ಹೆಬ್ರಿ: ರಂಗಭೂಮಿ ಕಲಾವಿದ ವಿ.ಆರ್ ಸತೀಶ್ ಆಚಾರ್ಯ ವರಂಗ ಅವರು ಬೆಳಗಾವಿಯ ಕಸ್ತೂರಿ ಸಿರಿ ಗನ್ನಡ ವೇದಿಕೆ (ರಿ) ಕೊಡಮಾಡುವ ಅಂತರಾಷ್ಟ್ರೀಯ ಮಟ್ಟದ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಹೆಬ್ರಿ ತಾಲೂಕಿನ ವರಂಗ ಗ್ರಾಮದ ವಿ ಅರ್ ಸತೀಶ್ ಆಚಾರ್ಯ ಅವರು ರಂಗಭೂಮಿ ಹಾಗೂ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ನಾಮಕರಣದ ಸುವರ್ಣ ವರ್ಷಾಚರಣೆಯ ಅಂಗವಾಗಿ ಕಸ್ತೂರಿ ಸಿರಿ ಗನ್ನಡ ವೇದಿಕೆ (ರಿ) ಬೆಳಗಾವಿಯವರು ಆಯೋಜಿಸಿರುವ ಸುವರ್ಣ ಮಹೋತ್ಸವ ಹಾಗೂ ಗೌರವ ಪುರಸ್ಕಾರ ಪ್ರಧಾನ ಸಮಾರಂಭದ ಪ್ರಯುಕ್ತ ನ. 17 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಅಧ್ಯಕ್ಷರಾದ ಕವಿತ ಕರ್ಮಮಣಿ ಅವರು ತಿಳಿಸಿದ್ದಾರೆ.