Category: ಅಪರಾಧ

ಮಿಯ್ಯಾರು : ಎಲೆಕ್ಟ್ರಿಕಲ್ ಸರ್ವಿಸ್ ಅಂಗಡಿಯಿಂದ ಸಾವಿರಾರು ರೂ. ಮೌಲ್ಯದ ಸೊತ್ತುಗಳು ಕಳವು

ಕಾರ್ಕಳ: ತಾಲೂಕಿನ ಮಿಯ್ಯಾರಿನಲ್ಲಿ ಎಲೆಕ್ಟ್ರಿಕಲ್ ಸರ್ವಿಸ್ ಅಂಗಡಿಯಿಂದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ. ಮಿಯ್ಯಾರು ಜೋಡುಕಟ್ಟೆ ಕೊಂಕಣ್ ಕಾಂಪ್ಲೆಕ್ಸ್ ನಲ್ಲಿ ರೋಹಿತ್ ಎಂಬವರಿಗೆ ಸೇರಿದ ಅನ್ನಪೂರ್ಣ ಎಲೆಕ್ಟ್ರಿಕಲ್ ಉಪಕರಣಗಳ ಸರ್ವಿಸ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಶುಕ್ರವಾರ…

ನಂದಳಿಕೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ: ಸಮುದ್ರಕ್ಕೆ ಕಲ್ಲು ಹಾಕುವ ನೆಪದಲ್ಲಿ ಲಕ್ಷಾಂತರ ರೂ ಮೌಲ್ಯದ ಭಾರೀ ಗಾತ್ರ ಶಿಲೆಕಲ್ಲುಗಳ ಲೂಟಿ: ಪೊಲೀಸರಿಂದ ಟಿಪ್ಪರ್ ಲಾರಿ ,ಹಿಟಾಚಿ ಸೀಜ್

ಕಾರ್ಕಳ: ಮಳೆಗಾಲದಲ್ಲಿ ಕಡಲುಕೊರೆತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಡಲು ಕೊರೆತ ತಪ್ಪಿಸಲು ಭಾರೀ ಗಾತ್ರದ ಕಲ್ಲು ಹಾಕಲು ಟೆಂಡರ್ ನೀಡಲಾಗುತ್ತದೆ. ಆದರೆ ಕೆಲವು ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಇದನ್ನೇ ಬಂಡವಾಳವನ್ನಾಗಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕಿ ಲಕ್ಷಾಂತರ ರೂ ಮೌಲ್ಯದ ಬೃಹತ್ ಗಾತ್ರದ…

ಬೋಳ; ಕಾಂಗ್ರೆಸ್- ಬಿಜೆಪಿ ಗ್ಯಾರಂಟಿ ಕದನ: ಉಭಯ ಕಾರ್ಯಕರ್ತರಿಂದ ದೂರು- ಪ್ರತಿದೂರು

ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವಿರುದ್ಧ ನಡೆದ ಪ್ರತಿಭಟನೆ ಇದೀಗ ಕಾರ್ಯಕರ್ತರ ಕಲಹಕ್ಕೆ ಕಾರಣವಾಗಿದ್ದು, ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ವೈಯಕ್ತಿಕ ಕಿತ್ತಾಟದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಬೋಳ ಗ್ರಾಮದ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ…

ಬೋಳ ಪಂಚಾಯತ್ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಜೀವಬೆದರಿಕೆ

ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆ ಹಾಕಿದ ಪ್ರಕರಣ ನಡೆದಿದೆ. ಬೋಳ ಗ್ರಾಮದ ನಿವಾಸಿ ರೊನಾಲ್ಡ್ ಅಲ್ಫೋನ್ಸ್ (51) ಎಂಬವರು ಶುಕ್ರವಾರ ಬೆಳಗ್ಗೆ 11:30 ರ ಸುಮಾರಿಗೆ ತಮ್ಮ ಬೈಕಿನಲ್ಲಿ ಬೋಳ…

ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಹೊಳೆನರಸೀಪುರ ಅತ್ಯಾಚಾರ ಕೇಸ್ ನಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು.…

ಮಂಗಳೂರು: ಜೈಲಿನಲ್ಲೇ ಸಹ ಕೈದಿಗೆ ಹಲ್ಲೆ, ಹಫ್ತಾ ವಸೂಲಿ! : ನಾಲ್ವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಹ ಕೈದಿಗೆ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟು ಇಪ್ಪತ್ತು ಸಾವಿರ ರೂಪಾಯಿ ಹಫ್ತಾ ವಸೂಲಿ ಮಾಡಿದ ನಾಲ್ವರು ಆರೋಪಿಗಳ ವಿರುದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೈಲು ಒಳಗಡೆಯೆ ನಡೆದ ಹಫ್ತಾ…

ಮುಂಬಯಿ ರೈಲಿನಲ್ಲಿ ಸರಣಿ ಸ್ಫೋಟ ಪ್ರಕರಣ:ಖುಲಾಸೆಗೊಂಡ 12 ಮಂದಿ ಆರೋಪಿಗಳಿಗೆ ಮತ್ತೆ ಜೈಲು: ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ

ನವದೆಹಲಿ : ಕಳೆದ 2006ರಲ್ಲಿ ಮುಂಬಯಿನಲ್ಲಿ ನಡೆದ ಭೀಕರ ಸರಣಿ ರೈಲು ಸ್ಫೋಟಗಳಲ್ಲಿ ಭಾಗಿಯಾಗಿದ್ದ 12 ಜನ ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸರಣಿ ರೈಲು ಸ್ಫೋಟದಲ್ಲಿ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ 12…

ಹೆಬ್ರಿ ಸಂತೆಕಟ್ಟೆ ಹೊಟೇಲ್’ನಲ್ಲಿ ಹೊಡೆದಾಟ,ಜಾತಿ ನಿಂದನೆ ಪ್ರಕರಣ: ನಾಲ್ವರು ಆರೋಪಿಗಳ‌ ಬಂಧನ

ಹೆಬ್ರಿ, ಜು.23: ಹೆಬ್ರಿಯ ಕಳ್ತೂರು ಸಂತೆಕಟ್ಟೆಯ ಸಿರಿ ಮುಡಿ ಹೊಟೇಲಿನಲ್ಲಿ ಜು.20ರಂದು ನಡೆದ ವ್ಯಕ್ತಿಯೊಬ್ಬನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೌಡಿ ಶೀಟರ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್‌ಗಳಾದ ಶ್ರೀಕಾಂತ್ ಕುಲಾಲ್…

ಕಾರ್ಕಳ: ಮರದ ತುಂಡು ಮೈಮೇಲೆ ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತ್ಯು

ಕಾರ್ಕಳ: ಕೆಲಸ ಮಾಡುತ್ತಿದ್ದ ವೇಳೆ ಮೈಮೇಲೆ ಮರದ ತುಂಡು ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಾರ್ಕಳದ ಕೆದಿಂಜೆಯಲ್ಲಿ ನಡೆದಿದೆ. ಕೆದಿಂಜೆಯ ಗಣೇಶ್ ಅವರು ವಾಸು ಎಂಬವರ ಬಳಿ ಟಿಂಬರ್ ಕೆಲಸ ಮಾಡುತ್ತಿದ್ದು, ಜುಲೈ 19 ರಂದು ಕೌಡೂರಿನಲ್ಲಿ ಕೆಲಸ ಮಾಡುತ್ತಿದ್ದ…

ನೀರೆ: ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿ ಮೃತ್ಯು

ಕಾರ್ಕಳ: ಕಳೆದ 30 ವರ್ಷಗಳ ಹಿಂದೆ ಮನೆಯನ್ನು ತೊರೆದು ಕಾರ್ಕಳ ತಾಲೂಕಿನ ನೀರೆ ಪರಿಸರದಲ್ಲಿ ಭಿಕ್ಷಾಟನೆ ಮಾಡಿಕೊಂಡಿದ್ದ ವ್ಯಕ್ತಿ ಅಸೌಖ್ಯದಿಂದ ಮೃತಪಟ್ಟಿದ್ದಾರೆ. ಹೆಬ್ರಿ ಗ್ರಾಮದ ಮುದ್ರಾಡಿಯ ಕೃಷ್ಣ (56ವ) ಎಂಬವರು 30 ವರ್ಷಗಳ ಹಿಂದೆ ತಮ್ಮ ಮನೆಯನ್ನು ಬಿಟ್ಟು ನೀರೆಯಲ್ಲಿ ಭಿಕ್ಷಾಟನೆ…