Category: ಸ್ಥಳೀಯ ಸುದ್ದಿಗಳು

ಕಾರ್ಕಳ: ಮಹಿಳೆಯ ಚಿನ್ನಾಭರಣ ಅಡವಿರಿಸಿ ವಂಚನೆ

ಕಾರ್ಕಳ: ಮಹಿಳೆಯೊಬ್ಬರನ್ನು ನಂಬಿಸಿ ಚಿನ್ನಾಭರಣ ಪಡೆದು ಅಡವಿರಿಸಿ ಹಣ ಪಡೆದು ಬಳಿಕ ಮಹಿಳೆಗೆ ಚಿನ್ನಾಭರಣಗಳನ್ನು ಬಿಡಿಸಿ ಕೊಡದೆ ವಂಚನೆ ಎಸಗಿರುವ ಪ್ರಕರಣ ನಡೆದಿದೆ. ಕಾರ್ಕಳ ಹಿರ್ಗಾನ ಗ್ರಾಮದ ನಿವಾಸಿಗಳಾದ ಸಯ್ಯದ್ ಯುನೀಸ್ ಹಾಗೂ ಸಯ್ಯದ್ ಸುಹೇಲ್ ಎಂಬವರು ಕಸಬಾ ಗ್ರಾಮದ ರುಭೀನಾ…

ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ 25 ಭಜನಾ ಮಂಡಳಿಗಳಿಗೆ 2.5 ಲಕ್ಷ ರೂ. ಸಹಾಯಧನ ವಿತರಣೆ

ಕಾರ್ಕಳ, ನ.06: ಕಾರ್ಕಳದ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ 25 ಭಜನಾ ಮಂಡಳಿಗಳ ಸದಸ್ಯರಿಗೆ ಸಮವಸ್ತ್ರಕ್ಕಾಗಿ ತಲಾ 10,000 ರೂ. ಸಹಾಯಧನ ಹಸ್ತಾಂತರಿಸುವ ಕಾರ್ಯಕ್ರಮವು ಕಾರ್ಕಳ ಗಾಂಧಿ ಮೈದಾನದಲ್ಲಿ ನವೆಂಬರ್ 4ರಂದು ನಡೆಯಿತು. ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರು…

ಬೆಳ್ಮಣ್: ಪಾದಾಚಾರಿ ಮತ್ತು ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು: ಪಾದಾಚಾರಿ ಸಾವು, ಕಾರಿನಲ್ಲಿದ್ದ ಐವರಿಗೆ ಗಾಯ

ಕಾರ್ಕಳ: ತಾಲೂಕಿನ ಬೆಳ್ಮಣ್ ಗ್ರಾಮದ ಅರಣ್ಯ ಇಲಾಖೆಯ ಕಛೇರಿ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಅತೀವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ, ಬಳಿಕ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದ್ದು, ಕಾರು ಡಿಕ್ಕಿಯಾದ ಪಾದಾಚಾರಿ ವ್ಯಕ್ತಿ…

ಕ್ರಿಯೇಟಿವ್ ಕನ್ನಡ ಸಾಹಿತ್ಯ ಸಂಘ : ಡಾ. ಪಾದೆಕಲ್ಲು ವಿಷ್ಣು ಭಟ್ಟರಿಂದ ಸಾಹಿತ್ಯ ಸ್ಫೂರ್ತಿ

ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ನೂತನ ಪಯಣಕ್ಕೆ ಚಾಲನೆಯ ರೂಪದಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ರಚಿಸಲಾಯಿತು. ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆಗೆ ಆಗಮಿಸಿದ ವಿದ್ವಾಂಸರು, ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೆಕಲ್ಲು ವಿಷ್ಣು ಭಟ್ಟರು…

ಕಾಡುಪ್ರಾಣಿಗಳ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ: ಶ್ರೀಧರ ಗೌಡ ಈದು

ಕಾರ್ಕಳ: ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮಘಟ್ಟದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಹಾಗೂ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ನಾಡ್ಪಲು ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಕಾಡುಪ್ರಾಣಿಗಳ ಹಾವಳಿಯಿಂದ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ನಾಡ್ಪಾಲು ಹಾಗೂ ಸುತ್ತಮುತ್ತಲಿನ ಹಲವು ತೋಟಗಳಿಗೆ ಆನೆಗಳು ನುಗ್ಗಿ…

ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪೂರ್ತಿ ಮಾತು 12ನೇ ಸರಣಿ ಕಾರ್ಯಕ್ರಮ: ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢನಿಶ್ಚಯ ಮುಖ್ಯ : ಎನ್.ಆರ್.ದಾಮೋದರ ಶರ್ಮ

ಕಾರ್ಕಳ,ನ.05: ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮವು ನ.3ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿ ಎನ್.ಆರ್. ದಾಮೋದರ ಶರ್ಮ ರವರು ‘ಬೆಳಕಾಗಲಿ ಬಾಳು’ ಶೀರ್ಷಿಕೆಯಡಿಯಲ್ಲಿ ಮಾತನಾಡಿ, “ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ…

ಮಾಳ : ತೋಡಿಗೆ ಬಿದ್ದು ವ್ಯಕ್ತಿ ಸಾವು

ಕಾರ್ಕಳ: ತಾಲೂಕಿನ ಮಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ‌ಮೃತಪಟ್ಟಿದ್ದಾರೆ. ಮಾಳ ಗ್ರಾಮದ ಕನೆಗುಂಡಿ ಶ್ಯಾಮ ಮೇರ ಮೃತಪಟ್ಟವರು. ಅವರು ನ.4 ರಂದು ಕೃಷಿ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.

ನಾಳೆ(ನ.05ರಂದು) ಕಾರ್ಕಳದಲ್ಲಿ ಉಡುಪಿ ತೆರಿಗೆ ಪಾವತಿದಾರರ ಹಾಗೂ ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಶುಭಾರಂಭ

ಕಾರ್ಕಳ, ನ.04: ದಿ.ಉಡುಪಿ ತೆರಿಗೆ ಪಾವತಿದಾರರ ಹಾಗೂ ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಇದರ ಶಾಖೆಯ ನೂತನ ಕಚೇರಿಯು ನಾಳೆ (ನ.05ರಂದು)ಕಾರ್ಕಳದ ಸ್ಟೇಟ್ ಬ್ಯಾಂಕ್ ಬಳಿಯ ಶ್ರೀಕೃಷ್ಣ ಟವರ‍್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಸಂಜೆ 4 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ನೂತನ…

ಗುಡ್ಡಗಾಡು ಓಟದ ಸ್ಪರ್ಧೆ :ಕಾರ್ಕಳ ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯೆ

ಗಣಿತನಗರ :ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವಕಾಲೇಜು ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಥಮ ಪಿಯುಸಿಯ ಶ್ರೀಶಾಂತ್…

ಬೆಳೆ ಸಾಲಗಳಿಗೆ ಮಾರ್ಜಿನ್ ಹಣ ಕಡಿತ : ಮಾರ್ಜಿನ್ ಹಣ ಏರಿಸಲು ಸಹಕಾರ ಭಾರತಿ ಅಗ್ರಹ

ಕಾರ್ಕಳ, ನ.04: ರೈತರಿಗೆ ನೀಡುವ ಬೆಳೆ ಸಾಲ ಮದ್ಯಮಾವಧಿ ಸಾಲಗಳ ವ್ಯವಹಾರದಲ್ಲಿ ಬಡ್ಡಿಯ ಮಾರ್ಜಿನ್ ಹಣ 3% ರಷ್ಟನ್ನು ರಾಜ್ಯ ಸರ್ಕಾರ 2015 – 16 ರ ವರೆಗೆ ನೀಡುತ್ತಾ ಬಂದಿದ್ದು, ಇದರಿಂದ ಸಹಕಾರ ಸಂಘಗಳಿಗೆ ಬಹಳ ಅನುಕೂಲವಾಗಿತ್ತು. ತದನಂತರದ ವರ್ಷಗಳಲ್ಲಿ…