Category: ಅಪರಾಧ

ಫೇಸ್‌ ಬುಕ್‌ ಗೆಳತಿಯನ್ನು ನಂಬಿ 11 ಲಕ್ಷ ಕಳೆದುಕೊಂಡ ಕಾರ್ಕಳದ ಮಹಿಳೆ

ಉಡುಪಿ: ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ಮೂಲಕ ಪರಿಚಯವಾದ ಮಹಿಳೆಯನ್ನು ನಂಬಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಹಿಳೆಯೊಬ್ಬರು 11 ಲಕ್ಷಕ್ಕೂ ಹೆಚ್ಚು ಮೊತ್ತ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ 38 ವರ್ಷದ ನಿವಾಸಿಯೊಬ್ಬರಿಗೆ ಫೇಸ್‌…

ಸಾಣೂರು : ಮಾರುತಿ ಕಾರು- ಓಮ್ನಿ ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಾಯ

ಕಾರ್ಕಳ: ತಾಲೂಕಿನ ಸಾಣೂರು ಎಂಬಲ್ಲಿ ಮಾರುತಿ ಓಮ್ನಿ ಹಾಗೂ ಆಲ್ಟೋ ಕಾರು ಮುಖಾಮುಖಿ ಡಿಕ್ಕಿಯಾಗಿ ಎರಡೂ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಶೇಖ್ ಅಶ್ರಫ್ ಎಂಬವರು ಪತ್ನಿ ಸಾಜಿದಾ ಬಾನು, ಮಕ್ಕಳಾದ ಹನ ಸುಲ್ತಾನ, ಹಾಗೂ ಹಮ್ದಾನ್ ಎಂಬವರೊAದಿಗೆ ಭಾನುವಾರ ಸಂಜೆ ಕಾರ್ಕಳದಿಂದ ಬೆಳುವಾಯಿ…

ಮಂಗಳೂರು: ರೌಡಿಶೀಟರ್ ಇಲ್ಯಾಸ್ ಹತ್ಯೆ ಆರೋಪಿ ಸಮೀರ್ ಅಟ್ಟಾಡಿಸಿ ಬರ್ಬರ ಕೊಲೆ

ಮಂಗಳೂರು: ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕಡಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ಭಾನುವಾರ ನಡೆದಿದೆ. ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಹತ್ಯೆಯಾದ ವ್ಯಕ್ತಿ. ತಾಯಿ ಜೊತೆಗೆ ಕಲ್ಲಾಪುವಿನ…

ಕಾರ್ಕಳ: ಮದ್ಯವ್ಯಸನಿ ವ್ಯಕ್ತಿ ಕುಸಿದು ಬಿದ್ದು ಸಾವು

ಕಾರ್ಕಳ: ತಾಲೂಕಿನ ಬೋಳ ಗ್ರಾಮದ ಪದವು ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೂಲತಃ ತೀರ್ಥಹಳ್ಳಿಯ ಪ್ರವೀಣ್ ಡಯಾಸ್(37ವ) ಮೃತಪಟ್ಟವರು. ಅವಿವಾಹಿತರಾಗಿದ್ದ ಪ್ರವೀಣ್ ಗೆ ವಿಪರೀತ ಕುಡಿತದ ಚಟ ಇದ್ದು,ಕಳೆದ 3 ವರ್ಷಗಳಿಂದ ಮನೆಗೆ ಹೋಗುತ್ತಿರಲಿಲ್ಲ. ಆ.11 ರಂದು ಬೋಳ…

ಬೆಳ್ಮಣ್ : ಮನೆಯ ಬೀಗ ಮುರಿದು ಚಿನ್ನಾಭರಣ ದರೋಡೆ

ಕಾರ್ಕಳ: ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನಾಭರಣಗಳನ್ನು ದರೋಡೆಗೈದಿರುವ ಘಟನೆ ನಡೆದಿದೆ. ಜ್ಯೂಲಿಯಾನ ಮಥಾಯಸ್ ಎಂಬವರು ವಿದೇಶದಲ್ಲಿದ್ದು, ಜಂತ್ರದಲ್ಲಿರುವ ಅವರ ಮನೆಯಲ್ಲಿ ದರೋಡೆ ನಡೆದಿದೆ. ಜುಲೈ.28 ರಿಂದ ಆಗಸ್ಟ್.10 ರ ಮಧ್ಯಾವಧಿಯಲ್ಲಿ ಜ್ಯೂಲಿಯಾನ ಮಥಾಯಸ್…

ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಕಳೆದ 2 ವರ್ಷಗಳಿಂದ ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಶ್ರೀಧರ (41ವ) ಆತ್ಮಹತ್ಯೆ ಮಾಡಿಕೊಂಡವರು.ಅನಾರೋಗ್ಯ ಪೀಡಿತರಾಗಿದ್ದ…

ಕಾರ್ಕಳ: ಆನ್ಲೈನ್ ವಂಚನೆಯಿಂದ ಲಕ್ಷಾಂತರ ರೂ. ನಷ್ಟ

ಕಾರ್ಕಳ: ಆನ್ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ವಾದಿರಾಜ ಎಂಬವರ ಖಾತೆಗೆ ವಿಮಾ ಕಂಪೆನಿಯಿಂದ 3,67,269 ರೂ. ಹಣ ಬಂದಿದ್ದು, ಆಗಸ್ಟ್. 09 ರಂದು ಅವರ ಖಾತೆಯಲ್ಲಿದ್ದ 3,55,199 ರೂ. ಹಾಗೂ ಜಂಟಿ ಖಾತೆಯಿಂದ 299 ರೂ. ನಗದು…

ಮುನಿಯಾಲು: ಓವರ್’ಟೇಕ್ ಭರಾಟೆ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

ಹೆಬ್ರಿ: ವೇಗವಾಗಿ ಸಾಗುತ್ತಿದ್ದ ಕಾರೊಂದು ಎದುರಿನಿಂದ ಸಾಗುತ್ತಿದ್ದ ಕಾರನ್ನು ಓವರ್’ಟೇಕ್ ಮಾಡುವ ಭರದಲ್ಲಿ ಡಿವೈಡರ್’ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮಂಗಳೂರಿನಿಂದ ವಿದ್ಯಾರ್ಥಿಗಳ ತಂಡವು ಎರಡು ಕಾರುಗಳಲ್ಲಿ ಹೆಬ್ರಿ ಕಡೆಗೆ ಹೋಗುತ್ತಿದ್ದಾಗ ಮುನಿಯಾಲು…

ಮುಡಾರು: ಕಾಲುನೋವಿನಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆ

ಕಾರ್ಕಳ: ಕಾಲುನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ಗುಣಮುಖವಾಗದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮುಡಾರು ನಿವಾಸಿ ಹರಿಪ್ರಸಾದ್(30ವ) ಆತ್ಮಹತ್ಯೆಗೆ ಶರಣಾದ ಯುವಕ. ಹರಿಪ್ರಸಾದ್ ಕಳೆದ ಒಂದು ವರ್ಷದಿಂದ ಎರಡೂ ಕಾಲುಗಳ ನೋವಿನಿಂದ ಬಳಲುತ್ತಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ…

ಕಾರ್ಕಳ: ಮಾನಸಿಕ ಅಸ್ವಸ್ಥ ವ್ಯಕ್ತಿ ನಾಪತ್ತೆ

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಆಗಸ್ಟ್.3 ರಂದು ನಡೆದಿದೆ. ಕುಕ್ಕುಂದೂರಿನ ವಸಂತಿ ಎಂಬವರ ಪತಿ ವಿಶ್ವನಾಥ್ (45) ಕಳೆದ 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಳುತ್ತಿದ್ದು, ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.…