Category: ಅಪರಾಧ

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗೆಲುವಿನ ವಿಜಯೋತ್ಸವ : ಮಂಗಳೂರಿನ ಬೋಳಿಯಾರು ಸಮೀಪ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ!

ಮಂಗಳೂರು: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗೆಲುವಿನ ವಿಜಯೋತ್ಸವದ ಬಳಿಕ ಮಸೀದಿ ಬಳಿ ಘೋಷಣೆ ಕೂಗಿದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿದು ಓರ್ವನಿಗೆ ಥಳಿಸಿರುವ ಘಟನೆಯೊಂದು ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ…

ಮುನಿಯಾಲು: ಅಡಿಕೆ ಮರಬಿದ್ದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು

ಹೆಬ್ರಿ: ಆಯುಷ್ಯ ಮುಗಿದರೆ ಸಾವು ಯಾವ ಕ್ಷಣದಲ್ಲಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆಹೆಬ್ರಿ ತಾಲೂಕಿನ ಮುನಿಯಾಲು ಸಮೀಪದ ಮಾತಿಬೆಟ್ಟು ಎಂಬಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ವರಂಗ ಗ್ರಾಮದ ಮಾತಿಬೆಟ್ಟು ನಿವಾಸಿ ಶಂಕರ (62) ಎಂಬವರು ಶನಿವಾರ ಮಧ್ಯಾಹ್ನ ಸುಮಾರು 2.30ರ…

ನಿಟ್ಟೆ: ಮದ್ಯವ್ಯಸನಿ ಕಾರ್ಪೆಂಟರ್ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ:ವಿಪರೀತ ಮದ್ಯಪಾನದ ಚಟ ಹೊಂದಿದ್ದ ಕಾರ್ಪೆಂಟರ್ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ನಿಟ್ಟೆ ತಾನದಗುಡ್ಡೆ ಎಂಬಲ್ಲಿನ ನಿವಾಸಿ ಪ್ರೇಮಾನಂದ ಆತ್ಮಹತ್ಯೆ ಮಾಡಿಕೊಂಡ ಕಾರ್ಪೆಂಟರ್. ಮದ್ಯವ್ಯಸನಿ ಪ್ರೇಮಾನಂದ ಕುಡಿದುಬಂದು ನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದ…

ಕಾರ್ಕಳ:ಮಾನಸಿಕ ಅಸ್ವಸ್ಥ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ:ಕಳೆದ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಕಸಬಾ ನಿವಾಸಿ ವೀಣಾ (62) ಇವರಿಗೆ 13 ವರ್ಷದ ಹಿಂದೆ ಬಿದ್ದು ತಲೆಗೆ ಗಾಯವಾಗಿತ್ತು. ಬಳಿಕ ತಲೆಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ…

ಆನ್‌ಲೈನ್ ಶೇರು ವ್ಯವಹಾರದ ನೆಪದಲ್ಲಿ ಕಾರ್ಕಳದ ವ್ಯಕ್ತಿಗೆ ಬರೋಬ್ಬರಿ 32 ಲಕ್ಷ ರೂ ವಂಚನೆ

ಕಾರ್ಕಳ:ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಕೊಡುವುದಾಗಿ ನಂಬಿಸಿದ ವ್ಯಕ್ತಿಯೋರ್ವ ಡಿಮ್ಯಾಟ್ ಖಾತೆ ತೆರೆದು ಪಿರ್ಯಾದಿದಾರರಾದ ಜಾಯ್ಸನ್‌ ಬರೋಬ್ಬರಿ 32 ಲಕ್ಷ ರೂ ಪಂಗನಾಮ ಹಾಕಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಜಾಯ್ಸನ್ ವಿಲಿಯಂ ಡಿಸೋಜಾ ಎಂಬವರು ಮೋಸಕ್ಕೆ ಒಳಗಾದವರು.…

ಕಾರ್ಕಳ: ದೇವಸ್ಥಾನದ ಲೆಕ್ಕಪತ್ರ ಕೇಳಿದ್ದಕ್ಕೆ ಆಡಳಿತ ಮಂಡಳಿಯವರಿಂದ ವ್ಯಕ್ತಿಗೆ ಹಲ್ಲೆ

ಕಾರ್ಕಳ:ದೇವಸ್ಥಾನದ ಆಡಳಿತ ಮಂಡಳಿಯವರು ಅವ್ಯವಹಾರ ಮಾಡಿದ್ದಾರೆ ಎಂದು ಲೆಕ್ಕಪತ್ರ ಕೇಳಿದ ವ್ಯಕ್ತಿಗೆ ಆಡಳಿತ ಮೊಕ್ತೇಸರ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸೇರಿ ಹಲ್ಲೆ ನಡೆಸಿದ ಘಟನೆ ಕಾರ್ಕಳದ ಹಿರಿಯಂಗಡಿಯಲ್ಲಿ ನಡೆದಿದೆ. ಹಿರಿಯಂಗಡಿ ನಿವಾಸಿ ಗುಣಪ್ರಕಾಶ್‌ ರಾವ್ (64) ಹಲ್ಲೆ ತೋಳ…

ಇರ್ವತ್ತೂರು:ಅಸ್ವಸ್ಥಗೊಂಡ ಬಾಣಂತಿ ಚಿಕಿತ್ಸೆ ಫಲಿಸದೇ ಸಾವು

ಕಾರ್ಕಳ:ಹೆರಿಗೆಯಾದ ಕೇವಲ ಒಂದೇ ವಾರದಲ್ಲಿ ಬಾಣಂತಿ ಮಹಿಳೆ ಮಗುವಿನೊಂದಿಗೆ ತವರು ಮನೆಗೆ ಹೋದ ಒಂದೇ ವಾರದಲ್ಲಿ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಿಸದೇ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಇರ್ವತ್ತೂರು ಜಂಗರಬೆಟ್ಟು‌ ಎಂಬಲ್ಲಿ ನಡೆದಿದೆ. ಸಂಪ್ರೀತಾ (34) ಎಂಬವರು ಮೃತಪಟ್ಟ ಬಾಣಂತಿ.…

ಚಾರ:ಪತ್ನಿಗೆ ಗಂಡನ ಮನೆಯವರ ಕಿರುಕುಳಕ್ಕೆ ಟ್ವಿಸ್ಟ್: ತಂಡ ಕಟ್ಟಿಕೊಂಡು ಗಂಡ ಹಾಗೂ ಅತ್ತೆಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಸೊಸೆ! : ನಗದು ಹಾಗೂ ಚಿನ್ನಾಭರಣ ದೋಚಿ ಎಸ್ಕೇಪ್

ಹೆಬ್ರಿ: ಗಂಡ ಹಾಗೂ ಅತ್ತೆಯ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾರ ಗ್ರಾಮದ ವಿವಾಹಿತೆ ಕಾವೇರಿ ಎಂಬವರು ಹೆಬ್ರಿ ಪೊಲೀಸ್ ಠಾಣೆಗೆ ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ,ಮಾನಸಿಕ ಕಿರುಕುಳದ ಆರೋಪ ನೀಡಿರುವ ಪ್ರಕರಣದ ಕುರಿತಂತೆ ಈ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್…

ರೇವ್ ಪಾರ್ಟಿಯಲ್ಲಿ ಡ್ರಗ್ಸ್ ದಂಧೆ ಕೇಸ್:ಹೇಮಾಗೆ ಜೂ 14ರವರೆಗೆ ನ್ಯಾಯಾಂಗ ಬಂಧನ : ಬಂಧನ ಬಳಿಕ ಮಾಧ್ಯಮದ ಮುಂದೆ ಹೇಮಾ ಹೈಡ್ರಾಮ

ಬೆಂಗಳೂರು: ಕಳೆದ ಎರಡು ವಾರಗಳ ಹಿಂದಷ್ಟೇ ನಗರದ ರೆಸಾರ್ಟ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ನಶೆ ಏರಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟ ಬಳಿಕ ಈ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ತೆಲುಗು ನಟಿ ಹೇಮಾ ಹಾಜರಾಗಿದ್ದರು. ವಿಚಾರಣೆ ಮುಗಿಸಿದ ಸಿಸಿಬಿ ಪೊಲೀಸರು,ಅವರನ್ನು…

ಈದು ಗ್ರಾಮದಲ್ಲಿ ಯುವಕರ ದಾಂಧಲೆ: ಪೂರ್ವದ್ವೇಷದ ಹಿನ್ನೆಲೆಯಲ್ಲಿ ತಂಡದಿಂದ ಯುವಕನಿಗೆ ಕೊಲೆ ಬೆದರಿಕೆ

ಕಾರ್ಕಳ: ಕಳೆದ ಎರಡು ತಿಂಗಳ ಹಿಂದೆ ಇಬ್ಬರು ಯುವಕರ ನಡುವೆ ನಡೆದ ಜಗಳದ ವಿಚಾರವನ್ನೇ ನೆಪವಾಗಿರಿಸಿದ ಯುವಕರ ತಂಡವು ಇನ್ನೋರ್ವ ಯುವಕನಿಗೆ ದಾರಿಯಲ್ಲಿ ಅಡ್ಡಗಟ್ಟಿ ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಮಂಗಳಾಫಾರ್ಮ್ ಎಂಬಲ್ಲಿ ಶನಿವಾರ…