Category: ರಾಜ್ಯ

ವಸತಿ ಯೋಜನೆಯ ಕುರಿತು ಸಿಎಂ ನೇತೃತ್ವದಲ್ಲಿ ಸಭೆ: ಮುಂದಿನ ಮಾರ್ಚ್’ನೊಳಗೆ 1.60 ಲಕ್ಷ ಮನೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಗಡುವು ನೀಡಿದ ಸಿಎಂ

ಬೆಂಗಳೂರು,ಡಿ.30: ಮುಂದಿನ ಮಾರ್ಚ್ ಅಂತ್ಯದೊಳಗೆ ರಾಜ್ಯಾದ್ಯಂತ ವಸತಿ ಇಲಾಖೆಯ ವಿವಿಧ ಯೋಜನೆಗಳಡಿ ನಿರ್ಮಿಸುತ್ತಿರುವ 1.60 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು, ಜತೆಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ 52,189 ಮನೆಗಳ ನಿರ್ಮಾಣವನ್ನು ಸರ್ಕಾರದ ಹಣದಿಂದಲೇ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ…

ಶಾಸಕ ಯತ್ನಾಳ್ ಸತ್ಯಾಂಶದ ಆರೋಪಕ್ಕೆ ಬಿಜೆಪಿಗೆ ನಡುಕ : ಸಚಿವ ಎಂ.ಬಿ ಪಾಟೀಲ್ ಲೇವಡಿ

ಬೆಂಗಳೂರು: ಬಿಜೆಪಿಯ ಬಸನಗೌಡ ಪಾಟೀಲ‌ ಯತ್ನಾಳ್ ಅವರು ತಮ್ಮ ಪಕ್ಷದ ವಿರುದ್ಧವೇ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದರೂ ಆ ಪಕ್ಷದವರು ಕ್ರಮಕೈಗೊಳ್ಳದೇ ಇರುವುದನ್ನು ನೋಡಿದರೆ ಅವರ ಆರೋಪಗಳಲ್ಲಿ ಸತ್ಯಾಂಶವಿರಬಹುದು ಎಂದು ಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದ್ದಾರೆ. ಯತ್ನಾಳ್ ಅವರು ಕಾಂಗ್ರೆಸ್ ಏಜೆಂಟ್…

ವಿದ್ಯುತ್ ಅವಘಡಗಳಿಂದ ಅಮಾಯಕರ ಸಾವಿಗೆ ಇಂಧನ ಸಚಿವರೇ ನೇರ ಹೊಣೆಗಾರರು: ಬಿಜೆಪಿ ಮುಖಂಡ ಸುನೀಲ್‍ಕುಮಾರ್ ಆರೋಪ

ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನಲ್ಲಿ ಪದೇಪದೇ ವಿದ್ಯುತ್ ಅವಘಡಗಳು ಸಂಭವಿಸಿ ಜನರು ಸಾವನ್ನಪ್ಪುತ್ತಿದ್ದು ಇದು ಅತ್ಯಂತ ಖಂಡನೀಯ, ಇದಕ್ಕೆ ಬೇಜವಾಬ್ದಾರಿ ಇಂಧನ ಇಲಾಖೆಯ ಸಚಿವರೇ ನೇರ ಹೊಣೆಗಾರರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸುನೀಲ್‍ಕುಮಾರ್ ಆರೋಪಿಸಿದ್ದಾರೆ. ಈ…

ಕತಾರ್ ಜತೆಗೆ ರಾಜತಾಂತ್ರಿಕ ಮಾತುಕತೆಯಲ್ಲಿ ಭಾರತಕ್ಕೆ ಭಾರೀ ಯಶಸ್ಸು! ಗಲ್ಲು ಶಿಕ್ಷೆಯಿಂದ ಪರಾದ ಭಾರತೀಯ ನೌಕಾಪಡೆಯ ಮಾಜಿ ಯೋಧರು: ಮರಣದಂಡನೆ ಬದಲು ಜೈಲು ಶಿಕ್ಷೆ

ನವದೆಹಲಿ: ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಸಿಬಂದಿಗಳಿಗೆ ಜೀವದಾನ ಲಭಿಸಿದ್ದು,ರಾಜತಾಂತ್ರಿಕ ಮಾತುಕತೆಯ ಮೂಲಕ ಗಲ್ಲುಶಿಕ್ಷೆಯನ್ನು ರದ್ದುಪಡಿಸಿ ಜೈಲು ಶಿಕ್ಷೆಗೆ ಇಳಿಸಲಾಗಿದೆ. ಶೃಂಗಸಭೆಯಲ್ಲಿ ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್…

ಯತ್ನಾಳ್‌ ಬಿಜೆಪಿ ಭ್ರಷ್ಟಾಚಾರದ ದಾಖಲೆ ಕೊಡಲಿ: ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು ಡಿ.29: ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂಬ ಮನಸ್ಥಿತಿ ಇದ್ದರೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ತನಿಖಾ ಆಯೋಗಕ್ಕೆ ಸಲ್ಲಿಸಲಿ…

ಕನ್ನಡಪರ ಹೋರಾಟಗಾರರ ಧ್ವನಿಯನ್ನು ದಮನಿಸಲಾಗುತ್ತಿದೆ: ಸರ್ಕಾರದ ವಿರುದ್ಧ ಮಾಜಿ ಸಚಿವ ಸುನಿಲ್ ಕುಮಾರ್ ವಾಗ್ದಾಳಿ

ಬೆಂಗಳೂರು :ಆಡಳಿತ ಭಾಷೆಯಾದ ಕನ್ನಡದ ಉಳಿವಿಗಾಗಿ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದ್ದಾರೆ.…

ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ಆರೋಪ: ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆಯನ್ನು ನಿಷೇಧಿಸಿದ ಕೇಂದ್ರ ಸರ್ಕಾರ!

ನವದೆಹಲಿ, ಡಿ.27: ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಕೊಂಡ ಆರೋಪದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಲೀಗ್ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇತ್ತೀಚೆಗೆ ನಡೆಯುತ್ತಿರುವ ಸತತ ಉಗ್ರ ದಾಳಿ ನಡೆಯುತ್ತಿದ್ದು ಈ ಕೃತ್ಯಕ್ಕೆ ಮುಸ್ಲಿಂ ಲೀಗ್ ಕುಮ್ಮಕ್ಕು ಇದೆ ಎಂದು ಆರೋಪಿಸಲಾಗಿದ್ದು,ಜತೆಗೆ ದೇಶದಲ್ಲಿ…

ಕ್ಷೇತ್ರ ಮರುವಿಂಗಡಣೆ, ಪ್ರವರ್ಗವಾರು ಮೀಸಲು ಅಂತಿಮಗೊಂಡರೂ ಆಕ್ಷೇಪಣೆಗೆ ನಿಗದಿಯಾಗಿಲ್ಲ ಕಾಲಾವಕಾಶ: ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಮತ್ತೆ ಗ್ರಹಣ?

ಬೆಂಗಳೂರು:ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಆಡಳಿತ ಅವಧಿ ಮುಕ್ತಾಯಗೊಂಡು ಸುಮಾರು 3 ವರ್ಷಗಳು ಕಳೆದಿದ್ದರೂ ಸರ್ಕಾರಗಳು ಮಾತ್ರ ಚುನಾವಣೆ ನಡೆಸುವ ಗೋಜಿಗೂ ಹೋಗಿಲ್ಲ. ಇತ್ತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವಂತೆ ಹೈಕೋರ್ಟ್…

ಸರ್ಕಾರಿ ನೌಕರರಿಗೆ ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !

ಬೆಂಗಳೂರು ಡಿ.27: ಯಾವುದೇ ಒಬ್ಬ ಸರ್ಕಾರಿ ನೌಕರ ತಾನು ಇಚ್ಛಿಸಿದ ಸ್ಥಳದಲ್ಲೇ ವರ್ಗಾವಣೆ ಕೇಳುವ ಹಕ್ಕು ಇಲ್ಲವೆಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸರ್ಕಾರಿ ಉದ್ಯೋಗಿ ನಿರ್ದಿಷ್ಟ ಹುದ್ದೆ ಅಥವಾ ನಿರ್ದಿಷ್ಟ ಸ್ಥಳಕ್ಕೆ ನಿಯೋಜನೆ ಮಾಡುವಂತೆ ಹಕ್ಕು ಸಾಧನೆ ಮಾಡಲು ಬರುವುದಿಲ್ಲ,…

ಹೈಕೋರ್ಟ್ ಸೂಚನೆ ಹಿನ್ನೆಲೆ: ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿರುವ ಸರಕು ನೌಕೆ ಪರಿಶೀಲಿಸಿದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ, ಡಿ.26: ಮಂಗಳೂರಿನ ಉಳ್ಳಾಲ ಬಟ್ಟಪಾಡಿ ಸಮೀಪ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮುಳುಗಡೆಯಾದ ಸರಕು ಸಾಗಾಟ ಹಡಗುನ್ನು ಹೈಕೋರ್ಟ್‌ ಸೂಚನೆ ಮೇರೆಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಇಂದು ಪರಿಶೀಲನೆ ನಡೆಸಿದರು. ಸರಕು ಸಾಗಾಟದ ಈ ಹಡಗು ಮುಳುಗಡೆಯಾಗಿ…