Share this news

 

 

ಕಾರ್ಕಳ, ಮಾ,27: ಕೋಳಿಯ ಹಣ ಕೇಳಿದ ಎನ್ನುವ ಕಾರಣಕ್ಕೆ ಎರಡು ತಂಡಗಳ ನಡುವೆ ಜಗಳ ನಡೆದು ದಲಿತ ವ್ಯಕ್ತಿಯನ್ನು ನಿಂದಿಸಿ ಆತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಕ್ರಮ ಮರಳು ದಂಧೆಕೋರನ ಹಾಗೂ ಆತನ ಗ್ಯಾಂಗ್ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕಡ್ತಲದ ಹರೀಶ್ ಪೂಜಾರಿ ಹಾಗೂ ಮುಟ್ಲುಪಾಡಿಯ ಸುದರ್ಶನ ಶೆಟ್ಟಿ ಯಾನೆ ಬಾಬು ಎಂಬವರ ಮಧ್ಯೆ ಕೋಳಿಯ ಹಣ ಪಾವತಿ ವಿಚಾರದಲ್ಲಿ ಜಗಳವಾಗಿದ್ದು, ಇದೇ ವಿಚಾರದಲ್ಲಿ ಹರೀಶ್ ಪೂಜಾರಿ ಮತ್ತು ಆತನ ತಂಡ ಸುದರ್ಶನ ಶೆಟ್ಟಿ ಎಂಬವರ ಮನೆಗೆ ಹೋಗಿ ಸುದರ್ಶನ ಶೆಟ್ಟಿಯವರ ತೋಟದ ಕೆಲಸಗಾರ ಪದ್ಮ ಎಂಬವರÀ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಸುದರ್ಶನ ಶೆಟ್ಟಿ ಊರಿನ ಕೋಳಿಗಳನ್ನು ಸಾಕುತ್ತಿದ್ದು, ಹರೀಶ್ ಅವರು ಸುದರ್ಶನ ಶೆಟ್ಟಿಯವರಿಂದ ಕೋಳಿಗಳನ್ನು ಖರೀದಿಸಿದ್ದರು. ಹರೀಶ್ ಪೂಜಾರಿಯವರು . ಸುದರ್ಶನ ಶೆಟ್ಟಿಗೆ ಕೋಳಿಯ ಹಣದ ನೀಡದ ವಿಚಾರವಾಗಿ ಇವರಿಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಇದೇ ವಿಚಾರದಲ್ಲಿ ಮಾ 26ರಂದು ಗುರುವಾರ ರಾತ್ರಿ ಸುದರ್ಶನ ಶೆಟ್ಟಿಯವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿ ಹರೀಶ್ ಪೂಜಾರಿ, ಸುಧೀರ್,ದುರ್ಗಾ, ಗುರುದೀಶ್, ಪ್ರತಾಪ್ ಸೇರಿ 15 ಜನರ ತಂಡ ಸುದರ್ಶನ ಶೆಟ್ಟಿ ಹಾಗೂ ಆಕಾಶ್ ಎಂಬವರಿಗೆ ಹಲ್ಲೆ ನಡೆಸಿದಾಗ ಇದನ್ನು ತಡೆಯಲು ಬಂದ ಕೆಲಸಗಾರ ಪದ್ಮ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

Leave a Reply

Your email address will not be published. Required fields are marked *