
ಕಾರ್ಕಳ,ಜು. 01: ಜೆಸಿಐ ಕಾರ್ಕಳ ರೂರಲ್ ನ ಜೂನಿಯರ್ ಜೆಸಿ ವಿಭಾಗದ ವತಿಯಿಂದ ಕಾರ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಪುರಸಭಾ ಸದಸ್ಯರಾದ ಪ್ರಕಾಶ್ ರಾವ್ ಮಾತನಾಡಿ, ಜೆ ಸಿ ಐ ಕಾರ್ಕಳ ರೂರಲ್ ನ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಮುಂದೆ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂದೀಪ್ ಪರಿಸರ ಸಂರಕ್ಷಣೆ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಇಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಘಟಕವನ್ನು ಅಭಿನಂದಿಸಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜೆ ಜೆ ಸಿ ಅಧ್ಯಕ್ಷರಾದ ದಿಯಾ ರಾಜೇಶ್ ಭಂಡಾರಿ, ಅಧ್ಯಕ್ಷರಾದ ಜೇಸಿ ಸೃಜನ್ ಪೂಜಾರಿ, ವಲಯ ಉಪಾಧ್ಯಕ್ಷರಾದ ಜೇಸಿ ಅರುಣ್ ಪೂಜಾರಿ ಮಾಂಜ , ವಲಯ ತರಬೇತಿದಾರರಾದ ಜೇಸಿ ಮೋಹನ ನಕ್ರೆ, ಪೂರ್ವಧ್ಯಕ್ಷರಾದ ಜೇಸಿ ವೀಣಾ ರಾಜೇಶ್, ಲೇಡಿ ಜೇಸಿಕೋಡಿನೇಟರ್
ಜೇಸಿ ಮಮತಾ ಸಂತೋಷ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಶ್ರೀಮತಿ ನಿರಂಜನಿ ಹಾಗೂ ಉಮೇಶ್ ರವರನ್ನು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
