ನಿಟ್ಟೆ ವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ: ಜೀವನದ ಅನಿಶ್ಚಿತತೆಯನ್ನು ಪ್ರತಿಭೆ ಮತ್ತು ಸೃಜನಶೀಲತೆಯ ಎದುರಿಸಬೇಕು-ಎನ್. ವಿನಯ ಹೆಗ್ಡೆ
ಕಾರ್ಕಳ: ಪ್ರತಿಯೋರ್ವ ಮಾನವನೂ ತನ್ನ ವಿದ್ಯಾರ್ಥಿ ಜೀವನ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಎಡರುತೊಡರುಗಳು, ಅನಿಶ್ಚಿತತೆಯನ್ನು ಸಮರ್ಥವಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಮೂಲಕ ಎದುರಿಸಬೇಕು. ನಮ್ಮ ಜೀವನದ ಏಳಿಗೆಗೆ ಮಾರ್ಗದರ್ಶನ ಮಾಡಿದ ಎಲ್ಲ ಮಾರ್ಗದರ್ಶಕರನ್ನು, ಸಮಾಜವನ್ನು ಜೀವನದುದ್ದಕ್ಕೂ…
