Category: ರಾಜ್ಯ

ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ, ಯತ್ನಾಳ್ ವಿಪಕ್ಷ ನಾಯಕ: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಹೆಚ್.ಡಿ.ದೇವೇಗೌಡ ಹೇಳಿಕೆ!

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಪ್ರತಿಪಕ್ಷ ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎನ್ನುವ ಚರ್ಚೆಗಳು ನಡೆಯುತ್ತಲ್ಲೇ ಇವೆ. ಸರ್ಕಾರದ ಮೊದಲ ಅಧಿವೇಶನ ಮುಕ್ತಾಯಗೊಂಡರೂ ಇನ್ನೂ ವಿರೋಧ ಪಕ್ಷದ ನಾಯಕ ಯಾರು ಎನ್ನುವ ಪ್ರಶ್ನೆಯ ನಡುವೆ ಜೆಡಿಎಸ್ ವರಿಷ್ಠ…

ಗೃಹಲಕ್ಷ್ಮಿ ಅರ್ಜಿಗೆ ಸೇವಾ ಕೇಂದ್ರಗಳು ದುಡ್ಡು ಪಡೆದರೆ, ಅಸಡ್ಡೆ ತೋರಿದರೆ ಕ್ರಿಮಿನಲ್ ಕೇಸ್ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸೇವಾ ಕೇಂದ್ರಗಳು ದುಡ್ಡು ಪಡೆದರೆ ಅಥವಾ ಅಸಡ್ಡೆ ತೋರಿದರೆ ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ…

ಖಾಸಗಿ ಬಸ್‌ಗಳಿಗೂ “ಶಕ್ತಿ ಯೋಜನೆ” ವಿಸ್ತರಣೆ ಮಾಡುವಂತೆ ಮನವಿ

ಬೆಂಗಳೂರು :ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಗ್ಯಾರಂಟಿಯಾಗಿ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ಭಾರಿ ಹಿನ್ನಡೆಯಾಗಿದೆ. ಆದ್ದರಿಂದ ಎಲ್ಲ ಖಾಸಗಿ ಬಸ್‌ಗಳನ್ನೂ ಕೂಡ ಶಕ್ತಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಫೆಡರೇಶನ್ ಅಧ್ಯಕ್ಷ…

ಕರ್ನಾಟಕದ 14ಕ್ಕೂ ಅಧಿಕ ಜಿಲ್ಲೆಗಳಲ್ಲಿ ಜುಲೈ 27ರವರೆಗೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಜುಲೈ 27ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​…

ಹಿಂದೂ ಕಾರ್ಯಕರ್ತರ ಗಡಿಪಾರು ಆದೇಶ ಖಂಡನೀಯ : ಮೋಹನ ಗೌಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ಪೊಲೀಸರ ಕ್ರಮ ಖಂಡನೀಯ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಹೇಳಿದ್ದಾರೆ. ಇದು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ…

ಧರ್ಮಸ್ಥಳ:ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಕಾರಿ ವರದಿಗೆ ಕೋರ್ಟ್ ತಡೆಯಾಜ್ಞೆ

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಪಾಂಗಳದ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ಅಥವಾ ತೇಜೋವಧೆ ಮಾಡುವ ವರದಿಗಳು ಅಥವಾ ಸುದ್ದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಸೌಜನ್ಯ…

ನಂದಿನಿ ಹಾಲು ದರ 3 ರೂಪಾಯಿ ಏರಿಕೆ: ಸರ್ಕಾರದ ನಿರ್ಧಾರಕ್ಕೆ ಜನರ ಆಕ್ರೋಶ

ಬೆಂಗಳೂರು: ಕರೆಂಟ್ ಫ್ರೀ, ಬಸ್ ಫ್ರೀ, ಗೃಹಲಕ್ಷಿö್ಮ ಎಂದು ಖುಷಿಯಲ್ಲಿರುವ ಜನರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಏನೆಂದರೆ ದಿನಬಳಕೆಯ ನಂದಿನಿ ಹಾಲು ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆಯಾಗಿದೆ. ಆರ್ಥಿಕ ನಷ್ಟದ ಕಾರಣ ಹೇಳಿ ಕೆಎಂಎಫ್ ಹಾಲಿನ ದರವನ್ನ 5…

ಮದ್ಯದ ದುಬಾರಿ ದರ ಜಾರಿ: ಕರ್ನಾಟಕ ಮದ್ಯಪ್ರಿಯರ ಸಂಘ ತೀವ್ರ ವಿರೋಧ

ಬೆಂಗಳೂರು : ರಾಜ್ಯಾದ್ಯಂತ ಶುಕ್ರವಾರದಿಂದ ಮದ್ಯದ ದುಬಾರಿ ದರ ಜಾರಿಗೆ ಬಂದಿದ್ದು, ಬಾಟಲಿ ಮೇಲೆ ಶೇ.2ರಿಂದ ಶೇ.20ರವರೆಗೆ ಬೆಲೆ ಹೆಚ್ಚಳವಾಗಿದ್ದು, ಇದು ಸಹಜವಾಗಿ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ. ಬಜೆಟ್‌ನಲ್ಲಿ ಘೋಷಿಸಿದ್ದಂತೆ ಅಬಕಾರಿ ಸುಂಕವನ್ನು ಶೇ.20ರವರೆಗೆ ಹೆಚ್ಚಿಸಿರುವ ಕಾರಣದಿಂದ ಮದ್ಯದ ದರ…

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 3 ರೂ ಹೆಚ್ಚಳ: ಆಗಸ್ಟ್.1ರಿಂದಲೇ ಪರಿಷ್ಕೃತ ದರ ಜಾರಿ

ಬೆಂಗಳೂರು:ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದು ಈ ನಡುವೆ ಸರ್ಕಾರ ಇದೀಗ ನಂದಿನಿ ಹಾಲಿನ ದರ ಹೆಚ್ಚಳ ಮಾಡಿ ರಾಜ್ಯದ ಜನತೆಗೆ ಮತ್ತೆ ಶಾಕ್ ನೀಡಿದೆ. ಮುಂದಿನ ಆಗಸ್ಟ್ 1 ರಿಂದಲೇ ನೂತನ ದರ ಜಾರಿಯಾಗಲಿದ್ದು ಪ್ರತೀ…

ಗ್ಯಾರಂಟಿಗಳ ಮೂಲಕ ಮತದಾರರಿಗೆ ಆಮಿಷ: ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನ ಅಸಿಂಧು ಕೋರಿ ಹೈಕೋರ್ಟ್ ನಲ್ಲಿ ದಾವೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವಲ್ಲಿ ನೆರವಾಗಿದ್ದ ಐದು ಗ್ಯಾರಂಟಿ ಯೋಜನೆಗಳೇ ಇದೀಗ ವಿವಾದ ಸೃಷ್ಟಿಸಿದ್ದು,ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಸಿದ್ಧಪಡಿಸಿ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಹಂಚುವ ಮೂಲಕ ಆಮಿಷವೊಡ್ಡಿ ಅಧಿಕಾರ ಬಂದಿದೆ,ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರ ಶಾಸಕ ಸ್ಥಾನ…