ಕಾರ್ಕಳ: ಕ್ರೇನ್ ನ ಚಕ್ರ ಕೆಳಗೆ ನಿಂತಿದ್ದ ವ್ಯಕ್ತಿಯ ಕಾಲಿನ ಮೇಲೆ ಚಲಿಸಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬೈಲೂರಿನಲ್ಲಿ ಭಾನುವಾರ ನಡೆದಿದೆ.
ಕೆಲಸದ ನಿಮಿತ್ತ ಕಾರ್ಕಳದಿಂದ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ದಿನೇಶ್ ಎಂಬವರು ಬೈಲೂರು ಬಸ್ರಿ ಶಾಲೆಯ ಬಳಿ ಕ್ರೇನ್ ಅನ್ನು ನಿಲ್ಲಿಸಲು ತೆರಳಿದಾಗ ದಿನೇಶ್ ರವರ ಎಡಕಾಲಿನ ಮೇಲೆ ಎಡಚಕ್ರ ಚಲಿಸಿದ ಪರಿಣಾಮ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
