Category: ಉಡುಪಿ

ಮುಟ್ಲುಪಾಡಿ ಮೀಸಲು ಅರಣ್ಯದಲ್ಲಿ ಹಾಡುಹಗಲೇ ಅಕ್ರಮವಾಗಿ ಲಕ್ಷಾಂತರ ರೂ ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನ: ಕಳ್ಳ ಬೇಟೆ ಕೇಂದ್ರದ ಸಮೀಪವೇ ಮರಗಳ್ಳತನ: ಅರಣ್ಯ ಇಲಾಖೆಯ ಸಿಬ್ಬಂದಿಗಳೇ ಶಾಮೀಲು?

ಕಾರ್ಕಳ, ಸೆ.12: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮುಟ್ಲುಪಾಡಿ ಪಡು ದರ್ಖಾಸು ಬಳಿಯ ಮೀಸಲು ಅರಣ್ಯದಲ್ಲಿ ದುಷ್ಕರ್ಮಿಗಳು ಶುಕ್ರವಾರ ಮುಂಜಾನೆ ಸುಮಾರು 10 ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಕಿರಾಲು ಬೋಗಿ ಹಾಗೂ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ್ದಾರೆ. ಏಕಾಎಕಿ ಕ್ರೇನ್,…

ಕಲ್ಯಾ ಗ್ರಾಮದಲ್ಲಿ ರಾತ್ರಿವೇಳೆ ಅಕ್ರಮ ಗಣಿಗಾರಿಕೆ: ಕೇರಳಕ್ಕೆ ಜಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ವಿರುದ್ಧ ಕೇಸ್  ದಾಖಲು

ಕಾರ್ಕಳ,ಸೆ .11:ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕುಂಟಾಡಿ ಬಳಿ ಕಲ್ಲಿನ ಕೋರೆಯಲ್ಲಿ ರಾತ್ರಿವೇಳೆ ಅಕ್ರಮವಾಗಿ ಸ್ಪೋಟಕ ಬಳಸಿ ಕಲ್ಲುಗಳನ್ನು ಪುಡಿ ಮಾಡಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸೈ ಪ್ರಸನ್ನ.ಎಂ.ಎಸ್ ನೇತೃತ್ವದ ಪೊಲೀಸರ ತಂಡ…

ಪಡಿತರ ಚೀಟಿಯ ಇ-ಕೆವೈಸಿಗೆ ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಜನರ ಕ್ಯೂ: ಸರ್ವರ್ ಡೌನ್ ಸಮಸ್ಯೆಯಿಂದ ಗ್ರಾಹಕರ ಪರದಾಟ

ಕಾರ್ಕಳ, ಸೆ.11:ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿದಾರರಿಗೆ ಇ-ಕೆವೈಸಿ (e-KYC)ಕಡ್ಡಾಯಗೊಳಿಸಿದೆ.ಆದರೆ ಸರ್ವರ್ ಪದೇಪದೇ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಥಂಬ್ ನೀಡಲಾಗದೇ ಪರದಾಡುವಂತಾಗಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ತಮ್ಮ ಕೆಲಸಗಳನ್ನು ಬಿಟ್ಟು ದಿನನಿತ್ಯ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಗಿದೆ. ಸರ್ಕಾರದ…

ಮನೆ ಹಂಚಿಕೆ ವಿಚಾರದಲ್ಲಿ ಶಾಸಕರ ನಿರ್ಲಕ್ಷ್ಯದ ಆರೋಪದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ನಿರ್ಧಾರ: ರಾಜಕೀಯ ಬೀದಿ ನಾಟಕ ನಿಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ: ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಸಲಹೆ

ಕಾರ್ಕಳ, ಸೆ.10: ಅಧಿಕಾರಿಗಳೊಂದಿಗೆ ಶಾಸಕರ ಮೀಟಿಂಗ್‌ ದಿನಾಂಕ ನಿಗದಿಯಾದ ತಕ್ಷಣವೇ ಕಾರ್ಕಳ ಕಾಂಗ್ರೆಸ್‌ ಮತ್ತು ಅವರ ನಾಯಕ ಉದಯ ಶೆಟ್ಟಿಯವರು ನಿದ್ದೆಯಿಂದ ಎದ್ದಂತೆ ವರ್ತಿಸುವುದು ಇದೇನು ಹೊಸತಲ್ಲ. ಜನರಿಂದ ತಿರಸ್ಕರಿಸಲ್ಪಟ್ಟ ನಾಯಕರುಗಳು ತಮ್ಮ ಅಸ್ತಿತ್ವಕ್ಕಾಗಿ ಜನಪರ ಕೆಲಸ ಮಾಡುವುದನ್ನು ಬಿಟ್ಟು ರಾಜಕೀಯ…

ಕಾರ್ಕಳ BEO ಗಿರಿಜಮ್ಮ ಹಾಗೂ ಸಮನ್ವಯಾಧಿಕಾರಿ ಇಂದಿರಾ ಭಟ್ ಅವರಿಗೆ ಸನ್ಮಾನ

ಕಾರ್ಕಳ, ಸೆ.10: ಜೇಸಿಐ ಕಾರ್ಕಳ ರೂರಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ S.R ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಇಂದಿರಾ ಭಟ್ ಅವರನ್ನು ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ JCI ರೂಲರ್ ನ ಅಧ್ಯಕ್ಷ ಜೇಸಿ…

ಮಂಗಳೂರಿನ ಸಂಪುಟದ ಸಭೆಯಲ್ಲಿ ಮಲೆಕುಡಿಯ ಸಮುದಾಯದ ಮೂಲಸೌಕಾರ್ಯಗಳಿಗೆ ಒತ್ತು ನೀಡಬೇಕು: ಶ್ರೀಧರ ಗೌಡ ಈದು

ಕಾರ್ಕಳ, ಸೆ.10: ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಹೊರತುಪಡಿಸಿ ಕರಾವಳಿಯ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ.ಕರಾವಳಿ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ಸಂಪುಟ ಮಹತ್ವದ ನಿರ್ಣಯ ಕೈಗೊಳ್ಳಬೇಕಿದೆ.ಇದರ ಜೊತೆಗೆ ಕಳೆದ ಹಲವು…

ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ: ಚಾರಿತ್ರ್ಯವಂತ ಮಕ್ಕಳೇ ಹೆತ್ತವರಿಗೆ ಆಸ್ತಿ: ಸುಮಂತ್ ಕುಮಾರ್ ಜೈನ್

ಕಾರ್ಕಳ ,ಸೆ.10: ವಿದ್ಯಾರ್ಥಿಗಳು ಉತ್ತಮ ಚಾರಿತ್ರ್ಯವನ್ನು ರೂಡಿಸಿಕೊಳ್ಳಿ, ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು ಚಾರಿತ್ರ್ಯ. ಉತ್ತಮ ಚಾರಿತ್ರ್ಯವುಳ್ಳ ಮಕ್ಕಳೇ ಹೆತ್ತವರಿಗೆ ಆಸ್ತಿ. ಇಂತಹ ಮಕ್ಕಳನ್ನು ಪಡೆದ ಪೋಷಕರೇ ಧನ್ಯರು ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹೇಳಿದರು. ಅವರು…

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಿನ್ನಲೆಯಲ್ಲಿ ಸಾರ್ವಜನಿಕರೊಂದಿಗೆ ಶಾಂತಿ ಸಭೆ

ಕಾರ್ಕಳ ,ಸೆ.10: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ನಾಲ್ಕೇ ದಿನ ಬಾಕಿಯಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಎಎಸ್ಪಿ ಇಷಿತಾ ಗುಪ್ತಾ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಶಾಂತಿ ಸಭೆ ನಡೆಯಿತು. ಗಣೇಶ…

ನಕಲಿ ವೆಬ್‌ಸೈಟ್ ಮೂಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಭಕ್ತರಿಗೆ ವಂಚನೆ: ಪ್ರಕರಣ ದಾಖಲು

ಉಡುಪಿ,ಸೆ.10: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರೂಂ ಬುಕ್ ಮಾಡುವ ಭಕ್ತರನ್ನು ವಂಚಿಸಲು ನಕಲಿ ವೆಬ್‌ಸೈಟ್ ರಚಿಸಲಾಗಿದೆ ಎಂಬ ಆರೋಪದ ಮೇಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ದೂರು ನೀಡಿದ್ದು,…

ಕಾರ್ಕಳ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ

ಕಾರ್ಕಳ,ಸೆ.10: ಕ್ರಿಯೇಟಿವ್‌ ಗ್ಲೋಬಲ್‌ ಸ್ಕೂಲ್‌ನಲ್ಲಿ ಯಶಸ್ವಿಯಾಗಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ 2026-27ನೇ ಸಾಲಿನ ಕರಾಟೆ ಸ್ಪರ್ಧೆಯು…