
ಕಾರ್ಕಳ, ಜೂ.12: ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಅಧಿಕಾರ ವಹಿಸಿಕೊಂಡ ದಿನದಿಂದ ಬಿಜೆಪಿ ನಾಯಕರು ನಿರಂತರವಾಗಿ ಅವಹೇಳನಕಾರಿ ಟೀಕೆಗಳನ್ನು ಮಾಡುತ್ತಿದ್ದು, ಇವರಿಂದ ಪ್ರೇರಿತನಾಗಿ ಕಾರ್ಕಳದ ಬಿಜೆಪಿ ಕಾರ್ಯಕರ್ತ ಸುಧೀರ್ ಬಂಗೇರ ಎಂಬಾತ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದು ಖಂಡನೀಯ, ಸಚಿವರನ್ನು ನಿಂದಿಸಿದ ಸುಧೀರ್ ಬಂಗೇರ ಪರವಾಗಿ ಸಮರ್ಥನೆ ಮಾಡುತ್ತಿರುವ ಬಿಜೆಪಿ ನಾಯಕರ ನಡೆ ಆಘಾತಕಾರಿಯಾಗಿದೆ ಎಂದು ದಲಿತ ಮುಖಂಡ ಅಣ್ಣಪ್ಪ ನಕ್ರೆ ಹೇಳಿದ್ದಾರೆ.
ಅವರು ಶುಕ್ರವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದಲಿತ ಸಮುದಾಯದ ನಿಮ್ಮನ್ನು ಮುಗಿಸುತ್ತೇನೆ ಎಂದು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪಿಯ ಬೆಂಬಲಕ್ಕೆ ನಿಂತಿರುವುದು ಬಿಜೆಪಿ ನಾಯಕರ ದಲಿತ ವಿರೋಧಿ ನೀತಿಯಾಗಿದೆ. ದಲಿತ ಸಮುದಾಯದವರನ್ನು ನಿಂದಿಸುವವರ ಪರವಾಗಿ ಸಮರ್ಥನೆ ಮಾಡುತ್ತಿರುವ ಬಿಜೆಪಿಗೆ ದಲಿತರ ಮತಗಳು ಬೇಡವೇ ಎನ್ನುವುದನ್ನು ಸ್ಪಷ್ಟಪಡಿಸಲಿ, ದಲಿತರ ನಿಂದನೆ ಬಿಜೆಪಿ ಪಕ್ಷದಲ್ಲಿನ ದಲಿತ ಘಟಕದ ನಾಯಕರುಗಳಿಗೆ ಒಪ್ಪಿಗೆ ಇದೆಯೇ ಎಂದು ಅಣ್ಣಪ್ಪ ನಕ್ರೆ ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿ ರಾಘವ, ಪ್ರತಿಮಾ ರಾಣೆ, ಶ್ರೀಧರ್ ಬೈಲೂರು, ದೇವದಾಸ್ ದುರ್ಗ ಉಪಸ್ಥಿತರಿದ್ದರು.


.
.
.
.
.
.
.
.
.
.
.
.
.
.
.
.
.
.
.
.
