Category: ಅಪರಾಧ

ಪಶ್ಚಿಮ ಬಂಗಾಳದಲ್ಲಿ ಭೀಕರ ರೈಲು ಅಪಘಾತ : ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ಟ್ರೈನ್ ಡಿಕ್ಕಿ: 8ಕ್ಕೂ ಹೆಚ್ಚು ಮಂದಿ ದುರ್ಮರಣ

ನವದೆಹಲಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಭೀಕರ ರೈಲು ದುರಂತವೊಂದು ಸಂಭವಿಸಿದ್ದು, ಘಟನೆಯಲ್ಲಿ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸೀಲ್ದಾಹ್‌ಗೆ ಹೊರಟಿದ್ದ ಪ್ರಯಾಣಿಕ ರೈಲು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಈ…

ಕಾರ್ಕಳ: ಬಾಡಿಗೆ ಮನೆಯ ಹಕ್ಕಿನ ವಿಚಾರದಲ್ಲಿ ತಕರಾರು: ಮನೆ ಖಾಲಿ ಮಾಡಿಸುವಂತೆ ಮಹಿಳೆಗೆ ತಂಡದಿಂದ ಬೆದರಿಕೆ

ಕಾರ್ಕಳ:ಬಾಡಿಗೆ ಮನೆಯ ಹಕ್ಕಿನ ವಿಚಾರದಲ್ಲಿ ತಂಡವೊಂದು ಮಹಿಳೆಯನ್ನು ಮನೆಯಿಂದ ಹೊರದಬ್ಬಲು ಯತ್ನಿಸಿ ಜೀವ ಬೆದರಿಕೆ ಹಾಕಿದ ಘಟನೆ ಕಾರ್ಕಳದ ಕಸಬಾ ಗ್ರಾಮದ ಪೆರ್ವಾಜೆ ಎಂಬಲ್ಲಿ ನಡೆದಿದೆ. ಪೆರ್ವಾಜೆ ಭಾರತ್ ಬೀಡಿ ಕಂಪೌಂಡ್ ಎಂಬಲ್ಲಿ ಶೋಭಾ(64) ಎಂಬವರು ತನ್ನ ಬಾಡಿಗೆ ಹಕ್ಕಿನ ಮನೆಯಲ್ಲಿ…

ಕುಕ್ಕುಂದೂರು: ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರಿಗೆ ಗಾಯ

ಕಾರ್ಕಳ: ಬೈಕ್ ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಕುಕ್ಕುಂದೂರು ಗ್ರಾಮದ ಪಿಲಿಚಂಡಿ ತಾಣದ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ. ಉಡುಪಿ ತಾಲೂಕಿನ ಕೆರ್ಕಾಲ್ ಬೆಟ್ಟು ನಿವಾಸಿ ನಮನ್ (34) ಎಂಬವರು ಗುರುವಾರ ರಾತ್ರಿ 12:30 ಸುಮಾರಿಗೆ ಕಾರ್ಕಳ…

ದೇಶಾದ್ಯಂತ ಸ್ಲೀಪರ್‌ ಸೆಲ್‌ಗೆ ಉಗ್ರರಿಂದ ಸಂಚು: ಎನ್‌ಐಎ ಆರೋಪ ಪಟ್ಟಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ನವದೆಹಲಿ : 2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಸ್ಲೀಪರ್‌ಸೆಲ್‌ ಸ್ಥಾಪಿಸಿ ಈ ಸೆಲ್‌ ಸದಸ್ಯರನ್ನು ಬಳಸಿಕೊಂಡು ಸೇನೆ, ಪೊಲೀಸರು ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಾಯಕರ ಮೇಲೆ ದಾಳಿ ನಡೆಸುವ ಸಂಚನ್ನು ಕಳೆದ ವರ್ಷ ಕರ್ನಾಟಕದ ಬಳ್ಳಾರಿಯಲ್ಲಿ…

ನಟ ದರ್ಶನ್‌ ಬಚಾವ್‌ ಮಾಡಲು ಯಾರೂ ಯತ್ನಿಸಿಲ್ಲ: ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ ಅವರನ್ನು ಪ್ರಕರಣದಿಂದ ಬಚಾವ್‌ ಮಾಡಲು ಯಾರೂ ಪ್ರಯತ್ನ ಮಾಡಿಲ್ಲ. ಪೊಲೀಸರು ಮುಕ್ತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಅವರನ್ನು ಕೊಲೆ ಪ್ರಕರಣದಿಂದ ಬಚಾವ್‌…

ಫೇಸ್’ಬುಕ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅವಹೇಳನ-  ಫೋಟೋ ಎಡಿಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ವಿಕೃತಿ ಮೆರೆದ ಯುವಕನ ವಿರುದ್ಧ ದೂರು

ಕಾರ್ಕಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಶ್ರದ್ಧಾಂಜಲಿ ಸಲ್ಲಿಸುವಂತೆ ಎಡಿಟ್ ಮಾಡಿ ಅದಕ್ಕೆ ಹೂಮಾಲೆ ಹಾಗೂ ಊದುಬತ್ತಿ ಕಡ್ಡಿ ಹೊತ್ತಿಸಿ ಅವಹೇಳನ ಮಾಡಿದ ಕಾರ್ಕಳದ ಯುವಕನ ವಿರುದ್ಧ ಕಾರ್ಕಳ ಕಾಂಗ್ರೆಸ್ ವತಿಯಿಂದ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಮಂತ್…

ಹೆರ್ಮುಂಡೆ: ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತೆ: ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ

ಕಾರ್ಕಳ: ಹೆರ್ಮುಂಡೆ ಗ್ರಾಮದಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಬುಧವಾರ ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ನಾಲ್ಕೋಡಿ ನಿವಾಸಿ ಸಾಧು ಪೂಜಾರಿ(74) ಎಂಬವರು ಶವವಾಗಿ ಪತ್ತೆಯಾದ ವ್ಯಕ್ತಿ. ಅವರು ಜೂ 10ರಂದು ಸೋಮವಾರ ಸಂಜೆ…

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸ್ಪೋಟಕ ತಿರುವು: ಶವ ವಿಲೇವಾರಿಗೆ ಬರೋಬ್ಬರಿ 30 ಲಕ್ಷ ಪಡೆದ ದುರುಳರು!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ಆರೋಪಿಗಳು ಶವ ವಿಲೇವಾರಿಗೆ 30 ಲಕ್ಷ ರೂ. ಪಡೆದಿದ್ದರೆಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ರೇಣುಕಾಸ್ವಾಮಿ ಕೊಲೆಯಾದ ಬಳಿಕ ಮೃತದೇಹ ವಿಲೇವಾರಿಗೆ 30 ಲಕ್ಷ ರೂ. ಡೀಲ್ ಪಡೆದುಕೊಂಡಿದ್ದ ಗ್ಯಾಂಗ್‌, ರಾತ್ರಿಯಿಡಿ…

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಾಮೀಲು ಆರೋಪ: ಸ್ಟಾರ್ ನಟ ದರ್ಶನ್‌ ಬಂಧನ!

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯವರ ಕೊಲೆ ಪ್ರಕರಣದಲ್ಲಿ ಕನ್ನಡದ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ ಅವರನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ. ಸದ್ಯ ಮೈಸೂರಿನಿಂದ ಕಾಮಾಕ್ಷಿಪಾಳ್ಯಕ್ಕೆ ನಟ ದರ್ಶನ್‌ ಅವರನ್ನು ಕರೆತರಲಾಗುತ್ತಿದೆ.ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು…

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗೆಲುವಿನ ವಿಜಯೋತ್ಸವ : ಮಂಗಳೂರಿನ ಬೋಳಿಯಾರು ಸಮೀಪ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ!

ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗೆಲುವಿನ ವಿಜಯೋತ್ಸವದ ಬಳಿಕ ಮಸೀದಿ ಬಳಿ ಘೋಷಣೆ ಕೂಗಿದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿದು ಓರ್ವನಿಗೆ ಥಳಿಸಿರುವ ಘಟನೆಯೊಂದು ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ…