Share this news

ಕಾರ್ಕಳ: ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಹಾಗೂ ಬಾಯ್ಸ್ ಝೋನ್ ಸಹಭಾಗಿತ್ವದಲ್ಲಿ ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಡಿ.27,28 ಮತ್ತು 29 ರಂದು ಕಾರ್ಲೋತ್ಸವ 2024 ನಡೆಯಲಿದೆ ಎಂದು ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ಸದಸ್ಯರಾದ ಪ್ರಕಾಶ್ ರಾವ್ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಉತ್ಸವದಲ್ಲಿ ಸುಮಾರು 200 ಕ್ಕೂ ಅಧಿಕ ವಿವಿಧ ಸ್ಟಾಲ್‌ಗಳು, ವಸ್ತುಪ್ರದರ್ಶನ, ಆಹಾರಮೇಳ, ಅಮ್ಯೂಸ್‌ಮೆಂಟ್ ಪಾರ್ಕ್, ಆನೆಕೆರೆ ಹಾಗೂ ರಾಮ ಸಮುದ್ರದಲ್ಲಿ ಬೋಟಿಂಗ್ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಡಿ.27 ರಂದು ಸಂಜೆ 3 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.ವಿವಿಧ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.

ಡಿ.25 ರಿಂದಲೇ ಅಮ್ಯೂಸ್‌ಮೆಂಟ್ ಪಾರ್ಕ್ ತೆರೆಯಲಿದ್ದು,ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ವೇದಿಕೆ ಕಾರ್ಯಕ್ರಮವು ಪ್ರತಿದಿನ ಸಂಜೆ ಆರಂಭಗೊಳ್ಳಲಿದೆ. ಡಿ.27ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಹುಲಿವೇಷ, ವಾಯಲಿನ್, ಚೆಂಡೆ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಡಿ.28 ರಂದು ವಿಶೇಷ ಆಕರ್ಷಣೆಯಾಗಿ ಆಲ್ ಒಕೆ ಬ್ಯಾಂಡ್ ನಡೆಯಲಿದೆ. ಬಾಲಿವುಡ್ ಕೊರಿಯೋಗ್ರಾಫರ್, ನೃತ್ಯಪಟು ಹಾಗೂ ನಟ ಧರ್ಮೇಶ್ ಎಲಾಂಡೆ ಅವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಡಿ.29 ರಂದು ಚಲನಚಿತ್ರ ನಟರ ಕೂಡುವಿಕೆಯಲ್ಲಿ ಸ್ಟಾರ್ ನೈಟ್ ಕಾರ್ಯಕ್ರಮ ಹಾಗೂ ಬಾಯ್‌ಜೋನ ನೃತ್ಯ ತಂಡದವರಿಂದ ಪ್ರತಿದಿನ ನೃತ್ಯ ಕಾರ್ಯಕ್ರಮ ನಡೆಯಲಿದೆ. ಡಿ. 29 ರಂದು ಸಮಾರೋಪ ನಡೆಯಲಿದೆ ಎಂದು ಪ್ರಕಾಶ್ ರಾವ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *