Category: ಅಪರಾಧ

ಭಾರತದಲ್ಲಿ ರಿಸಿನ್‌ ವಿಷದ ಪ್ರಯೋಗ ಮಾಡಲು ಮುಂದಾಗಿದ್ದ ಐಸಿಸ್‌ ಉಗ್ರ: ಕುಡಿಯುವ ನೀರು ಮತ್ತು ದೇವಸ್ಥಾನಗಳ ಪ್ರಸಾದದಲ್ಲಿ ವಿಷ ಬೆರೆಸಿ ಸಾಮೂಹಿಕ ಹತ್ಯೆಗೆ ಮುಂದಾಗಿದ್ದ ಉಗ್ರರ ಬಂಧನ

ನವದೆಹಲಿ: ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐಸಿಸ್ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಭಯಾನಕ ಸಂಗತಿಗಳು ಹೊರಬಿದ್ದಿವೆ. ಬಂಧಿತರಲ್ಲಿ ಒಬ್ಬನಾದ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್ ಜಗತ್ತಿನ ಅತ್ಯಂತ ಮಾರಣಾಂತಿಕ ವಿಷಗಳಲ್ಲಿ ಒಂದಾದ ‘ರಿಸಿನ್‌’ ಅನ್ನು ತಯಾರಿಕೆಯಲ್ಲಿ ತೊಡಗಿದ್ದು,…

ಅಜೆಕಾರು: ಹೃದಯಾಘಾತದಿಂದ ಯುವಕ ಮೃತ್ಯು

ಕಾರ್ಕಳ, ನ.08: ತೀವೃ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಜೆಕಾರಿನ ಯುವಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ದಾರುಣ ಘಟನೆ ಶನಿವಾರ ನಡೆದಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಮೊಗಂಟೆಯ ಸುದರ್ಶನ ಶೆಟ್ಟಿ ಎಂಬವರ ಪುತ್ರ ಪುನೀತ್ ಶೆಟ್ಟಿ(37ವ) ಎಂಬವರು ಮೃತಪಟ್ಟ…

ಕಾರ್ಕಳ: ಸಾಣೂರಿನ ವ್ಯಕ್ತಿ ನಾಪತ್ತೆ

ಕಾರ್ಕಳ: ತಾಲೂಕಿನ ಸಾಣೂರು ಗ್ರಾಮದ ಪ್ರಶಾಂತ (35) ಎಂಬವರು ನ. 05 ರಿಂದ ನಾಪತ್ತೆಯಾಗಿದ್ದಾರೆ. ಅಂದು ಬೆಳಿಗ್ಗೆ 8:30 ಗಂಟೆಗೆ ಅವರ ಮನೆ ಪವಮಾನ ನಿವಾಸದಿಂದ ಕಾರಿನಲ್ಲಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್…

ಕಾರ್ಕಳ: ಅಕ್ರಮ ಮರಳು ಸಾಗಾಟ,ಪ್ರಕರಣ ದಾಖಲು

ಕಾರ್ಕಳ: ನುರಾಳ್‌ ಬೆಟ್ಟು ಕ್ರಾಸ್‌ ಬಳಿ ನೂರಾಳ್‌ ಬೆಟ್ಟು ಕಡೆಯಿಂದ ಹೊಸ್ಮಾರ್ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಕಪ್‌ ಚಾಲಕ ಜೀವಿತ್‌ ಮತ್ತು ಈದು ಗ್ರಾಮದ ಪ್ರಶಾಂತ್‌ ಸೇರಿಕೊಂಡು ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆಯದೇ ಈದು ಗ್ರಾಮದ ಕುಡ್ಯೆ…

ಕಾಡುಹೊಳೆಯಲ್ಲಿ ಪಿಕಪ್-ಕಾರು-ಬೈಕ್ ಸರಣಿ ಅಪಘಾತ: ಪಿಕಪ್ ಚಾಲಕನ ಓವರ್’ಟೇಕ್ ಅವಾಂತರ: ಬೈಕ್ ಸವಾರನಿಗೆ ಗಾಯ

ಕಾರ್ಕಳ, ನ.06:ಕಾಡುಹೊಳೆ ಹಾಲಿನ ಡೈರಿನ ಸಮೀಪದ ಇಳಿಜಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಪಿಕಪ್ ಚಾಲಕ ಮುಂದಿನಿಂದ ಹೋಗುತ್ತಿದ್ದ ಬೈಕನ್ನು ಓವರ್’ಟೇಕ್ ಮಾಡಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಕಾರಿನ ಡಿಕ್ಕಿಯಾದ ಪಿಕಪ್ ಬಳಿಕ ಬೈಕಿಗೆ ಬಡಿದು ಬೈಕ್ ಸವಾರ ಗಾಯಗೊಂಡ ಘಟನೆ ಗುರುವಾರ…

ಅಜೆಕಾರು: ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕನ ಚಿನ್ನ ಎಗರಿಸಿದ್ದ ನಕಲಿ ಸಾಧು ಬಂಧನ

ಕಾರ್ಕಳ: ತಾಲೂಕಿನ ಅಜೆಕಾರಿನಲ್ಲಿ ಕಳೆದ9 ತಿಂಗಳ ಹಿಂದೆ ನಕಲಿ ಸಾಧುವಿನ ವೇಷದಲ್ಲಿ ಬಂದು ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕರೊಬ್ಬರ ಚಿನ್ನಾಭರಣವನ್ನು ಎಗರಿಸಿದ್ದ ಅಸಲಿ ಕಳ್ಳನನ್ನು ಪೊಲೀಸರು ಸೆರೆ ಹಿಡಿದು, ಆತನಿಂದ ಕಳವುಗೈದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಕಾರ್ಗೋನ್ ಜಿಲ್ಲೆಯ ಕರಣ್ ನಾಥ್ ಬಂಧಿತ…

ಕಾರ್ಕಳ: ಮಹಿಳೆಯ ಚಿನ್ನಾಭರಣ ಅಡವಿರಿಸಿ ವಂಚನೆ

ಕಾರ್ಕಳ: ಮಹಿಳೆಯೊಬ್ಬರನ್ನು ನಂಬಿಸಿ ಚಿನ್ನಾಭರಣ ಪಡೆದು ಅಡವಿರಿಸಿ ಹಣ ಪಡೆದು ಬಳಿಕ ಮಹಿಳೆಗೆ ಚಿನ್ನಾಭರಣಗಳನ್ನು ಬಿಡಿಸಿ ಕೊಡದೆ ವಂಚನೆ ಎಸಗಿರುವ ಪ್ರಕರಣ ನಡೆದಿದೆ. ಕಾರ್ಕಳ ಹಿರ್ಗಾನ ಗ್ರಾಮದ ನಿವಾಸಿಗಳಾದ ಸಯ್ಯದ್ ಯುನೀಸ್ ಹಾಗೂ ಸಯ್ಯದ್ ಸುಹೇಲ್ ಎಂಬವರು ಕಸಬಾ ಗ್ರಾಮದ ರುಭೀನಾ…

ಬೆಳ್ಮಣ್: ಪಾದಾಚಾರಿ ಮತ್ತು ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು: ಪಾದಾಚಾರಿ ಸಾವು, ಕಾರಿನಲ್ಲಿದ್ದ ಐವರಿಗೆ ಗಾಯ

ಕಾರ್ಕಳ: ತಾಲೂಕಿನ ಬೆಳ್ಮಣ್ ಗ್ರಾಮದ ಅರಣ್ಯ ಇಲಾಖೆಯ ಕಛೇರಿ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಅತೀವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ, ಬಳಿಕ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದ್ದು, ಕಾರು ಡಿಕ್ಕಿಯಾದ ಪಾದಾಚಾರಿ ವ್ಯಕ್ತಿ…

ಮಾಳ : ತೋಡಿಗೆ ಬಿದ್ದು ವ್ಯಕ್ತಿ ಸಾವು

ಕಾರ್ಕಳ: ತಾಲೂಕಿನ ಮಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ‌ಮೃತಪಟ್ಟಿದ್ದಾರೆ. ಮಾಳ ಗ್ರಾಮದ ಕನೆಗುಂಡಿ ಶ್ಯಾಮ ಮೇರ ಮೃತಪಟ್ಟವರು. ಅವರು ನ.4 ರಂದು ಕೃಷಿ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.

ನಿಟ್ಟೆ: ಎದೆನೋವಿನಿಂದ ವ್ಯಕ್ತಿ ಸಾವು

ಕಾರ್ಕಳ: ತಾಲೂಕಿನ ನಿಟ್ಟೆಯಲ್ಲಿ ವ್ಯಕ್ತಿಯೊಬ್ಬರು ಎದೆನೋವಿನಿಂದ ಮೃತಪಟ್ಟಿದ್ದಾರೆ. ನಿಟ್ಟೆಯ ರಮೇಶ ಅವರು ಮೈಸೂರಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು , ಅ. 23 ರಂದು ದೀಪಾವಳಿ ಹಬ್ಬಕ್ಕೆಂದು ಮನೆಗೆ ಬಂದಿದ್ದರು. ನ. 02 ರಂದು ರಾತ್ರಿ ಮನೆಯಲ್ಲಿ ತುಳಸಿ ಹಬ್ಬಕ್ಕೆ ಪಟಾಕಿ…