Category: ಅಪರಾಧ

ಕಾರ್ಕಳ: ಅಕ್ರಮ ಕಸಾಯಿಖಾನೆಗೆ ಗೋವುಗಳನ್ನು ಮಾರಾಟ ಮಾಡಿದ್ದಾತನ ಬಂಧನ

ಕಾರ್ಕಳ, ಡಿ.10: ಕಾರ್ಕಳ ತಾಲೂಕಿನ ನಲ್ಲೂರಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯಲ್ಲಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿ ಆಶ್ರಫ್ ಆಲಿ ಎಂಬಾತನ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ ಇದೀಗ ಅಕ್ರಮ ಕಸಾಯಿಖಾನೆಗೆ ಗೋವುಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ನಲ್ಲೂರಿನ…

ಶಿರ್ಲಾಲು: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ಕಾರ್ಕಳ, ಡಿ.10: ಅಡಿಕೆ ಕೊಯ್ಯಲು ಮರ ಹತ್ತಿದ್ದ ವ್ಯಕ್ತಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿರ್ಲಾಲಿನಲ್ಲಿ ನಡೆದಿದೆ. ಕೆರ್ವಾಶೆಯ ನಾರಾಯಣ ಆರ್ ಮೃತಪಟ್ಟ ದುರ್ದೈವಿ. ನಾರಾಯಣ ಅವರು ತೆಂಗಿನಕಾಯಿ ಹಾಗೂ ಅಡಿಕೆ ಕೊಯ್ಯುವ ಕೆಲಸ ಮಾಡಿಕೊಂಡಿದ್ದು, ಡಿ.09 ರಂದು ಶಿರ್ಲಾಲಿನ…

ಉಡುಪಿ: ಅಕ್ರಮ ಬಾಂಗ್ಲಾ ವಲಸಿಗರಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​

ಉಡುಪಿ,ಡಿ.10: ಉಡುಪಿಯ ಮಲ್ಪೆಯಲ್ಲಿ ಬಂಧಿತರಾಗಿದ್ದ 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿದೆ. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದಿದ್ದ ಹಕೀಮ್​ ಆಲಿ,…

ಚಿಕ್ಕಮಗಳೂರು: ಕಾಂಗ್ರೆಸ್‌ ಮುಖಂಡನ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಎಫ್‌ಐಆರ್‌ ದಾಖಲು

ಚಿಕ್ಕಮಗಳೂರು, ಡಿ,09: ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಡಿ.5 ರಂದು ರಾತ್ರಿ ನಡೆದ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯಾದ ಗಣೇಶ್ ಗೌಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ದತ್ತಜಯಂತಿಗೆ ಅಳವಡಿಸಿದ್ದ ಬ್ಯಾನರ್‌ ತೆರವು ವೇಳೆ…

ಬೋಳ: ಬೀಗ ಹಾಕಿದ್ದ ಮನೆಗೆ ನುಗ್ಗಿ ಕಳವು

ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ಎಂಬಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು ರೂ.12,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ. ಸೆಲಿನ್ ಡಿಸೋಜ ಅವರ ಅನಾರೋಗ್ಯದ ಹಿನ್ನಲೆ ನ.30 ರಂದು ಅವರ ಮಗಳು ಮನೆಗೆ ಬೀಗ…

ಮುನಿಯಾಲು: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಹೆಬ್ರಿ,ಡಿ.08: ಕಳೆದ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುನಿಯಾಲು ಮುಟ್ಲುಪಾಡಿ ನಿವಾಸಿ ಕಾಳು ನಾಯ್ಕ್ (79ವ) ಎಂಬವರು ನಿನ್ನೆ (ಭಾನುವಾರ) ಶವವಾಗಿ ಪತ್ತೆಯಾಗಿದ್ದಾರೆ. ಅವರು ಈ ಹಿಂದೆಯೂ ಹಲವು ಬಾರಿ ಮನೆಯಿಂದ ಹೋದವರು 2-3 ದಿನ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದರು. ಆದರೆ…

ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರದಲ್ಲಿ ಗಲಾಟೆ: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಚಿಕ್ಕಮಗಳೂರು, ಡಿ.06: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ‌. ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಅವರನ್ನು ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ…

ಈದು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಕಾರ್ಕಳ: ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಈದು ಕಂಠಾವು ನಿವಾಸಿ ಗಂಗಯ್ಯ ದೇವಾಡಿಗ ಮೃತಪಟ್ಟವರು. ಗಂಗಯ್ಯ ಅವರು ಆರು ತಿಂಗಳ ಹಿಂದೆ ಹೊಟ್ಟೆನೋವು ಮತ್ತು ಮಲವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ…

ಕಾರ್ಕಳ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಕಳವು

ಕಾರ್ಕಳ, ಡಿ.04: ತಾಲೂಕಿನ ಕಸಬಾ ಗ್ರಾಮದ ಆನೆಕೆರೆ ಬಸದಿ ಬಳಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಸ್ಕೂಟರನ್ನು ಕಳ್ಳರು ಕಳವುಗೈದಿರುವ ಘಟನೆ ಡಿ.1 ರಂದು ನಡೆದಿದೆ. ಜಾರ್ಕಳ ಮುಂಡ್ಲಿಯ ಗುಣಕರ ಶೆಟ್ಟಿ ಎಂಬವರು ಡಿ.1 ರಂದು ಬೆಳಿಗ್ಗೆ 8.20 ರ ವೇಳೆಗೆ…

ದೆಹಲಿ ಸ್ಫೋಟಕ್ಕೂ ಪರಪ್ಪನ ಅಗ್ರಹಾರಕ್ಕೂ ಲಿಂಕ್ ಶಂಕೆ: ತನಿಖೆ ಚುರುಕುಗೊಳಿಸಿದ ಎನ್ಐಎ

ಬೆಂಗಳೂರು , ಡಿ.04: ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಎನ್ಐಎ ತೀವೃಗೊಳಿಸಿದ್ದು, ಇದೀಗ ಈ ಬ್ಲಾಸ್ಟ್​ಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೂ ಲಿಂಕ್ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಎನ್​​​ಐಎ ಅಧಿಕಾರಿಗಳು ಜೈಲಿಗೆ…