
ಕಾರ್ಕಳ,ಏ.05: ವಿಲಾಸ್ ಕುಮಾರ್ ನಿಟ್ಟೆ ಅವರ “ಆಯೆ ಆಣ್ ಮಗೆ” ತುಳು ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ.
ತುಳು ಕೂಟ ಕುಡ್ಲದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಈ ನಾಟಕ ಪ್ರಶಸ್ತಿ ಸ್ಪರ್ಧೆಯಲ್ಲಿ “ಆಯೆ ಆಣ್ ಮಗೆ” ಎಂಬ ತುಳು ನಾಟಕ ಹಸ್ತಪ್ರತಿಯು ದ್ವಿತೀಯ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಗೆದ್ದುಕೊಂಡಿದೆ.
ವಿಲಾಸ್ ಕುಮಾರ್ ನಿಟ್ಟೆ ಅವರು ಬರೆದ ಗುತ್ತುದ ಗುರ್ಕಾರೆ, ಮುತೈಸಿ ಮದ್ಮಲ್, ತೆಲಿಕೆದ ನಲಿಕೆ, ಗಗ್ಗರ, ಅಲೆಗೇಪ ಮದ್ಮೆ ?, ಮಾತೆರ್ಲ ಬರೋಡು, ಕಂಬುಳದ ನಡುಟೊಂಜಿ ಕಥೆ, ತಮ್ಮನ, ಪನರೆ ಧೈರ್ಯಜ್ಜಿ, ಪನಂದೆ ಪೊಯೆರ್, ಬರೆಪುನಾಯೆ ಬರೆತ್ಜೆ ಮುಂತಾದ ಒಟ್ಟು ೨೦ಕ್ಕೂ ಹೆಚ್ಚು ತುಳು ನಾಟಕ ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೇ ಅವರ ಒಟ್ಟು ನಾಲ್ಕು ತುಳು ನಾಟಕಗಳು ಈ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಭಾಜನವಾಗಿವೆ.
ನಿಟ್ಟೆ ಗ್ರಾಮದ ಅತ್ತೂರು ಬಲಿಪಗುತ್ತು ಪ್ರೇಮ ಶೆಟ್ಟಿ ಮತ್ತು ಜಗನ್ನಾಥ ಶೆಟ್ಟಿ ದಂಪತಿಯ ಪುತ್ರರಾಗಿರುವ ಅವರು, ಪ್ರಸ್ತುತ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಕಾರ್ಕಳ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
















.
.
.
.
.
.
.
.
.
.
