
ಕಾರ್ಕಳ, ಆ.05: ಬೆಂಗಳೂರಿನ ಸನ್ ಕ್ರಿಯೇಶನ್ ಬೆಂಗಳೂರು ಮಾಲಕ ಪಾಂಡುರAಗ ನಾಯಕ್ ಅವರು ಕಡ್ತಲ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಉಚಿತವಾಗಿ ನೀಡಿದ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಐ.ಎ.ಎಸ್ ಅಧಿಕಾರಿ ಸದಾಶಿವ ಪ್ರಭು ಬ್ಯಾಗ್ ವಿತರಣೆ ಮಾಡಿ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸುಷ್ಮಾ, ನಿಕಟಪೂರ್ವ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸುಕೇಶ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ದಾನಿಗಳ ಸಹೋದರ ಪುರಂದರ ನಾಯಕ್, ಸಂಜೀವ ಪೂಜಾರಿ, ಮೋಹನ್ ದಾಸ್ ನಾಯಕ್, ಚಂದ್ರಕಾAತ ಹೆಗ್ಡೆ, ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿ ಶ್ವೇತಾ ಸತೀಶ್ ಹೆಗ್ಡೆ ಇವರು ಸ್ವಾಗತಿಸಿ ನಿರೂಪಿಸಿದರು. ಬಾಲವಿಕಾಸ ಸಮಿತಿಯವರು, ಮಕ್ಕಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು





.
.
.
.
.
.
.
.
.
.
.
.
.
.
.
.
.
.
.
.
