
ಕಾರ್ಕಳ, ಜೂ.12: ವೈಯುಕ್ತಿಕ ದ್ವೇಷದಿಂದ ಯುವಕರ ತಂಡವೊAದು ಟೆಂಪೋ ಅಡ್ಡಗಟ್ಟಿ ವಾಹದ ಗಾಜು ಒಡೆದು ಯುವಕನಿಗೆ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಕಾರ್ಕಳದ ನಿಟ್ಟೆ ಗ್ರಾಮದ ಮೊಹಮ್ಮದ್ ಶಬೀಬ್ (24) ಎಂಬವರು ಹಲ್ಲೆಗೊಳಗಾದ ವ್ಯಕ್ತಿ. ಮೊಹಮ್ಮದ್ ಶಬೀಬ್ ತನ್ನ ತಮ್ಮ ಅಬ್ದುಲ್ ಮಲಿಕ್ ಜೊತೆ ಜೂ.12 ರಂದು ಬೆಳಗ್ಗೆ ನಿಟ್ಟೆಯಿಂದ ತನ್ನ ಟೆಂಪೋದಲ್ಲಿ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಆರೋಪಿ ಮಹಮ್ಮದ್ ಹುನೈಸ್ ಎಂಬಾತ ಅನೀಸ್ ಮತ್ತು ಶಿಯಾನ್ ಜೊತೆ ಕಾರಿನಲ್ಲಿ ಟೆಂಪೋವನ್ನು ಹಿಂಬಾಲಿಸಿಕೊAಡು ಬಂದು ಹೊಡೆಯುತ್ತೇನೆಂದು ಬ್ಯಾಟ್ ತೋರಿಸಿದಾಗ ಹೆದರಿದ ಮೊಹಮ್ಮದ್ ಶಬೀಬ್ ವಾಪಾಸು ಮನೆಗೆ ಹೋಗಲು ತನ್ನ ವಾಹನವನ್ನು ತಿರುಗಿಸಿ ವಾಪಾಸು ಹೋಗುತ್ತಿದ್ದಾಗ ನಿಟ್ಟೆ ಗ್ರಾಮದ ದೂಪದಕಟ್ಟೆ ಹತ್ತಿರ ತಲುಪುವಾಗ ಮಹಮ್ಮದ್ ಹುನೈಸ್ ತನ್ನ ಕಾರನ್ನು ಮೊಹಮ್ಮದ್ ಶಬೀಬ್ ಅವರ ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿ ಕಾರಿನಿಂದ ಇಳಿದು ವಾಹನದ ಗಾಜನ್ನು ಬ್ಯಾಟಿನಿಂದ ಒಡೆದು ಅವಾಚ್ಯ ಶಬ್ದಗಳಿಂದ ಬೈದು ಬ್ಯಾಟಿನಿಂದ ಹೊಡೆದು, ಎಳೆದು ಕಾಲಿನಿಂದ ತುಳಿದು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾನೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
