Category: ಸ್ಥಳೀಯ ಸುದ್ದಿಗಳು

ಕಾರ್ಕಳದಲ್ಲಿ ಮನೆಯಲ್ಲಿ ಅಕ್ರಮ ಮದ್ಯ ದಾಸ್ತಾನು: ಸಿದ್ದರಾಮಯ್ಯನವರ ಮುಂದಿನ ಗ್ಯಾರಂಟಿ ಮನೆಮನೆಗೆ ಬಾರ್ ಭಾಗ್ಯವೇ?: ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಪ್ರಶ್ನೆ

ಉಡುಪಿ: ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತದ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೆತ್ತಲೂ ನೈತಿಕತೆ ಇಲ್ಲದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ‘ಮನೆ ಮನೆಗೆ ಬಾರ್ ಭಾಗ್ಯವೇ’…

ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ನರೇಂದ್ರ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ:ಉಡುಪಿ ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಕರಾವಳಿ ಜನತೆಗೆ ಹೆಮ್ಮೆಯ ಪಾಲಿಗೆ ಸದಾ ಹೆಮ್ಮೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತ ನಿರ್ಮಾಣಕ್ಕಾಗಿ ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ…

ಹೆಬ್ರಿ: ಮದ್ಯದ ಬಾಟಲು ತೆಗೆಯುವ ವೇಳೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ: ಚಿಕಿತ್ಸೆ ಫಲಿಸದೆ ಮೃತ್ಯು

ಹೆಬ್ರಿ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಸೆಲ್ಫ್ ನಲ್ಲಿದ್ದ ಮದ್ಯದ ಬಾಟಲು ತೆಗೆಯುವ ವೇಳೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶಿವಪುರದ ಸತೀಶ್(37) ಮೃತಪಟ್ಟವರು. ಸತೀಶ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ವಿಪರೀತ ಮದ್ಯಪಾನದ ಚಟ ಹೊಂದಿದ್ದರು. ಅವರಿಗೆ ವೈದ್ಯರು ಅರೋಗ್ಯದ…

ಅಂಡಾರು: ನ. 15ರಂದು ಅಡಿಕೆ, ಕಾಳುಮೆಣಸು ರೋಗ ನಿರ್ವಹಣೆ ವಿಚಾರ ಸಂಕಿರಣ

ಕಾರ್ಕಳ: ತೋಟಗಾರಿಕೆ ಇಲಾಖೆ ಕಾರ್ಕಳ, ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘ, ಗ್ರಾಮ ಪಂಚಾಯತ್ ವರಂಗ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಅಂಡಾರು ಇವರ ಸಯುಕ್ತ ಆಶ್ರಯದಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಲ್ಲಿ ಸಮಗ್ರ ರೋಗ ಹಾಗೂ ಕೀಟ ನಿರ್ವಹಣೆ ಕುರಿತ…

ಜ್ಞಾನಸುಧಾ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ: ಎನ್.ಎಸ್.ಎಸ್ ಶಿಬಿರಗಳು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿ – ಡಾ.ಗಣೇಶ ಪೂಜಾರಿ

ಕಾರ್ಕಳ: ರಾಷ್ಟçದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿಯಾಗಿದೆ, ಆ ಮೂಲಕ ವಿದ್ಯಾರ್ಥಿಗಳಿಗೆ ಶಿಬಿರಗಳು ಗ್ರಾಮೀಣ ಬದುಕಿನ ಸೊಗಡನ್ನು ಬಿಚ್ಚಿಟ್ಟು ಶೈಕ್ಷಣಿಕ ಬದುಕಿಗೆ ಹೊಸ ರೂಪ ಕೊಡುತ್ತಿದೆ. ನನ್ನ ವಿದ್ಯಾರ್ಥಿ ಜೀವನದಲ್ಲೂ ಎನ್.ಎಸ್.ಎಸ್. ನಲ್ಲಿ ತೊಡಗಿಸಿಕೊಂಡ ಸ್ವ ಅನುಭವದಿಂದ…

ರಂಗಭೂಮಿ ಕಲಾವಿದ ವಿ.ಅರ್.ಸತೀಶ್ ಆಚಾರ್ಯ ವರಂಗ ಅವರಿಗೆ ಅಂತರಾಷ್ಟ್ರೀಯ ಸುವರ್ಣ ಮಹೋತ್ಸವ ಪುರಸ್ಕಾರ

ಹೆಬ್ರಿ: ರಂಗಭೂಮಿ ಕಲಾವಿದ ವಿ.ಆರ್ ಸತೀಶ್ ಆಚಾರ್ಯ ವರಂಗ ಅವರು ಬೆಳಗಾವಿಯ ಕಸ್ತೂರಿ ಸಿರಿ ಗನ್ನಡ ವೇದಿಕೆ (ರಿ) ಕೊಡಮಾಡುವ ಅಂತರಾಷ್ಟ್ರೀಯ ಮಟ್ಟದ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಹೆಬ್ರಿ ತಾಲೂಕಿನ ವರಂಗ ಗ್ರಾಮದ ವಿ ಅರ್ ಸತೀಶ್ ಆಚಾರ್ಯ ಅವರು…

ಉಡುಪಿ: ಗ್ರಾಮ ಪಂಚಾಯತ್ ಉಪಚುನಾವಣೆ : ಮತದಾನ ಕೇಂದ್ರಗಳ  100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ  ಆದೇಶ

ಉಡುಪಿ: ಗ್ರಾಮ ಪಂಚಾಯತ್‌ಗಳ ಸಾರ್ವತ್ರಿಕ ಉಪ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಮುಂತಾದ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮೂಲಕ ಭರ್ತಿ ಮಾಡಲು ಕುಂದಾಪುರ ತಾಲೂಕಿನ ಅಮಾಸೆಬೈಲು, ಬ್ರಹ್ಮಾವರ ತಾಲೂಕಿನ ಕೋಟ, ಉಡುಪಿ…

ಅಜೆಕಾರು: ಬ್ರಾಹ್ಮಣ ಸಂಘದ ವತಿಯಿಂದ ಸಂಕೀರ್ತನೆ ಭಜನೆ

ಹೆಬ್ರಿ : ಅಜೆಕಾರು ವಲಯ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಪ್ರತಿ ವರ್ಷದಂತೆ, ಕಾರ್ತಿಕ ಮಾಸದ ಸಂಕೀರ್ತನೆ, ಭಜನೆ, ಶೋಭಾನೆ, ಅಷ್ಟಾವಧಾನ ಕಾರ್ಯಕ್ರಮವು, ಅಜೆಕಾರು ಗುಡ್ಡೆಅಂಗಡಿ ಹರಿವಾಯು ಕೃಪಾದಲ್ಲಿ ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಇವರ ನೇತೃತ್ವದಲ್ಲಿ…

ಕಾರ್ಕಳ ಟೈಗರ್ಸ್ ವತಿಯಿಂದ ಜನಸಂಪರ್ಕ ಅಭಿಯಾನ

ಕಾರ್ಕಳ : ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಭಾರತಿ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಕಾರ್ಕಳದ ಬಿ. ಆರ್. ಸಿ ಯಲ್ಲಿ…

ನಿಟ್ಟೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರೀಯ ಪದವಿಪೂರ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆ

ಕಾರ್ಕಳ: ತುಮಕೂರಿನಲ್ಲಿ ನವೆಂಬರ್ 8 ರಿಂದ 10 ರವರೆಗೆ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿ ರಾಘವೇಂದ್ರ ನಾಯಕ್ 19 ವರ್ಷದೊಳಗಿನವರ ಜಾವೆಲಿನ್ ಥ್ರೋನಲ್ಲಿ…