಯಶಸ್ವಿ:ಭಾರತದ ಹಿರಿಮೆಯನ್ನು ಸೂರ್ಯನ ಎತ್ತರಕ್ಕೆ ಏರಿಸಿದ ಇಸ್ರೋ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌1 ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ (PSLV-XLC57) ಉಡಾವಣೆ ಯಶಸ್ವಿಯಾಗಿದೆ…