Category: ಅಪರಾಧ

ಮಂಗಳೂರು: ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನಾಪತ್ತೆ

ಮಂಗಳೂರು: ಮರವೂರು ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ ನಾಲ್ವರು ಯುವಕರ ಪೈಕಿ ಇಬ್ಬರು ಯುವಕರು ನೀರುಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ. ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ನೀರಿನ ಸುಳಿಗೆ ಸಿಲುಕಿ ನಾಪತ್ತೆಯಾದ…

ಕುಂದಾಪುರ : ಬೈಕ್‌ ಬುಲೆಟ್‌ ಮುಖಾಮುಖಿ ಢಿಕ್ಕಿ: ಬೈಕ್‌ ಸವಾರ ಸಾವು, ಇಬ್ಬರಿಗೆ ಗಾಯ

ಕುಂದಾಪುರ: ಬೈಕ್‌ ಹಾಗೂ ಬುಲೆಟ್‌ ಮುಖಾಮುಖಿ ಢಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟ ಘಟನೆ ಕುಂದಾಪುರ ನಗರ ಸಮೀಪದ ಹಂಗಳೂರಿನ ನಗು ಪ್ಯಾಲೇಸ್‌ ಎದುರುಗಡೆಯ ಸರ್ವೀಸ್‌ ರಸ್ತೆಯಲ್ಲಿ ರಾತ್ರಿ 11.00 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಕುಂದಾಪುರ ನಗರದ ಬರೆಕಟ್ಟುವಿನ…

ಪಡುಬಿದ್ರೆ:10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾಕೆ ಬೆಂಗಳೂರಿನಲ್ಲಿ ಪತ್ತೆ: ಗಂಡನೊಂದಿಗೆ ಜೀವನ ನಡೆಸಲು ನಿರಾಕರಣೆ: ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ ಪೊಲೀಸರು

ಪಡುಬಿದ್ರೆ: ಕಳೆದ 2014ರಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯನ್ನು ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಪಡುಬಿದ್ರೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆಹಚ್ಚಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಲಿಮಾರು ನಿವಾಸಿ ಶಂಕರ ಶೆಟ್ಟಿ ಎಂಬವರ ಪತ್ನಿ ಶ್ರುತಿ ಶೆಟ್ಟಿ ಎಂಬವರು ಪತ್ತೆಯಾದ ಮಹಿಳೆ.…

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಯ ಅಂಗಡಿಗೆ ಬೆಂಕಿ ಹಚ್ಚಿ ಆಕ್ರೋಶ: ವ್ಯಾಪಾರ ಪರವಾನಗಿ ರದ್ದುಗೊಳಿಸುವಂತೆ ಆಗ್ರಹ

ವಿಟ್ಲ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ನಡೆದಿದೆ. ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ಅಂಗಡಿಗೆ ತೆರಳಿದ್ದ ಅಪ್ರಾಪ್ತ ಬಾಲಕಿಯ…

ಕಾರ್ಕಳ : ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾದ ಸಾಣೂರಿನ ಯುವಕ

ಕಾರ್ಕಳ : ಯುವಕನೋರ್ವ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆಗೆ ಶರಣಾದ ಘಟನೆ ಸೆ. 28ರಂದು ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸುಮನ್‌ ಶೆಟ್ಟಿ (22) ಎಂದು ಗುರುತಿಸಲಾಗಿದೆ. ಕಡಬಬೆಟ್ಟು ಜನನಿಬೀಡ ಪ್ರದೇಶದಲ್ಲಿರುವ ಬಾವಿಗೆ ಸುಮನ್‌ ಹಾರಿದ್ದು, ಆತ್ಮಹತ್ಯೆಗೆ ನಿಖರ ಕಾರಣ…

ಮಂಗಳೂರು : ಚಲಿಸುತ್ತಿದ್ದ ಬಿಎಂಡಬ್ಲ್ಯೂ ಕಾರಿನಲ್ಲಿ ಆಕಸ್ಮಿಕ ಬೆಂಕಿ : ಹೆದ್ದಾರಿ ಮಧ್ಯೆ ಹೊತ್ತಿ ಉರಿದ ಕಾರು

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯೂ ಕಾರೊಂದು ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಸೆ.28 ರಂದು ಶನಿವಾರ ಸಂಭವಿಸಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ಸಂಭವಿಸಿದ್ದು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾರು ಚಾಲಕ ಕಾರನ್ನು…

ಮಸೀದಿ ಮುಂದೆ ‘ಭಾರತ್ ಮಾತಾ ಕಿ ಜೈ’ ಘೋಷಣೆ ಕೂಗುವುದು ದ್ವೇಷದ ಘೋಷಣೆಯಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಭಾರತ್ ಮಾತಾ ಕಿ ಜೈ. ಇದು ಕೋಮುಗಲಭೆ ಸೃಷ್ಟಿಸುವ ಘೋಷಣೆ ಎಂದು ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ವಿಶೇಷ ವಿಚಾರಣೆ ನಡೆದಿದ್ದು ದಕ್ಷಿಣ ಕನ್ನಡದ ಬೋಳಿಯಾರ್‌ನಲ್ಲಿ ನಡೆದ ಚಾಕು ಇರಿತ ಪ್ರಕರಣ ವಿಚಾರಣೆಯಲ್ಲಿ.…

ಕಾರ್ಕಳ : ಮುಡಾರಿನ ಮನೆಯೊಂದರ ಸೋಫಾದಲ್ಲಿ ಗಾಂಜಾ ಪತ್ತೆ: ಪ್ರಕರಣ ದಾಖಲು

ಕಾರ್ಕಳ: ಮುಡಾರಿನ ಮನೆಯೊಂದರಲ್ಲಿ ಸೆ. 26 ರ ಗುರುವಾರ ಗಾಂಜಾ ಪತ್ತೆಯಾಗಿದ್ದು, ಗಾಂಜಾ ಸಹಿತ ಆರೋಪಿಯನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ. ಮುಡಾರು ಗ್ರಾಮದ ಮಿಯಾರು ಸೇತುವೆ ಬಳಿಯ ಶಾಜಿ ಮ್ಯಾಥ್ಯೂ ಎಂಬವರು 2023ರಲ್ಲಿ ಗಾಂಜಾ ಕೇಸ್ಗೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ…

ಕುಕ್ಕುಜೆ: ಸ್ಟುಡಿಯೋ ಮಾಲಕ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಕುಕ್ಕುಜೆ ಗ್ರಾಮದ ದೊಂಡೇರಂಗಡಿಯಲ್ಲಿ ಅನನ್ಯ ಫೋಟೋ ಸ್ಟುಡಿಯೋ ನಡೆಸಿಕೊಂಡಿದ್ದ ಕುಕ್ಕುಜೆ ಬಾವಲಿಮನೆ ನಿವಾಸಿ ಅಶೋಕ ಶೆಟ್ಟಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಧ್ಯಾಹ್ನ ಊಟಕ್ಕೆಂದು ಹೋದವರು ಮಹಡಿಯಲ್ಲಿ ನೇಣು…

ಮಂಗಳೂರು : ತೋಟ ಬೆಂಗ್ರೆ ಮೇಸ್ತ್ರಿ ಕೊಲೆ ಪ್ರಕರಣ :ಆರೋಪಿ ಧರ್ಮರಾಜ್ ಸುವರ್ಣ ಬಂಧನ

ಮಂಗಳೂರು : ತೋಟ ಬೆಂಗ್ರೆ ಪ್ರದೇಶದಲ್ಲಿ ನಡೆದಿದ್ದ ಮೇಸ್ತ್ರಿ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊಬೈಲ್ ವಾಪಾಸ್ ಕೊಡದಕ್ಕೆ ಮೇಸ್ತ್ರಿ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಕೊಲೆ ಮಾಡಲಾಗಿದೆ ಎಂದು ತನಿಖೆ…